logo
ಕನ್ನಡ ಸುದ್ದಿ  /  Photo Gallery  /  Turkey Earthquake: Sniffer Dogs Of Ndrf Saved A Six-year-old Girl Who Was Trapped Under The Debris

Turkey Earthquake: ಭೂಕಂಪದ ಅವಶೇಷಗಳಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಭಾರತದ ಪತ್ತೆದಾರಿ ಶ್ವಾನಗಳು

Feb 13, 2023 12:12 PM IST

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಎನ್‌ಡಿಆರ್‌ಎಫ್​ನ ಜೂಲಿ ಮತ್ತು ರೋಮಿಯೋ ಹೆಸರಿನ ಎರಡು ಪತ್ತೆದಾರಿ ಶ್ವಾನಗಳು 6 ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ವಿಶೇಷ ಪಾತ್ರವಹಿಸಿವೆ.

  • ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಎನ್‌ಡಿಆರ್‌ಎಫ್​ನ ಜೂಲಿ ಮತ್ತು ರೋಮಿಯೋ ಹೆಸರಿನ ಎರಡು ಪತ್ತೆದಾರಿ ಶ್ವಾನಗಳು 6 ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ವಿಶೇಷ ಪಾತ್ರವಹಿಸಿವೆ.
ಎನ್‌ಡಿಆರ್‌ಎಫ್​ನ ಜೂಲಿ, ರೋಮಿಯೋ, ಹನಿ ಮತ್ತು ರಾಂಬೋ - ಈ ನಾಲ್ಕು ಪತ್ತೆದಾರಿ ನಾಯಿಗಳನ್ನು ಭೂಕಂಪ ಪೀಡಿತ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. 
(1 / 5)

ಕಾಂಕ್ರೀಟ್ ಮತ್ತು ಲೋಹದ ಅಡಿಯಲ್ಲಿಯೂ ಸಿಕ್ಕಿಬಿದ್ದಿರುವ ಮನುಷ್ಯರ ವಾಸನೆಯನ್ನು ಇವುಗಳು ಗ್ರಹಿಸಲು ತರಬೇತಿ ನೀಡಲಾಗಿರುತ್ತದೆ. ಹೀಗಾಗಿ ಈ ನಾಯಿಗಳನ್ನು ರಕ್ಷಣಾ ಕಾರ್ಯಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ.
(2 / 5)

ಜೂಲಿ ಮತ್ತು ರೋಮಿಯೋ ಶ್ವಾನಗಳು ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ಒಂದು ಪ್ರದೇಶದಲ್ಲಿ ಭೂಕಂಪದ ಅವಶೇಷಗಳಡಿ ಸಿಕ್ಕಿಬಿದ್ದಿದ್ದ ಆರು ವರ್ಷದ ಬಾಲಕಿಯನ್ನು ರಕ್ಷಿಸಿವೆ. ವಾಸನೆಯ ಮೂಲಕ ಈ ಬಾಲಕಿ ಜೀವಂತವಾಗಿರುವುದನ್ನು ಶ್ವಾನಗಳು ಪತ್ತೆಹಚ್ಚಿವೆ.   
(3 / 5)

"ಮೊದಲು ಒಂದು ನಾಯಿ ಜೀವಂತವಿರುವ ಬಾಲಕಿಯ ವಾಸನೆಯನ್ನು ಗ್ರಹಿಸಿ ಬೊಗಳಿತು. ನಂತರ ಎರಡನೇ ನಾಯಿಯನ್ನು ಬಿಟ್ಟೆವು. ಇದು, ಬದುಕಿದ್ದಾರೆ ಎಂಬ ಸೂಚನೆಯನ್ನು ದೃಢಪಡಿಸಿತು. ಬಳಿಕ ನಾವು ಬಾಲಕಿಯನ್ನು ಅವಶೇಷಗಳಿಂದ ಹೊರಕ್ಕೆ ತೆಗೆದೆವು" ಎಂದು ಎನ್‌ಡಿಆರ್‌ಎಫ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 
(4 / 5)

ಪ್ರತಿಕೂಲ ವಾತಾವರಣದ ನಡುವೆಯೂ ಆರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬದುಕುಳಿದವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ. ಪವಾಡವೇ ಎಂಬಂತೆ ಅವಶೇಷಗಳಡಿ ಸಿಲುಕಿ, ಊಟ-ನೀರು ಇಲ್ಲದೆಯೇ ಪುಟ್ಟ ಕಂದಮ್ಮಗಳು ಬದುಕುಳಿದಿವೆ. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿವೆ. 
(5 / 5)

    ಹಂಚಿಕೊಳ್ಳಲು ಲೇಖನಗಳು