logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್ ಅಶ್ವಿನ್ ವಿದಾಯ; ಸ್ಪಿನ್ ಮಾಂತ್ರಿಕನ ದಾಖಲೆ, ಅಪರೂಪದ ಮೈಲುಗಲ್ಲುಗಳ ಮೆಲುಕು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್ ಅಶ್ವಿನ್ ವಿದಾಯ; ಸ್ಪಿನ್ ಮಾಂತ್ರಿಕನ ದಾಖಲೆ, ಅಪರೂಪದ ಮೈಲುಗಲ್ಲುಗಳ ಮೆಲುಕು

Dec 18, 2024 12:51 PM IST

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಡ್ರಾ ಆದ ಬೆನ್ನಲ್ಲೇ, ಭಾರತ ತಂಡದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಅಶ್ವಿನ್, ತಮ್ಮ ವೃತ್ತಿ ಜೀವನದಲ್ಲಿ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ.

  • ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಡ್ರಾ ಆದ ಬೆನ್ನಲ್ಲೇ, ಭಾರತ ತಂಡದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಅಶ್ವಿನ್, ತಮ್ಮ ವೃತ್ತಿ ಜೀವನದಲ್ಲಿ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ.
ಬ್ರಿಸ್ಬೇನ್‌ನ ದಿ ಗಬ್ಬಾ ಮೈದಾನದಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ, ಅಶ್ವಿನ್‌ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಪಂದ್ಯ ಡ್ರಾ ಆದ ಬಳಿಕ, 38 ವರ್ಷದ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಅಶ್ವಿನ್‌ ಅಂತಾರಾಷ್ಟ್ರೀಯ ವೃತ್ತಿಜೀವನದ ವಿಶೇಷ ದಾಖಲೆಗಳನ್ನು ಮೆಲುಕು ಹಾಕೋಣ.
(1 / 10)
ಬ್ರಿಸ್ಬೇನ್‌ನ ದಿ ಗಬ್ಬಾ ಮೈದಾನದಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ, ಅಶ್ವಿನ್‌ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಪಂದ್ಯ ಡ್ರಾ ಆದ ಬಳಿಕ, 38 ವರ್ಷದ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಅಶ್ವಿನ್‌ ಅಂತಾರಾಷ್ಟ್ರೀಯ ವೃತ್ತಿಜೀವನದ ವಿಶೇಷ ದಾಖಲೆಗಳನ್ನು ಮೆಲುಕು ಹಾಕೋಣ.
ಭಾರತ ತಂಡದ ಪರ ಅಶ್ವಿನ್ 106 ಟೆಸ್ಟ್, 116 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಬರೋಬ್ಬರಿ 775 ವಿಕೆಟ್ ಕಬಳಿಸಿದ್ದಾರೆ.
(2 / 10)
ಭಾರತ ತಂಡದ ಪರ ಅಶ್ವಿನ್ 106 ಟೆಸ್ಟ್, 116 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಬರೋಬ್ಬರಿ 775 ವಿಕೆಟ್ ಕಬಳಿಸಿದ್ದಾರೆ.(AFP)
ಒಟ್ಟು 106 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಅಶ್ವಿನ್ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಟೆಸ್ಟ್‌ ಶ್ರೇಯಾಂಕದಲ್ಲಿ ಮೂರನೇ ಶ್ರೇಯಾಂಕದ ಆಲ್‌ರೌಂಡರ್‌ ಆಗಿರುವ ಅಶ್ವಿನ್‌, 3503 ರನ್‌ ಕೂಡಾ ಕಲೆ ಹಾಕಿದ್ದಾರೆ. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್‌ ಕಬಳಿಸಿ ಅಗ್ರಸ್ಥಾನದಲ್ಲಿದ್ದರೆ, ಅಶ್ವಿನ್ 537 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಏಳನೇ ಸ್ಥಾನದಲ್ಲಿದ್ದಾರೆ.
(3 / 10)
ಒಟ್ಟು 106 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಅಶ್ವಿನ್ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಟೆಸ್ಟ್‌ ಶ್ರೇಯಾಂಕದಲ್ಲಿ ಮೂರನೇ ಶ್ರೇಯಾಂಕದ ಆಲ್‌ರೌಂಡರ್‌ ಆಗಿರುವ ಅಶ್ವಿನ್‌, 3503 ರನ್‌ ಕೂಡಾ ಕಲೆ ಹಾಕಿದ್ದಾರೆ. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್‌ ಕಬಳಿಸಿ ಅಗ್ರಸ್ಥಾನದಲ್ಲಿದ್ದರೆ, ಅಶ್ವಿನ್ 537 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಏಳನೇ ಸ್ಥಾನದಲ್ಲಿದ್ದಾರೆ.(AFP)
ಒಟ್ಟು 37 ಬಾರಿ ಐದು ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿರುವ ಅಶ್ವಿನ್‌, ಶೇನ್ ವಾರ್ನ್ ಜತೆಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಬಾಅರಿ ಐದು ವಿಕೆಟ್‌ ಸಾಧನೆ ಮಾಡಿದವರಲ್ಲಿ ಮುತ್ತಯ್ಯ ಮುರಳೀಧರನ್ (67)ಗೆ ಅಗ್ರಸ್ಥಾನ.
(4 / 10)
ಒಟ್ಟು 37 ಬಾರಿ ಐದು ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿರುವ ಅಶ್ವಿನ್‌, ಶೇನ್ ವಾರ್ನ್ ಜತೆಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಬಾಅರಿ ಐದು ವಿಕೆಟ್‌ ಸಾಧನೆ ಮಾಡಿದವರಲ್ಲಿ ಮುತ್ತಯ್ಯ ಮುರಳೀಧರನ್ (67)ಗೆ ಅಗ್ರಸ್ಥಾನ.(PTI)
ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಅಶ್ವಿನ್‌ ಅವರದ್ದು. ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರಳೀಧರನ್ ಮತ್ತು ಅಶ್ವಿನ್‌ 11 ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ.
(5 / 10)
ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಅಶ್ವಿನ್‌ ಅವರದ್ದು. ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರಳೀಧರನ್ ಮತ್ತು ಅಶ್ವಿನ್‌ 11 ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ.(AFP)
ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ  ಶತಕ ಸಿಡಿಸುವ ಜೊತೆಗೆ ಐದು ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ಇಯಾನ್ ಬಾಥಮ್ ಅವರು ಐದು ಬಾರಿ ಈ ಸಾಧನೆ ಮಾಡಿದ್ದಾರೆ. ಅದಾದ ಬಳಿಕ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ.
(6 / 10)
ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ  ಶತಕ ಸಿಡಿಸುವ ಜೊತೆಗೆ ಐದು ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ಇಯಾನ್ ಬಾಥಮ್ ಅವರು ಐದು ಬಾರಿ ಈ ಸಾಧನೆ ಮಾಡಿದ್ದಾರೆ. ಅದಾದ ಬಳಿಕ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ.(AP)
ವೈಟ್-ಬಾಲ್ ಮಾದರಿಯಲ್ಲಿ, ಅಶ್ವಿನ್ ಒಟ್ಟು 181 ಪಂದ್ಯಗಳಲ್ಲಿ ಆಡಿ 228 ವಿಕೆಟ್‌ ಕಿತ್ತಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 33.20ರ ಸರಾಸರಿಯಲ್ಲಿ 156 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 4/25 ಅತ್ಯುತ್ತಮ ಅಂಕಿ-ಅಂಶ. ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 13ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
(7 / 10)
ವೈಟ್-ಬಾಲ್ ಮಾದರಿಯಲ್ಲಿ, ಅಶ್ವಿನ್ ಒಟ್ಟು 181 ಪಂದ್ಯಗಳಲ್ಲಿ ಆಡಿ 228 ವಿಕೆಟ್‌ ಕಿತ್ತಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 33.20ರ ಸರಾಸರಿಯಲ್ಲಿ 156 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 4/25 ಅತ್ಯುತ್ತಮ ಅಂಕಿ-ಅಂಶ. ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 13ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.(REUTERS)
65 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 23.22 ರ ಸರಾಸರಿಯಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಅತ್ಯುತ್ತಮ ಅಂಕಿ-ಅಂಶ 4/8. ಇದೇ ವೇಳೆ ಬ್ಯಾಟಿಂಗ್‌ನಲ್ಲಿ 26.28ರ ಸರಾಸರಿಯಲ್ಲಿ 184 ರನ್‌ಗಳನ್ನು ಗಳಿಸಿದರು. ಟಿ20ಯಲ್ಲಿ ಭಾರತದ ಪರ ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
(8 / 10)
65 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 23.22 ರ ಸರಾಸರಿಯಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಅತ್ಯುತ್ತಮ ಅಂಕಿ-ಅಂಶ 4/8. ಇದೇ ವೇಳೆ ಬ್ಯಾಟಿಂಗ್‌ನಲ್ಲಿ 26.28ರ ಸರಾಸರಿಯಲ್ಲಿ 184 ರನ್‌ಗಳನ್ನು ಗಳಿಸಿದರು. ಟಿ20ಯಲ್ಲಿ ಭಾರತದ ಪರ ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.(AP)
ಭಾರತ ತಂಡದ ಪರ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಆಡಿದ ತಂಡದಲ್ಲಿ ಅಶ್ವಿನ್‌ ಆಡಿದ್ದರು. ಅದರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಅಶ್ವಿನ್‌ ಪಾತ್ರ ನಿರ್ಣಾಯಕವಾಗಿತ್ತು.
(9 / 10)
ಭಾರತ ತಂಡದ ಪರ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಆಡಿದ ತಂಡದಲ್ಲಿ ಅಶ್ವಿನ್‌ ಆಡಿದ್ದರು. ಅದರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಅಶ್ವಿನ್‌ ಪಾತ್ರ ನಿರ್ಣಾಯಕವಾಗಿತ್ತು.(PTI)
ನಿವೃತ್ತಿ ಕುರಿತು ಮಾತನಾಡಿದ ಅಶ್ವಿನ್‌, "ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಬಹಳಷ್ಟು ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ನೆನೆಪುಗಳಿವೆ. ನಾನು ಬಹಳಷ್ಟು ಜನರಿಗೆ ಧನ್ಯವಾದ ಹೇಳಬೇಕು. ಬಿಸಿಸಿಐ, ನನ್ನ ಸಹ ಆಟಗಾರರು, ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಆದರೆ ನಾನು ಕ್ಲಬ್ ಕ್ರಿಕೆಟ್ ಆಡುತ್ತೇನೆ," ಎಂದರು.
(10 / 10)
ನಿವೃತ್ತಿ ಕುರಿತು ಮಾತನಾಡಿದ ಅಶ್ವಿನ್‌, "ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಬಹಳಷ್ಟು ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ನೆನೆಪುಗಳಿವೆ. ನಾನು ಬಹಳಷ್ಟು ಜನರಿಗೆ ಧನ್ಯವಾದ ಹೇಳಬೇಕು. ಬಿಸಿಸಿಐ, ನನ್ನ ಸಹ ಆಟಗಾರರು, ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಆದರೆ ನಾನು ಕ್ಲಬ್ ಕ್ರಿಕೆಟ್ ಆಡುತ್ತೇನೆ," ಎಂದರು.(AFP)

    ಹಂಚಿಕೊಳ್ಳಲು ಲೇಖನಗಳು