logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trekking Tips: ಚಾರಣಕ್ಕೆ ನೀವು ಹೊಸಬರಾಗಿದ್ದರೆ ಮೊದಲು ಈ ಟಿಪ್ಸ್ ಓದಿಕೊಳ್ಳಿ; ಆಮೇಲೆ ಪ್ಯಾಕಪ್‌ ಮಾಡಿ

Trekking tips: ಚಾರಣಕ್ಕೆ ನೀವು ಹೊಸಬರಾಗಿದ್ದರೆ ಮೊದಲು ಈ ಟಿಪ್ಸ್ ಓದಿಕೊಳ್ಳಿ; ಆಮೇಲೆ ಪ್ಯಾಕಪ್‌ ಮಾಡಿ

Feb 02, 2023 08:12 PM IST

Trekking tips: ಚಾರಣ ಹೋಗುವುದೆಂದರೆ, ಹಲವರಿಗೆ ಆಸಕ್ತಿ. ಟ್ರೆಕಿಂಗ್‌ ಹೋಗಿ ಅನುಭವವಿದ್ರೆ, ಅವರಿಗೆ ಏನೆಲ್ಲಾ ಪೂರ್ವ ಸಿದ್ಧತೆಗಳು ಬೇಕು ಎಂಬ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ನೀವು ಚಾರಣ ಹೋಗಲು ಮೊದಲ ಬಾರಿ ಯೋಜನೆ ಹಾಕಿಕೊಂಡರೆ, ನಿಮಗೆ ಕೆಲವೊಂದಷ್ಟು ಸಲಹೆಗಳ ಅಗತ್ಯವಿದೆ.

  • Trekking tips: ಚಾರಣ ಹೋಗುವುದೆಂದರೆ, ಹಲವರಿಗೆ ಆಸಕ್ತಿ. ಟ್ರೆಕಿಂಗ್‌ ಹೋಗಿ ಅನುಭವವಿದ್ರೆ, ಅವರಿಗೆ ಏನೆಲ್ಲಾ ಪೂರ್ವ ಸಿದ್ಧತೆಗಳು ಬೇಕು ಎಂಬ ಬಗ್ಗೆ ಮಾಹಿತಿ ಇರುತ್ತದೆ. ಆದರೆ, ನೀವು ಚಾರಣ ಹೋಗಲು ಮೊದಲ ಬಾರಿ ಯೋಜನೆ ಹಾಕಿಕೊಂಡರೆ, ನಿಮಗೆ ಕೆಲವೊಂದಷ್ಟು ಸಲಹೆಗಳ ಅಗತ್ಯವಿದೆ.
ನಿಮ್ಮ ಸ್ನೇಹಿತರೊಂದಿಗೆ ಚಾರಣಕ್ಕೆ ಯೋಜಿಸುತ್ತಿದ್ದರೆ, ಹೇಗೆ ತಯಾರಿ ನಡೆಸಬೇಕೆಂಬ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಟ್ರೆಕ್ಕಿಂಗ್ ಹೋಗುವುದು ನಿಜಾರ್ಥದಲ್ಲಿ ಕಷ್ಟ. ಆದರೆ, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡರೆ ಒಳ್ಳೆಯ ಟ್ರೆಕ್ಕಿಂಗ್ ಅನುಭವ ಪಡೆಯಬಹುದು.
(1 / 6)
ನಿಮ್ಮ ಸ್ನೇಹಿತರೊಂದಿಗೆ ಚಾರಣಕ್ಕೆ ಯೋಜಿಸುತ್ತಿದ್ದರೆ, ಹೇಗೆ ತಯಾರಿ ನಡೆಸಬೇಕೆಂಬ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಟ್ರೆಕ್ಕಿಂಗ್ ಹೋಗುವುದು ನಿಜಾರ್ಥದಲ್ಲಿ ಕಷ್ಟ. ಆದರೆ, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡರೆ ಒಳ್ಳೆಯ ಟ್ರೆಕ್ಕಿಂಗ್ ಅನುಭವ ಪಡೆಯಬಹುದು.(iStock (File Photo))
ಹತ್ತಿ ಬಟ್ಟೆಗಳನ್ನು ಧರಿಸಬೇಡಿ. ದೈನಂದಿನ ಉಡುಗೆಗೆ ಹತ್ತಿ ಬಟ್ಟೆಗಳು ಒಳ್ಳೆಯದು. ಆದರೆ ಟ್ರೆಕ್ಕಿಂಗ್ ಮಾಡುವಾಗ ಅದು ಒಳ್ಳೆಯದಲ್ಲ. ಏಕೆಂದರೆ, ಅದು ಬೆವರು ಹೀರಿಕೊಳ್ಳುತ್ತದೆ.
(2 / 6)
ಹತ್ತಿ ಬಟ್ಟೆಗಳನ್ನು ಧರಿಸಬೇಡಿ. ದೈನಂದಿನ ಉಡುಗೆಗೆ ಹತ್ತಿ ಬಟ್ಟೆಗಳು ಒಳ್ಳೆಯದು. ಆದರೆ ಟ್ರೆಕ್ಕಿಂಗ್ ಮಾಡುವಾಗ ಅದು ಒಳ್ಳೆಯದಲ್ಲ. ಏಕೆಂದರೆ, ಅದು ಬೆವರು ಹೀರಿಕೊಳ್ಳುತ್ತದೆ.(pinterest (File Photo))
ಟ್ರೆಕ್ಕಿಂಗ್ ಪರಿಕರಗಳು: ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸಿ. ಅದು ಜಾರುವಿಕೆ ಮತ್ತು ಗಾಯವನ್ನು ತಡೆಯುತ್ತದೆ. ಸರಿಯಾದಮತ್ತು ಆರಾಮದಾಯಕವಾದ ಬ್ಯಾಕ್‌ಪ್ಯಾಕ್‌ ಆಯ್ಕೆ ಮಾಡಿ.
(3 / 6)
ಟ್ರೆಕ್ಕಿಂಗ್ ಪರಿಕರಗಳು: ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸಿ. ಅದು ಜಾರುವಿಕೆ ಮತ್ತು ಗಾಯವನ್ನು ತಡೆಯುತ್ತದೆ. ಸರಿಯಾದಮತ್ತು ಆರಾಮದಾಯಕವಾದ ಬ್ಯಾಕ್‌ಪ್ಯಾಕ್‌ ಆಯ್ಕೆ ಮಾಡಿ.(File Photo)
ಹೈಡ್ರೇಟೆಡ್ ಆಗಿರಿ: ಟ್ರೆಕ್ಕಿಂಗ್ ಮಾಡುವಾಗ ಹೈಡ್ರೇಟೆಡ್ ಆಗಿ ಉಳಿಯುವುದು ಬಹಳ ಮುಖ್ಯ. ಆದ್ದರಿಂದ ಸಾಕಷ್ಟು ನೀರನ್ನು ಕೊಂಡೊಯ್ಯಿರಿ. ಇದರಿಂದ ನೀವು ನಿರ್ಜಲೀಕರಣಗೊಳ್ಳುವುದಿಲ್ಲ. ನೀವು ಸುದೀರ್ಘ ಚಾರಣಕ್ಕೆ ಹೋಗುತ್ತಿದ್ದರೆ, ನೀರಿನ ಶುದ್ಧೀಕರಣಕ್ಕೆ ಉಪಕರಣಗಳನ್ನು ಕೊಂಡೊಯ್ಯಬಹುದು.
(4 / 6)
ಹೈಡ್ರೇಟೆಡ್ ಆಗಿರಿ: ಟ್ರೆಕ್ಕಿಂಗ್ ಮಾಡುವಾಗ ಹೈಡ್ರೇಟೆಡ್ ಆಗಿ ಉಳಿಯುವುದು ಬಹಳ ಮುಖ್ಯ. ಆದ್ದರಿಂದ ಸಾಕಷ್ಟು ನೀರನ್ನು ಕೊಂಡೊಯ್ಯಿರಿ. ಇದರಿಂದ ನೀವು ನಿರ್ಜಲೀಕರಣಗೊಳ್ಳುವುದಿಲ್ಲ. ನೀವು ಸುದೀರ್ಘ ಚಾರಣಕ್ಕೆ ಹೋಗುತ್ತಿದ್ದರೆ, ನೀರಿನ ಶುದ್ಧೀಕರಣಕ್ಕೆ ಉಪಕರಣಗಳನ್ನು ಕೊಂಡೊಯ್ಯಬಹುದು.(pinterest)
ಅವಸರ ಮಾಡಬೇಡಿ. ನಿಮ್ಮ ಗುಂಪಿನಲ್ಲಿರುವ ಎಲ್ಲರೂ ನಿಮ್ಮ ಮುಂದೆ ಇದ್ದರೂ, ನೀವು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವ ದೃಶ್ಯಗಳನ್ನು ಆನಂದಿಸಿ. ಹೀಗಾಗಿ ನಿಧಾನವಾಗಿ ಚಾರಣವನ್ನು ಎಂಜಾಯ್‌ ಮಾಡಿ.
(5 / 6)
ಅವಸರ ಮಾಡಬೇಡಿ. ನಿಮ್ಮ ಗುಂಪಿನಲ್ಲಿರುವ ಎಲ್ಲರೂ ನಿಮ್ಮ ಮುಂದೆ ಇದ್ದರೂ, ನೀವು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವ ದೃಶ್ಯಗಳನ್ನು ಆನಂದಿಸಿ. ಹೀಗಾಗಿ ನಿಧಾನವಾಗಿ ಚಾರಣವನ್ನು ಎಂಜಾಯ್‌ ಮಾಡಿ.(Unsplash)
ಹೊಸಬರು ಮಾಡುವ ಸಾಮಾನ್ಯ ತಪ್ಪು ಏನೆಂದರೆ, ಅನಗತ್ಯ ವಸ್ತುಗಳನ್ನು ಬ್ಯಾಕ್‌ಪ್ಯಾಕ್‌ಗಳಲ್ಲಿ ತುಂಬುವುದು. ನೀವು ಲಘು ಉಪಕರಣಗಳು, ಲಘು ಟ್ರೆಕ್ಕಿಂಗ್ ಆಹಾರವನ್ನು ಮಾತ್ರ ಕೊಂಡೊಯ್ಯಿರಿ. ಅನಗತ್ಯ ವಸ್ತುಗಳನ್ನು ಬ್ಯಾಗ್‌ನಲ್ಲಿ ತುಂಬಬೇಡಿ.
(6 / 6)
ಹೊಸಬರು ಮಾಡುವ ಸಾಮಾನ್ಯ ತಪ್ಪು ಏನೆಂದರೆ, ಅನಗತ್ಯ ವಸ್ತುಗಳನ್ನು ಬ್ಯಾಕ್‌ಪ್ಯಾಕ್‌ಗಳಲ್ಲಿ ತುಂಬುವುದು. ನೀವು ಲಘು ಉಪಕರಣಗಳು, ಲಘು ಟ್ರೆಕ್ಕಿಂಗ್ ಆಹಾರವನ್ನು ಮಾತ್ರ ಕೊಂಡೊಯ್ಯಿರಿ. ಅನಗತ್ಯ ವಸ್ತುಗಳನ್ನು ಬ್ಯಾಗ್‌ನಲ್ಲಿ ತುಂಬಬೇಡಿ.(File Photo)

    ಹಂಚಿಕೊಳ್ಳಲು ಲೇಖನಗಳು