logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Krithi Shetty: ಚೆಂದಕ್ಕಿಂತ ಚೆಂದ ನೀನೇ ಸುಂದರ; ಉಪ್ಪೆನ ಸಿನಿಮಾ ನಾಯಕಿ ಕೃತಿ ಶೆಟ್ಟಿ ಹೊಸ ಫೋಟೋಶೂಟ್‌

Krithi Shetty: ಚೆಂದಕ್ಕಿಂತ ಚೆಂದ ನೀನೇ ಸುಂದರ; ಉಪ್ಪೆನ ಸಿನಿಮಾ ನಾಯಕಿ ಕೃತಿ ಶೆಟ್ಟಿ ಹೊಸ ಫೋಟೋಶೂಟ್‌

May 23, 2023 02:46 PM IST

ಇತ್ತೀಚೆಗೆ ಪಿಂಕ್‌ ಬಣ್ಣದ ಲೆಹೆಂಗಾ ಧರಿಸಿ ಫೋಟೋಗೆ ಪೋಸ್‌ ನೀಡಿದ್ದ ಕೃತಿ ಶೆಟ್ಟಿ ಈಗ ಸಿಂಪಲ್‌ ಹಸಿರು ಕುರ್ತಾದಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. 

ಹೊಸ ಫೋಟೋಗಳನ್ನು ಉಪ್ಪೆನ ಚೆಲುವೆ ಕೃತಿ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 
(1 / 9)
ಹೊಸ ಫೋಟೋಗಳನ್ನು ಉಪ್ಪೆನ ಚೆಲುವೆ ಕೃತಿ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. (PC: Krithi Shetty Instaram)
ಇತ್ತೀಚೆಗೆ ಕೃತಿ ಅಭಿನಯದ ಕಸ್ಟಡಿ ಸಿನಿಮಾ ತೆರೆ ಕಂಡಿತ್ತು. ಆದರೆ ಈ ಸಿನಿಮಾ ಮೇಲಿನ ನಿರೀಕ್ಷೆ ಸುಳ್ಳಾಯ್ತು. 
(2 / 9)

ಕಸ್ಟಡಿ ಚಿತ್ರದಲ್ಲಿ ಕೃತಿ ಅಕ್ಕಿನೇನಿ ನಾಗಾರ್ಜುನ ಜೊತೆ ನಾಯಕಿಯಾಗಿ ನಟಿಸಿದ್ದರು. ಆದರೆ ಸಿನಿಮಾ ಫ್ಲಾಪ್‌ ಆಯ್ತು. 
(3 / 9)

ತಮಗೆ ಅವಕಾಶ ದೊರೆತ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳದ ಈ ಮಂಗಳೂರು ಮೂಲದ ಚೆಲುವೆ ಸ್ಕ್ರಿಪ್ಟ್‌ ಆಯ್ಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರಂತೆ. 
(4 / 9)

ಕೃತಿ ಶೆಟ್ಟಿ ಚಿತ್ರರಂಗಕ್ಕೆ ಬಂದಿದ್ದು ಹೃತಿಕ್‌ ರೋಷನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೂಪರ್‌ 30 ಚಿತ್ರದ ಮೂಲಕ. ಈ ಚಿತ್ರದಲ್ಲಿ ಕೃತಿ ನಾಯಕಿಯ ಸ್ನೇಹಿತೆ ಪಾತ್ರದಲ್ಲಿ ನಟಿಸಿದ್ದರು. 
(5 / 9)

ಕೃತಿಗೆ ಹೆಸರು ತಂದುಕೊಟ್ಟದ್ದು ಆಕೆ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಉಪ್ಪೆನ. 2021 ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 100 ಕೋಟಿ ರೂಪಾಯಿ ಲಾಭ ಮಾಡಿತ್ತು. 
(6 / 9)

ಉಪ್ಪೆನ ಸಕ್ಸಸ್‌ ನಂತರ ಕೃತಿ ಶೆಟ್ಟಿಗೆ ತೆಲುಗು ಮಾತ್ರವಲ್ಲ ಇತರ ಭಾಷೆಗಳಿಂದ ಕೂಡಾ ಒಂದರ ಹಿಂದೊಂದರಂತೆ ಆಫರ್‌ ಬರುತ್ತಿವೆ. ಆದರೆ ಕೃತಿ ಮಾತ್ರ ಸ್ಟಾರ್‌ ನಟರ ಸಿನಿಮಾಗಳನ್ನು ಕೂಡಾ ನೋ ಎಂದಿದ್ದಾರಂತೆ. 
(7 / 9)

ಕಳೆದ ವರ್ಷ ತೆರೆ ಕಂಡ ಕೃತಿ ಶೆಟ್ಟಿ ಅಭಿನಯದ 3 ಸಿನಿಮಾಗಳು ಫ್ಲಾಪ್‌ ಆಗಿತ್ತು. ಈ ವರ್ಷದ ಕೃತಿ ಮೊದಲ ಸಿನಿಮಾ ಕಸ್ಟಡಿ ಕೂಡಾ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 
(8 / 9)

ಸದ್ಯಕ್ಕೆ ಕೃತಿ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೃತಿಗೆ ಬ್ರೇಕ್‌ ತಂದುಕೊಡಲಿದೆಯೇ ಕಾದು ನೋಡಬೇಕು.
(9 / 9)

    ಹಂಚಿಕೊಳ್ಳಲು ಲೇಖನಗಳು