logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Actress Imanvi: ಪ್ರಭಾಸ್ ಚಿತ್ರದಲ್ಲಿ ನಟಿಸಿಲು ನಟಿ ಇಮಾನ್ವಿ ಪಡೆದ ಸಂಭಾವನೆ ಎಷ್ಟು? ಚೊಚ್ಚಲ ಅವಕಾಶದಲ್ಲೇ ಬಂಪರ್‌

Actress Imanvi: ಪ್ರಭಾಸ್ ಚಿತ್ರದಲ್ಲಿ ನಟಿಸಿಲು ನಟಿ ಇಮಾನ್ವಿ ಪಡೆದ ಸಂಭಾವನೆ ಎಷ್ಟು? ಚೊಚ್ಚಲ ಅವಕಾಶದಲ್ಲೇ ಬಂಪರ್‌

Sep 27, 2024 03:44 PM IST

Actress Imanvi: ಪ್ರಭಾಸ್ ಮತ್ತು ಹನು ರಾಘವಪುಡಿ ಕಾಂಬಿನೇಷನ್‌ನ ಸಿನಿಮಾದ ಮೂಲಕ ಟಾಲಿವುಡ್‌ಗೆ ಇಮಾನ್ವಿ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಯಿತು. ಈ ಸಮಯದಲ್ಲಿ ಹೊಸ ಮುಖ ಇಮಾನ್ವಿಯ ಕುರಿತು ಎಲ್ಲರ ಕುತೂಹಲ ಹೆಚ್ಚಾಗಿದೆ.

ಪ್ರಭಾಸ್‌ ಸಿನಿಮಾಕ್ಕೆ ಇಮಾನ್ವಿ ನಾಯಕಿಯಾಗಿ ಆಯ್ಕೆಯಾದ ಬಳಿಕ ಈಕೆಯ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್‌ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಈಕೆ 18 ಲಕ್ಷ ಯೂಟ್ಯೂಬ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಮೂಲತಃ ಡ್ಯಾನ್ಸರ್‌ ಆಗಿರುವ ಈಕೆ ಸೋಷಿಯಲ್‌ ಮೀಡಿಯಾ ಕಂಟೆಂಟ್‌ ಕ್ರಿಯೆಟರ್‌ ಆಗಿಯೂ ಜನಪ್ರಿಯತೆ ಪಡೆದಿದ್ದಾರೆ.
(1 / 6)

ಪ್ರಭಾಸ್ ಜತೆ ನಟಿಸಲು ಇಮಾನ್ವಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ತನ್ನ ಮೊದಲ ಸಿನಿಮಾಕ್ಕೆ ಇಷ್ಟೊಂದು ಸಂಭಾವನೆ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದಾರೆ.
(2 / 6)

ಇಮಾನ್ವಿ ಜೊತೆಗೆ ಇನ್ನಿಬ್ಬರು ನಾಯಕಿಯರು ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾರತದಲ್ಲಿ ಜನಿಸಿದ ಇಮಾನ್ವಿ ಲಾಸ್‌ ಏಂಜೆಲ್ಸ್‌ನಲ್ಲಿ ಜೀವನ ನಡೆಸುತ್ತಿದ್ದರು. ಅಂದರೆ, ಬಾಲ್ಯದಲ್ಲಿಯೇ ಇವರ ಕುಟುಂಬ ಕ್ಯಾಲಿಫೋರ್ನಿಯಾಕ್ಕೆ ಶಿಫ್ಟ್‌ ಆಗಿತ್ತು. ಹೀಗಾಗಿ, ಲಾಸ್‌ ಏಂಜೆಲ್ಸ್‌ನಲ್ಲಿ ತನ್ನ ಬಾಲ್ಯದಿಂದ ಇದ್ದಾರೆ. ಈಕೆ 1995ರ ಅಕ್ಟೋಬರ್‌ 20ರಂದು ದೆಹಲಿಯಲ್ಲಿ ಜನಿಸಿದರು. 
(3 / 6)

ಹನು ರಾಘವಪುಡಿ ಈ ಐತಿಹಾಸಿಕ ಪ್ರೇಮಕಥೆಗೆ ಫೌಜಿ ಎಂಬ ಹೆಸರು ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. 
(4 / 6)

ಈ ಸಿನಿಮಾದ ಶೂಟಿಂಗ್‌ ಇತ್ತೀಚೆಗೆ ಆರಂಭವಾಗಿದೆ. ನಿರ್ದೇಶಕ ಹನು ರಾಘವಪುಡಿ ಅವರು ಪ್ರಭಾಸ್ ಇಲ್ಲದ ಇತರೆ ದೃಶ್ಯಗಳನ್ನು ಶೂಟಿಂಗ್‌ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಪ್ರಭಾಸ್‌ ಕೂಡ ಶೂಟಿಂಗ್‌ಗೆ ಹಾಜರಾಗುವ ಸೂಚನೆಯಿದೆ. 
(5 / 6)

ಐಎಂಡಿಬಿ ಪ್ರಕಾರ ಇಮಾನ್ವಿ ಈಗಾಗಲೇ ಬೀಯಿಂಗ್‌ ಶಾರಾಹ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇವರು ಡ್ಯಾನ್ಸರ್‌ ಆಗಿ ಸೋಷಿಯಲ್‌ ಮೀಡಿಯಾದಲ್ಲಿ ಖ್ಯಾತಿ ಪಡೆದಿದ್ದಾರೆ. ಬಾಲಿವುಡ್‌ ನಟಿಯರಾದ ರೇಖಾ, ಮಾಧುರಿ ದೀಕಷಿತ, ವೈಜಯಂತಿಮಾಲ ಮುಂತಾದವರ ಎವರ್‌ಗ್ರೀನ್‌ ನಟನೆಯನ್ನು ನನಗೆ ಅಮ್ಮ ತೋರಿಸುತ್ತಿದ್ದರು. ಡ್ಯಾನ್ಸಿಂಗ್‌ ಕಲಿಯಲು ಇದು ನನಗೆ ಪ್ರೇರಣೆಯಾಯಿತು ಎಂದು ಹಿಂದೊಮ್ಮೆ ಇಮಾನ್ವಿ ಮಾಧ್ಯಮಗಳಿಗೆ ತಿಳಿಸಿದ್ದರು.  
(6 / 6)

    ಹಂಚಿಕೊಳ್ಳಲು ಲೇಖನಗಳು