logo
ಕನ್ನಡ ಸುದ್ದಿ  /  Photo Gallery  /  Tollywood News Telugu Couple Varun Tej Lavanya Tripathi Engagement Date Fixed For June 9th In Pearl City Hyderabad Rsm

Tollywood news: ಟಾಲಿವುಡ್‌ ಜೋಡಿ ಒಂದಾಗಲು ಡೇಟ್‌ ಫಿಕ್ಸ್‌;ಇದೇ ತಿಂಗಳು ಹೈದರಾಬಾದ್‌ನಲ್ಲಿ ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ

Jun 01, 2023 05:44 PM IST

ಇದುವರೆಗೂ ಟಾಲಿವುಡ್‌ ಜೋಡಿ ಲಾವಣ್ಯ ತ್ರಿಪಾಠಿ ಹಾಗೂ ವರುಣ್‌ ತೇಜ್‌ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿಲ್ಲ. ಆದರೆ ಈ ಜೋಡಿ ಇದೇ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿದೆ. 

ಮಿಸ್ಟರ್‌ ಹಾಗೂ ಅಂತರಿಕ್ಷಂ ಸಿನಿಮಾಗಳಲ್ಲಿ ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ಒಟ್ಟಿಗೆ ನಟಿಸಿದ್ದಾರೆ. ಆಗ ಪರಿಚಯವಾದ ಇಬ್ಬರಿಗೂ ನಂತರ ಲವ್‌ ಆಗಿದೆ. 
(1 / 11)

ಬಹಳ ದಿನಗಳಿಂದ ಪ್ರೀತಿಸುತ್ತಿರುವ ಈ ಜೋಡಿ ಮದುವೆಗೆ ಇಬ್ಬರ ಮನೆಯವರಿಂದಲೂ ಇತ್ತೀಚೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿತ್ತು. 
(2 / 11)

ಇಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳದಿದ್ದರೂ ಅನೇಕ ಬಾರಿ ಕೆಲವೊಂದು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
(3 / 11)

ಲಾವಣ್ಯ ತ್ರಿಪಾಠಿ ಮೂಲತ: ಉತ್ತರ ಪ್ರದೇಶದ ಅಯೋಧ್ಯೆಯವರು. ಕಾಲೇಜಿನಲ್ಲಿ ಓದಿನ ಜೊತೆಗೆ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಲಾವಣ್ಯ ತ್ರಿಪಾಠಿ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದರು.
(4 / 11)

ವರುಣ್‌ ತೇಜ್‌ ಟಾಲಿವುಡ್‌ನ ಮೆಗಾ ಕುಟುಂಬಕ್ಕೆ ಸೇರಿದವರು. ನಟ ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್‌ ತೇಜ್‌. 
(5 / 11)

'ಅಂದಾಲ ರಾಕ್ಷಸಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಲಾವಣ್ಯ ಮನಂ, ಭಲೇ ಭಲೇ ಮಗಾಡಿವಿ, ಸೊಗ್ಗದೆ ಚಿನ್ನಿ ನಾಯನ, ಮಿಸ್ಟರ್‌, ಯುದ್ಧಂ ಶರಣಂ, ಇಂಟಲಿಜಂಟ್‌, ಎ1 ಎಕ್ಸ್‌ಪ್ರೆಸ್‌, ಹ್ಯಾಪಿ ಬರ್ತ್‌ಡೇ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
(6 / 11)

ವರುಣ್‌ ತೇಜ್‌ ಹ್ಯಾಂಡ್ಸ್‌ ಅಪ್‌ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. ಬಹಳ ವರ್ಷಗಳ ಗ್ಯಾಪ್ ನಂತರ ಅವರು ಮುಕುಂದ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಫಿದಾ, ತೊಲಿಪ್ರೇಮ, ಎಫ್‌2, ಗನಿ ಸಿನಿಮಾಗಳಲ್ಲಿ ವರುಣ್‌ ನಟಿಸಿದ್ದಾರೆ. 
(7 / 11)

ವರುಣ್‌ ತೇಜ್‌ ಸಹೋದರಿ ನಿಹಾರಿಕಾ ಕೊನಿಡೇಲ ಮದುವೆ ಸಮಾರಂಭದಲ್ಲಿ ಕೂಡಾ ಲಾವಣ್ಯ ತ್ರಿಪಾಠಿ ಭಾವಹಿಸಿದ್ದರು. 
(8 / 11)

ಮೂಲಗಳ ಪ್ರಕಾರ ಜೂನ್‌ 9, ಶುಕ್ರವಾರ ಈ ಜೋಡಿ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರಂತೆ. ಇಬ್ಬರೂ ಕುಟುಂಬದ ಹಿರಿಯಲು ಈ ಡೇಟ್‌ ಫಿಕ್ಸ್‌ ಮಾಡಿದ್ದು ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
(9 / 11)

ವರುಣ್‌ ತೇಜ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಗಾಂಡಿವಧಾರಿ ಅರ್ಜುನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಿವಿಎಸ್‌ಎನ್‌ ಪ್ರಸಾದ್‌ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಪ್ರವೀಣ್‌ ಸತ್ತಾರು ನಿರ್ದೇಶಿಸುತ್ತಿದ್ದಾರೆ. 
(10 / 11)

ಮತ್ತೊಂದೆಡೆ ಲಾವಣ್ಯ ತ್ರಿಪಾಠಿ ತನಲ್‌ ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಮಾಧವ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.  
(11 / 11)

    ಹಂಚಿಕೊಳ್ಳಲು ಲೇಖನಗಳು