logo
ಕನ್ನಡ ಸುದ್ದಿ  /  Photo Gallery  /  Uddhav Thackeray And Eknath Shinde Shiv Sena Factions Organised Separate Dasara Rally In Mumbai

Uddhav VS Eknath: ಭಿನ್ನ ದಸರಾ ರ‍್ಯಾಲಿ: ಉದ್ಧವ್‌ VS ಏಕನಾಥ್‌ ನಡುವಿನ ಸ್ಪರ್ಧೆ ತಾರಕಕ್ಕೆ!

Oct 05, 2022 11:28 AM IST

ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿಸಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.

  • ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿಸಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಇಂದು(ಅ.5-ಬುಧವಾರ) ಸಂಜೆ ಶಿವಸೇನೆಯ ಎರಡು ಬಣಗಳಿಂದ ಪ್ರತ್ಯೇಕ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಬಣಗಳ ಸಿದ್ಧತೆ ಜೋರಾಗಿದ್ದು, ಪರಸ್ಪರ ಸ್ಪರ್ಧೆಗಿಳಿಯುವಂತೆ ಸಮಾರಂಭವನ್ನು ಆಯೋಜಿಸಿವೆ. ಈ ಬಾರಿಯ ದಸರಾ ರ‍್ಯಾಲಿಯನ್ನು ಉದ್ಧವ್‌ ಠಾಕೆ ಮತ್ತು ಏಕನಾಥ್‌ ಶಿಂಧೆ ಬಣ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲಿವೆ.
(1 / 5)
ಇಂದು(ಅ.5-ಬುಧವಾರ) ಸಂಜೆ ಶಿವಸೇನೆಯ ಎರಡು ಬಣಗಳಿಂದ ಪ್ರತ್ಯೇಕ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಬಣಗಳ ಸಿದ್ಧತೆ ಜೋರಾಗಿದ್ದು, ಪರಸ್ಪರ ಸ್ಪರ್ಧೆಗಿಳಿಯುವಂತೆ ಸಮಾರಂಭವನ್ನು ಆಯೋಜಿಸಿವೆ. ಈ ಬಾರಿಯ ದಸರಾ ರ‍್ಯಾಲಿಯನ್ನು ಉದ್ಧವ್‌ ಠಾಕೆ ಮತ್ತು ಏಕನಾಥ್‌ ಶಿಂಧೆ ಬಣ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲಿವೆ.(ANI)
ಮುಂಬೈನ ಶಿವಾಜಿ ಪಾರ್ಕ್ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಸೇನಾ ಬಣಗಳ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಸಮಾರಂಭಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವುದರಿಂದ, ಮುಂಬೈ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
(2 / 5)
ಮುಂಬೈನ ಶಿವಾಜಿ ಪಾರ್ಕ್ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಸೇನಾ ಬಣಗಳ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಸಮಾರಂಭಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವುದರಿಂದ, ಮುಂಬೈ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.(ANI)
ಉದ್ಧವ್‌ ಠಾಕ್ರೆ ಮತ್ತು ಏಕನಾಥ್‌ ಶಿಂಧೆ ಬಣ ಪ್ರತ್ಯೇಕ ದಸರಾ ರ‍್ಯಾಲಿಗಾಗಿ, 5,000 ಕ್ಕೂ ಹೆಚ್ಚು ಬಸ್‌ಗಳು, ಹಲವಾರು ಸಣ್ಣ ಪ್ರವಾಸಿ ವಾಹನಗಳು ಮತ್ತು ಕಾರುಗಳು ಮತ್ತು ವಿಶೇಷ ರೈಲುಗಳ ವ್ಯವಸ್ಥೆ ಮಾಡಿವೆ.
(3 / 5)
ಉದ್ಧವ್‌ ಠಾಕ್ರೆ ಮತ್ತು ಏಕನಾಥ್‌ ಶಿಂಧೆ ಬಣ ಪ್ರತ್ಯೇಕ ದಸರಾ ರ‍್ಯಾಲಿಗಾಗಿ, 5,000 ಕ್ಕೂ ಹೆಚ್ಚು ಬಸ್‌ಗಳು, ಹಲವಾರು ಸಣ್ಣ ಪ್ರವಾಸಿ ವಾಹನಗಳು ಮತ್ತು ಕಾರುಗಳು ಮತ್ತು ವಿಶೇಷ ರೈಲುಗಳ ವ್ಯವಸ್ಥೆ ಮಾಡಿವೆ.(ANI)
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ದಸರಾ ರ‍್ಯಾಲಿ ಆಯೋಜಿಸಿದ್ದರೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶಿವಸೇನೆಯ ಏಕನಾಥ್‌ ಶಿಂಧೆ ಬಣ ದಸರಾ ರ‍್ಯಾಲಿ ಆಯೋಜಿಸಿದೆ. ಎರಡೂ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಸೇರಲಿರುವುದು ಖಚಿತವಾಗಿದೆ.
(4 / 5)
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ದಸರಾ ರ‍್ಯಾಲಿ ಆಯೋಜಿಸಿದ್ದರೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶಿವಸೇನೆಯ ಏಕನಾಥ್‌ ಶಿಂಧೆ ಬಣ ದಸರಾ ರ‍್ಯಾಲಿ ಆಯೋಜಿಸಿದೆ. ಎರಡೂ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಸೇರಲಿರುವುದು ಖಚಿತವಾಗಿದೆ.(ANI)
ಈಗಾಗಲೇ ಎರಡೂ ಸಭೆಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಉದ್ಧವ್‌ ಮತ್ತು ಏಕನಾಥ್‌ ಶಿಂಧೆ ಬಣದ ಬೆಂಬಲಿಗರು ಆಗಮಿಸಿದ್ದು, ಅಸಲಿ ಶಿವಸೇನೆ ಪಟ್ಟಕ್ಕಾಗಿ ಕಿತ್ತಾಡುತ್ತಿರುವ ಎರಡು ಬಣಗಳ ನಡುವಿನ ಶಕ್ತಿ ಪ್ರದರ್ಶನ ದೇಶದ ಗಮನ ಸೆಳೆದಿದೆ.
(5 / 5)
ಈಗಾಗಲೇ ಎರಡೂ ಸಭೆಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಉದ್ಧವ್‌ ಮತ್ತು ಏಕನಾಥ್‌ ಶಿಂಧೆ ಬಣದ ಬೆಂಬಲಿಗರು ಆಗಮಿಸಿದ್ದು, ಅಸಲಿ ಶಿವಸೇನೆ ಪಟ್ಟಕ್ಕಾಗಿ ಕಿತ್ತಾಡುತ್ತಿರುವ ಎರಡು ಬಣಗಳ ನಡುವಿನ ಶಕ್ತಿ ಪ್ರದರ್ಶನ ದೇಶದ ಗಮನ ಸೆಳೆದಿದೆ.(ANI)

    ಹಂಚಿಕೊಳ್ಳಲು ಲೇಖನಗಳು