logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tds On Epf Withdrawal: ಇಪಿಎಫ್ ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ದರ ಕಡಿತ: ನೀವು ತಿಳಿದುಕೊಳ್ಳಬೇಕಿರುವುದೇನು?

TDS on EPF withdrawal: ಇಪಿಎಫ್ ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ದರ ಕಡಿತ: ನೀವು ತಿಳಿದುಕೊಳ್ಳಬೇಕಿರುವುದೇನು?

Feb 02, 2023 08:02 AM IST

TDS on EPF withdrawal: ಪ್ರಾವಿಡೆಂಟ್‌ ಫಂಡ್‌ನಿಂದ ನಿಮ್ಮ ಭವಿಷ್ಯ ನಿಧಿಯನ್ನು ಹಿಂಪಡೆಯಲು ಯೋಜಿಸುತ್ತಿರುವಿರಾ? ಹಾಗಿದ್ದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನಿಮಗೆ ದೊಡ್ಡ ಪರಿಹಾರ ಸಿಕ್ಕಿದೆ. ಈ ಕುರಿತು ಇಲ್ಲಿದೆ ಮಾಹಿತಿ..

  • TDS on EPF withdrawal: ಪ್ರಾವಿಡೆಂಟ್‌ ಫಂಡ್‌ನಿಂದ ನಿಮ್ಮ ಭವಿಷ್ಯ ನಿಧಿಯನ್ನು ಹಿಂಪಡೆಯಲು ಯೋಜಿಸುತ್ತಿರುವಿರಾ? ಹಾಗಿದ್ದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನಿಮಗೆ ದೊಡ್ಡ ಪರಿಹಾರ ಸಿಕ್ಕಿದೆ. ಈ ಕುರಿತು ಇಲ್ಲಿದೆ ಮಾಹಿತಿ..
2023ರ ಕೇಂದ್ರ ಬಜೆಟ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಗಳ ಮೇಲಿನ ತೆರಿಗೆಯನ್ನು ಶೇಕಡಾ 30ರಿಂದ ರಿಂದ ಶೇಕಡಾ 20ಕ್ಕೆ ಇಳಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಪ್ರಕಟಣೆಯ ಪ್ರಕಾರ, ತೆರಿಗೆ ವಿಧಿಸಬಹುದಾದ ಭಾಗದಲ್ಲಿ ಟಿಡಿಎಸ್ ದರವನ್ನು ‌ನಾನ್ ಪ್ಯಾನ್ ಪ್ರಕರಣಗಳಲ್ಲಿ ಇಪಿಎಫ್‌ ಹಿಂಪಡೆಯುವಿಕೆಗೆ ಶೇ. 10ರಷ್ಟು ಇಳಿಸಲಾಗಿದೆ. (ಸಾಂಧರ್ಭಿಕ ಚಿತ್ರ)
(1 / 5)
2023ರ ಕೇಂದ್ರ ಬಜೆಟ್‌ನಲ್ಲಿ ಇಪಿಎಫ್ ಹಿಂಪಡೆಯುವಿಕೆಗಳ ಮೇಲಿನ ತೆರಿಗೆಯನ್ನು ಶೇಕಡಾ 30ರಿಂದ ರಿಂದ ಶೇಕಡಾ 20ಕ್ಕೆ ಇಳಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಪ್ರಕಟಣೆಯ ಪ್ರಕಾರ, ತೆರಿಗೆ ವಿಧಿಸಬಹುದಾದ ಭಾಗದಲ್ಲಿ ಟಿಡಿಎಸ್ ದರವನ್ನು ‌ನಾನ್ ಪ್ಯಾನ್ ಪ್ರಕರಣಗಳಲ್ಲಿ ಇಪಿಎಫ್‌ ಹಿಂಪಡೆಯುವಿಕೆಗೆ ಶೇ. 10ರಷ್ಟು ಇಳಿಸಲಾಗಿದೆ. (ಸಾಂಧರ್ಭಿಕ ಚಿತ್ರ)(HT)
ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್, 'ಪ್ಯಾನ್ ಮಾಹಿತಿ (ಇಪಿಎಫ್‌ಡಬ್ಲ್ಯು) ಹೊಂದಿರದ ಗ್ರಾಹಕರಿಗೆ ನೌಕರರ ಭವಿಷ್ಯ ನಿಧಿಯ (ಇಪಿಎಫ್) ತೆರಿಗೆಯ ಭಾಗವನ್ನು ಹಿಂಪಡೆಯಲು ಟಿಡಿಎಸ್ ದರವನ್ನು ಶೇಕಡಾ 30ರಿಂದ ಶೇ.20ಕ್ಕೆ ಕಡಿಮೆ ಮಾಡಲಾಗಿದೆ ಎಂದು ಘೋಷಿಸಿದರು.
(2 / 5)
ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್, 'ಪ್ಯಾನ್ ಮಾಹಿತಿ (ಇಪಿಎಫ್‌ಡಬ್ಲ್ಯು) ಹೊಂದಿರದ ಗ್ರಾಹಕರಿಗೆ ನೌಕರರ ಭವಿಷ್ಯ ನಿಧಿಯ (ಇಪಿಎಫ್) ತೆರಿಗೆಯ ಭಾಗವನ್ನು ಹಿಂಪಡೆಯಲು ಟಿಡಿಎಸ್ ದರವನ್ನು ಶೇಕಡಾ 30ರಿಂದ ಶೇ.20ಕ್ಕೆ ಕಡಿಮೆ ಮಾಡಲಾಗಿದೆ ಎಂದು ಘೋಷಿಸಿದರು.(HT)
ಪ್ರಸ್ತುತ ನಿಯಮಗಳ ಪ್ರಕಾರ, ಇಪಿಎಫ್ ಖಾತೆಯನ್ನು ತೆರೆದ ಐದು ವರ್ಷಗಳಲ್ಲಿ ಹಿಂಪಡೆಯುವಿಕೆ ಮಾಡಿದರೆ, ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. 50,000 ರೂ.ಗಿಂತ ಹೆಚ್ಚಿನ ಹಣ ವಿತ್ ಡ್ರಾ ಆಗಿದ್ದರೆ, ಪ್ಯಾನ್ ಕಾರ್ಡ್ ಹೊಂದಿರುವವರಿಂದ ಶೇಕಡಾ 10ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. PAN ಕಾರ್ಡ್ ಹೊಂದಿರದ ಗ್ರಾಹಕರಿಗೆ (PAN ಕಾರ್ಡ್ ಅನ್ನು EPFO ​​ಗೆ ಲಿಂಕ್ ಮಾಡದವರು), ಟಿಡಿಎಸ್‌ ಅನ್ನು ಶೇ.30ರ ದರದಲ್ಲಿ ಕಡಿತಗೊಳಿಸಲಾಗುತ್ತದೆ. (ಸಂಗ್ರಹ ಚಿತ್ರ)
(3 / 5)
ಪ್ರಸ್ತುತ ನಿಯಮಗಳ ಪ್ರಕಾರ, ಇಪಿಎಫ್ ಖಾತೆಯನ್ನು ತೆರೆದ ಐದು ವರ್ಷಗಳಲ್ಲಿ ಹಿಂಪಡೆಯುವಿಕೆ ಮಾಡಿದರೆ, ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. 50,000 ರೂ.ಗಿಂತ ಹೆಚ್ಚಿನ ಹಣ ವಿತ್ ಡ್ರಾ ಆಗಿದ್ದರೆ, ಪ್ಯಾನ್ ಕಾರ್ಡ್ ಹೊಂದಿರುವವರಿಂದ ಶೇಕಡಾ 10ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. PAN ಕಾರ್ಡ್ ಹೊಂದಿರದ ಗ್ರಾಹಕರಿಗೆ (PAN ಕಾರ್ಡ್ ಅನ್ನು EPFO ​​ಗೆ ಲಿಂಕ್ ಮಾಡದವರು), ಟಿಡಿಎಸ್‌ ಅನ್ನು ಶೇ.30ರ ದರದಲ್ಲಿ ಕಡಿತಗೊಳಿಸಲಾಗುತ್ತದೆ. (ಸಂಗ್ರಹ ಚಿತ್ರ)(HT)
ಈ ಬಾರಿಯ ಬಜೆಟ್‌ನಲ್ಲಿ, PAN ಕಾರ್ಡ್ ಹೊಂದಿರದ EPFO ​​ಗ್ರಾಹಕರಿಗೆ, TDS ಅನ್ನು ಶೇಕಡಾ 20ಕ್ಕೆ ಇಳಿಸಲಾಗಿದೆ. ಇದು ಆರ್ಥಿಕ ವರ್ಷ 2023-24 ರಿಂದ ಜಾರಿಗೆ ಬರಲಿದೆ. ಸಂಬಂಧಪಟ್ಟ ಕ್ವಾರ್ಟರ್‌ಗಳ ಪ್ರಕಾರ, ಈ ನಿರ್ಧಾರವು ಕಡಿಮೆ ಆದಾಯದ ಇಪಿಎಫ್‌ಒ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)
(4 / 5)
ಈ ಬಾರಿಯ ಬಜೆಟ್‌ನಲ್ಲಿ, PAN ಕಾರ್ಡ್ ಹೊಂದಿರದ EPFO ​​ಗ್ರಾಹಕರಿಗೆ, TDS ಅನ್ನು ಶೇಕಡಾ 20ಕ್ಕೆ ಇಳಿಸಲಾಗಿದೆ. ಇದು ಆರ್ಥಿಕ ವರ್ಷ 2023-24 ರಿಂದ ಜಾರಿಗೆ ಬರಲಿದೆ. ಸಂಬಂಧಪಟ್ಟ ಕ್ವಾರ್ಟರ್‌ಗಳ ಪ್ರಕಾರ, ಈ ನಿರ್ಧಾರವು ಕಡಿಮೆ ಆದಾಯದ ಇಪಿಎಫ್‌ಒ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)(HT)
ಈ ವಿಷಯದ ಬಗ್ಗೆ ಮಾತನಾಡಿರುವ ಹಣಕಾಸು ತಜ್ಞರು, ಇಪಿಎಫ್‌ಡಬ್ಲ್ಯೂ (ಪ್ಯಾನ್ ಕಾರ್ಡ್ ಅನ್ನು ಇಪಿಎಫ್‌ಒಗೆ ಲಿಂಕ್ ಮಾಡದವರು) ನೊಂದಿಗೆ ಪ್ಯಾನ್ ಕಾರ್ಡ್ ಹೊಂದಿರದ ಗ್ರಾಹಕರ ಇಪಿಎಫ್ ಹಿಂಪಡೆಯುವಿಕೆಯ ಮೇಲೆ ಟಿಡಿಎಸ್ ಕಡಿತವು, ಆದಾಯವು ತುಲನಾತ್ಮಕವಾಗಿ ಕಡಿಮೆ ಇರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)
(5 / 5)
ಈ ವಿಷಯದ ಬಗ್ಗೆ ಮಾತನಾಡಿರುವ ಹಣಕಾಸು ತಜ್ಞರು, ಇಪಿಎಫ್‌ಡಬ್ಲ್ಯೂ (ಪ್ಯಾನ್ ಕಾರ್ಡ್ ಅನ್ನು ಇಪಿಎಫ್‌ಒಗೆ ಲಿಂಕ್ ಮಾಡದವರು) ನೊಂದಿಗೆ ಪ್ಯಾನ್ ಕಾರ್ಡ್ ಹೊಂದಿರದ ಗ್ರಾಹಕರ ಇಪಿಎಫ್ ಹಿಂಪಡೆಯುವಿಕೆಯ ಮೇಲೆ ಟಿಡಿಎಸ್ ಕಡಿತವು, ಆದಾಯವು ತುಲನಾತ್ಮಕವಾಗಿ ಕಡಿಮೆ ಇರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)(HT)

    ಹಂಚಿಕೊಳ್ಳಲು ಲೇಖನಗಳು