logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vaibhavi Upadhyaya Dies: ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾದ ಕಿರುತೆರೆ ನಟಿ; ಭಾವಿ ಪತಿಗೂ ಗಂಭೀರ ಗಾಯ

Vaibhavi Upadhyaya Dies: ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾದ ಕಿರುತೆರೆ ನಟಿ; ಭಾವಿ ಪತಿಗೂ ಗಂಭೀರ ಗಾಯ

May 24, 2023 10:54 AM IST

Vaibhavi Upadhyaya Dies: ಹಿಂದಿ ಕಿರುತೆರೆಯಲ್ಲಿ ಸಾರಾಭಾಯಿ ವರ್ಸಸ್‌ ಸಾರಾಭಾಯಿ (Sarabhai vs Sarabhai) ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ನಟಿ ವೈಭವಿ ಉಪಾಧ್ಯಾಯ ಮೇ 23ರಂದು ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ವೈಭವಿ, ಭಾವಿ ಪತಿ ಜತೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

  • Vaibhavi Upadhyaya Dies: ಹಿಂದಿ ಕಿರುತೆರೆಯಲ್ಲಿ ಸಾರಾಭಾಯಿ ವರ್ಸಸ್‌ ಸಾರಾಭಾಯಿ (Sarabhai vs Sarabhai) ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ನಟಿ ವೈಭವಿ ಉಪಾಧ್ಯಾಯ ಮೇ 23ರಂದು ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ವೈಭವಿ, ಭಾವಿ ಪತಿ ಜತೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ವೈಭವಿ ಉಪಾಧ್ಯಾಯ ‌ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. (Instagram/ vaibhaviupadhyaya)
(1 / 7)

'ಸಾರಾಭಾಯ್ ವರ್ಸಸ್ ಸಾರಾಭಾಯ್' ಧಾರಾವಾಹಿಯಲ್ಲಿ ಜಾಸ್ಮಿನ್‌ ಪಾತ್ರ ನಿಭಾಯಿಸಿದ್ದ ವೈಭವಿ, ಮಂಗಳವಾರ (ಮೇ 23) ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಈಗಿನ್ನೂ ಕೇವಲ 32 ವರ್ಷ. (Instagram/ vaibhaviupadhyaya)
(2 / 7)

ಹಿಮಾಚಲ ಪ್ರದೇಶದಲ್ಲಿ ಭಾವಿ ಪತಿ ಜೊತೆ ಕಾರ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. (Instagram/ vaibhaviupadhyaya) 
(3 / 7)

ತಿರುವಿನಲ್ಲಿ ಕಾರ್‌ ನಿಯಂತ್ರಣಕ್ಕೆ ಸಿಗದೆ, ಕಂದಕ್ಕೆ ಉರುಳಿದ ಪರಿಣಾಮ ವೈಭವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜತೆಗಿದ್ದ ಭಾವಿ ಪತಿ ಆರೋಗ್ಯ ಸ್ಥಿರವಾಗಿದೆ. (Instagram/ vaibhaviupadhyaya)
(4 / 7)

ಚಂಡೀಗಢದಲ್ಲಿರುವ ಅವರ ಕುಟುಂಬದವರು ವೈಭವಿ ಪಾರ್ಥಿವ ಶರೀರವನ್ನು ಮುಂಬೈಗೆ ತರುತ್ತಿದ್ದಾರೆ. ವೈಭವಿ ಅಂತ್ಯಕ್ರಿಯೆ (ಮೇ 24) ಬುಧವಾರ ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ. (Instagram/ vaibhaviupadhyaya)
(5 / 7)

ವೈಭವಿ ಸಾವಿನ ಸುದ್ದಿಯನ್ನು ಅವರ ಆಪ್ತ ಜೆಡಿ ಮಜೇಥಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. "ಜೀವನವು ತುಂಬಾ ಅನಿರೀಕ್ಷಿತ. ತುಂಬಾ ಒಳ್ಳೆಯ ನಟಿ, ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯಾಯ, ಸಾರಾಭಾಯ್ ವರ್ಸಸ್ ಸಾರಾಭಾಯ್‌ನ 'ಜಾಸ್ಮಿನ್' ಎಂದೇ ಗುರುತಿಸಿಕೊಂಡಿದ್ದರು. ಅವರು ಉತ್ತರ ಭಾರತದಲ್ಲಿ ನಡೆದ ಅಪಘಾತದಲ್ಲಿ ನಿಧನರಾದರು. ವೈಭವಿಯವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ. (Instagram/ vaibhaviupadhyaya)
(6 / 7)

ದೀಪಿಕಾ ಪಡುಕೋಣೆ ಜೊತೆಗೆ 'ಛಪಾಕ್' ಮತ್ತು 'ತಿಮಿರ್' (2023) ಚಿತ್ರಗಳಲ್ಲಿ ವೈಭವಿ ನಟಿಸಿದ್ದರು. 'ಕ್ಯಾ ಕಸೂರ್ ಹೈ ಅಮಲಾ ಕಾ' ಮತ್ತು ಡಿಜಿಟಲ್ ಸರಣಿಯಲ್ಲಿಯೂ ನಟಿಸಿದ್ದರು. ನಟಿಯ ಈ ದುರಂತ ಸಾವಿಗೆ ಅವರ ಆಪ್ತರು, ಕುಟುಂಬದವರು ಕಂಬನಿ ಮಿಡಿದಿದ್ದಾರೆ. (Instagram/ vaibhaviupadhyaya)
(7 / 7)

    ಹಂಚಿಕೊಳ್ಳಲು ಲೇಖನಗಳು