logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರಜೆಗೋಸ್ಕರ ಕಾಯ್ತಾ ಇದ್ರಾ, ಹನಿಮೂನ್ ಪ್ರವಾಸಕ್ಕೆ ಫೇಮಸ್‌ ಈ ಪ್ರದೇಶಗಳು, ಕೇರಳಕ್ಕೆ ರೊಮ್ಯಾಂಟಿಕ್‌ ಟೂರ್‌ ಹೊರಡಿ

ಈ ರಜೆಗೋಸ್ಕರ ಕಾಯ್ತಾ ಇದ್ರಾ, ಹನಿಮೂನ್ ಪ್ರವಾಸಕ್ಕೆ ಫೇಮಸ್‌ ಈ ಪ್ರದೇಶಗಳು, ಕೇರಳಕ್ಕೆ ರೊಮ್ಯಾಂಟಿಕ್‌ ಟೂರ್‌ ಹೊರಡಿ

Sep 30, 2024 07:51 PM IST

ಹನಿಮೂನ್ ಪ್ರವಾಸ ಹೋಗಬೇಕು ಎಂಬುದು ಅನೇಕರ ಆಸೆ, ಕನಸು.. ಏನು ಬೇಕಾದರೂ ಹೇಳಿ. ಎಲ್ಲರಿಗೂ ಹನಿಮೂನ್ ಪ್ರವಾಸ ನನಸು ಮಾಡಿಕೊಳ್ಳಲು ಸಾಧ್ಯವಾಗಿರಲ್ಲ. ಈ ರಜೆಯಲ್ಲಿ ಅದನ್ನು ನನಸು ಮಾಡಿಕೊಳ್ಳಿ. ಹನಿಮೂನ್ ಪ್ರವಾಸಕ್ಕೆ ಫೇಮಸ್‌ ಈ ಪ್ರದೇಶಗಳು, ಕೇರಳಕ್ಕೆ ರೊಮ್ಯಾಂಟಿಕ್‌ ಟೂರ್‌ ಹೊರಡಿ. ಅದಕ್ಕೂ ಮೊದಲು ಈ ವಿವರ ತಿಳಿದಿರಿ. 

ಹನಿಮೂನ್ ಪ್ರವಾಸ ಹೋಗಬೇಕು ಎಂಬುದು ಅನೇಕರ ಆಸೆ, ಕನಸು.. ಏನು ಬೇಕಾದರೂ ಹೇಳಿ. ಎಲ್ಲರಿಗೂ ಹನಿಮೂನ್ ಪ್ರವಾಸ ನನಸು ಮಾಡಿಕೊಳ್ಳಲು ಸಾಧ್ಯವಾಗಿರಲ್ಲ. ಈ ರಜೆಯಲ್ಲಿ ಅದನ್ನು ನನಸು ಮಾಡಿಕೊಳ್ಳಿ. ಹನಿಮೂನ್ ಪ್ರವಾಸಕ್ಕೆ ಫೇಮಸ್‌ ಈ ಪ್ರದೇಶಗಳು, ಕೇರಳಕ್ಕೆ ರೊಮ್ಯಾಂಟಿಕ್‌ ಟೂರ್‌ ಹೊರಡಿ. ಅದಕ್ಕೂ ಮೊದಲು ಈ ವಿವರ ತಿಳಿದಿರಿ. 
ಕೇರಳದ ಮುನ್ನಾರ್, ಕೊಚ್ಚಿ, ಕುಮರಕಮ್, ಆತಿರಪಲ್ಲಿ ಮತ್ತು ಕೋವಳಂ ಪ್ರದೇಶಗಳು ಮಧುಚಂದ್ರ ಪ್ರವಾಸಕ್ಕೆ ಹೇಳಿ ಮಾಡಿಸಿದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಬೀಚ್ ವಾಕಿಂಗ್, ಹೌಸ್ ಬೋಟ್‌ಗಳಲ್ಲಿ ಕ್ಯಾಂಡಲ್‌ ಲೈಟ್ ಡಿನ್ನರ್‌, ಪಂಚತಾರಾ ರೆಸಾರ್ಟ್ ಗಳಲ್ಲಿ ಐಷಾರಾಮಿ ವಸತಿ, ಆಯುರ್ವೇದ ಸ್ಪಾ, ಮಸಾಜ್, ಸೊಂಪಾದ ಹಸಿರು ಚಹಾ ತೋಟ ಹೀಗೆ ಪ್ರವಾಸಿ ಆಕರ್ಷಣೆಗಳು ಬಹಳ.
(1 / 5)
ಕೇರಳದ ಮುನ್ನಾರ್, ಕೊಚ್ಚಿ, ಕುಮರಕಮ್, ಆತಿರಪಲ್ಲಿ ಮತ್ತು ಕೋವಳಂ ಪ್ರದೇಶಗಳು ಮಧುಚಂದ್ರ ಪ್ರವಾಸಕ್ಕೆ ಹೇಳಿ ಮಾಡಿಸಿದ ಪ್ರದೇಶಗಳು. ಈ ಪ್ರದೇಶಗಳಲ್ಲಿ ಬೀಚ್ ವಾಕಿಂಗ್, ಹೌಸ್ ಬೋಟ್‌ಗಳಲ್ಲಿ ಕ್ಯಾಂಡಲ್‌ ಲೈಟ್ ಡಿನ್ನರ್‌, ಪಂಚತಾರಾ ರೆಸಾರ್ಟ್ ಗಳಲ್ಲಿ ಐಷಾರಾಮಿ ವಸತಿ, ಆಯುರ್ವೇದ ಸ್ಪಾ, ಮಸಾಜ್, ಸೊಂಪಾದ ಹಸಿರು ಚಹಾ ತೋಟ ಹೀಗೆ ಪ್ರವಾಸಿ ಆಕರ್ಷಣೆಗಳು ಬಹಳ.(irisholidays.com)
ಮುನ್ನಾರ್ ಕೇರಳದ ಹನಿಮೂನ್ ಸ್ಪಾಟ್‌ಗಳ ಪೈಕಿ ಮೊದಲನೆಯದಾಗಿದೆ. ಸೊಂಪಾದ ಹಸಿರು ಚಹಾ ತೋಟಗಳು, ಬಿಳಿ ಮಂಜು ಮತ್ತು ಮುಂಜಾನೆಯ ಸೂರ್ಯನ ಬೆಳಕು ಇಲ್ಲಿ ಬಹಳ ವಿಶೇಷ. ಅನೇಕ ನವ ಜೋಡಿಗಳು ಮೊದಲು ಭೇಟಿಕೊಡಲು ಇಷ್ಟಪಡುವುದು ಈ ಪ್ರದೇಶಕ್ಕೆ. ಮುನ್ನಾರ್‌ನ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಾರೆ, ಹನಿಮೂನ್‌ ಕ್ಷಣವನ್ನು ತಮ್ಮ ಜೀವನದುದ್ದಕ್ಕೂ ಸ್ಮರಣೀಯವಾಗಿಸುತ್ತಾರೆ.
(2 / 5)
ಮುನ್ನಾರ್ ಕೇರಳದ ಹನಿಮೂನ್ ಸ್ಪಾಟ್‌ಗಳ ಪೈಕಿ ಮೊದಲನೆಯದಾಗಿದೆ. ಸೊಂಪಾದ ಹಸಿರು ಚಹಾ ತೋಟಗಳು, ಬಿಳಿ ಮಂಜು ಮತ್ತು ಮುಂಜಾನೆಯ ಸೂರ್ಯನ ಬೆಳಕು ಇಲ್ಲಿ ಬಹಳ ವಿಶೇಷ. ಅನೇಕ ನವ ಜೋಡಿಗಳು ಮೊದಲು ಭೇಟಿಕೊಡಲು ಇಷ್ಟಪಡುವುದು ಈ ಪ್ರದೇಶಕ್ಕೆ. ಮುನ್ನಾರ್‌ನ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಾರೆ, ಹನಿಮೂನ್‌ ಕ್ಷಣವನ್ನು ತಮ್ಮ ಜೀವನದುದ್ದಕ್ಕೂ ಸ್ಮರಣೀಯವಾಗಿಸುತ್ತಾರೆ.(irisholidays.com)
ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಚೆಂಬರ ಪರ್ವತವು ಮತ್ತೊಂದು ಹನಿಮೂನ್ ತಾಣ. ಇಲ್ಲಿನ ಲವ್‌ ಸಂಕೇತದ ಸರೋವರವು ತುಂಬಾ ವಿಶೇಷ. ಇದು ಕೇರಳದ ಅತ್ಯುತ್ತಮ ಮಧುಚಂದ್ರ ಸ್ಥಳಗಳಲ್ಲಿ ಒಂದಾಗಿದೆ. ಪ್ರೀತಿಯ ಸಂಕೇತದಲ್ಲಿರುವ ಸರೋವರದಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಬೆಳಗ್ಗಿನ ಹೊತ್ತು ಮಂಜು ಆವರಿಸಿದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಏಕಾಂತದಲ್ಲಿರಲು ಇದಕ್ಕಿಂತ ಬೇರೆ ಉತ್ತಮ ಸ್ಥಳವಿಲ್ಲ.
(3 / 5)
ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಚೆಂಬರ ಪರ್ವತವು ಮತ್ತೊಂದು ಹನಿಮೂನ್ ತಾಣ. ಇಲ್ಲಿನ ಲವ್‌ ಸಂಕೇತದ ಸರೋವರವು ತುಂಬಾ ವಿಶೇಷ. ಇದು ಕೇರಳದ ಅತ್ಯುತ್ತಮ ಮಧುಚಂದ್ರ ಸ್ಥಳಗಳಲ್ಲಿ ಒಂದಾಗಿದೆ. ಪ್ರೀತಿಯ ಸಂಕೇತದಲ್ಲಿರುವ ಸರೋವರದಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಬೆಳಗ್ಗಿನ ಹೊತ್ತು ಮಂಜು ಆವರಿಸಿದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಏಕಾಂತದಲ್ಲಿರಲು ಇದಕ್ಕಿಂತ ಬೇರೆ ಉತ್ತಮ ಸ್ಥಳವಿಲ್ಲ.(irisholidays.com)
ಕೇರಳದ ಮತ್ತೊಂದು ರೋಮ್ಯಾಂಟಿಕ್ ಸ್ಥಳವೆಂದರೆ ಕುಮರಕಮ್. ಹಸಿರು ಭತ್ತದ ಗದ್ದೆಗಳು ಮತ್ತು ತೆಂಗಿನ ತೋಟಗಳು ಆಹ್ಲಾದಕರ ಅನುಭವ ನೀಡುತ್ತವೆ. ಕುಮರಕಮ್ ಹಿನ್ನೀರಿನ ಮೂಲಕ ಪ್ರಣಯ ಪ್ರಯಾಣವು ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತದೆ. ಇಲ್ಲಿ ಗೌಪ್ಯತೆ ಇದೆ. ಅದಕ್ಕಾಗಿಯೇ ಅನೇಕ ದಂಪತಿ ಹನಿಮೂನ್‌ಗಾಗಿ ಇಲ್ಲಿಗೆ ಬರುತ್ತಾರೆ
(4 / 5)
ಕೇರಳದ ಮತ್ತೊಂದು ರೋಮ್ಯಾಂಟಿಕ್ ಸ್ಥಳವೆಂದರೆ ಕುಮರಕಮ್. ಹಸಿರು ಭತ್ತದ ಗದ್ದೆಗಳು ಮತ್ತು ತೆಂಗಿನ ತೋಟಗಳು ಆಹ್ಲಾದಕರ ಅನುಭವ ನೀಡುತ್ತವೆ. ಕುಮರಕಮ್ ಹಿನ್ನೀರಿನ ಮೂಲಕ ಪ್ರಣಯ ಪ್ರಯಾಣವು ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತದೆ. ಇಲ್ಲಿ ಗೌಪ್ಯತೆ ಇದೆ. ಅದಕ್ಕಾಗಿಯೇ ಅನೇಕ ದಂಪತಿ ಹನಿಮೂನ್‌ಗಾಗಿ ಇಲ್ಲಿಗೆ ಬರುತ್ತಾರೆ(irisholidays.com)
ಮಧುಚಂದ್ರಕ್ಕೆ ಮತ್ತೊಂದು ಉತ್ತಮ ಸ್ಥಳ ಮರಾರಿ ಬೀಚ್‌. ಇದು ಬಹಳ ಪ್ರಸಿದ್ಧ ಬೀಚ್‌. ನವ ದಂಪತಿಗಳು ಇಲ್ಲಿಗೆ ಬಂದರೆ, ನೆಮ್ಮದಿಯ ವಾತಾವರಣ ಇದೆ. ಕಾಟೇಜ್‌ಗಳೂ ಇದ್ದು, ಸ್ವಿಮ್ಮಿಂಗ್ ಪೂಲ್ ಸೌಲಭ್ಯವೂಇದೆ. ಏಕಾಂತದಲ್ಲಿ ವಿಹರಿಸುವುದಕ್ಕೆ ಅವಕಾಶವಿದೆ.
(5 / 5)
ಮಧುಚಂದ್ರಕ್ಕೆ ಮತ್ತೊಂದು ಉತ್ತಮ ಸ್ಥಳ ಮರಾರಿ ಬೀಚ್‌. ಇದು ಬಹಳ ಪ್ರಸಿದ್ಧ ಬೀಚ್‌. ನವ ದಂಪತಿಗಳು ಇಲ್ಲಿಗೆ ಬಂದರೆ, ನೆಮ್ಮದಿಯ ವಾತಾವರಣ ಇದೆ. ಕಾಟೇಜ್‌ಗಳೂ ಇದ್ದು, ಸ್ವಿಮ್ಮಿಂಗ್ ಪೂಲ್ ಸೌಲಭ್ಯವೂಇದೆ. ಏಕಾಂತದಲ್ಲಿ ವಿಹರಿಸುವುದಕ್ಕೆ ಅವಕಾಶವಿದೆ.(irisholidays.com)

    ಹಂಚಿಕೊಳ್ಳಲು ಲೇಖನಗಳು