logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Natural Beard Dyes: ಬಿಳಿ ಗಡ್ಡವನ್ನು ಕಪ್ಪು ಮಾಡಲು ನೈಸರ್ಗಿಕ ಪರಿಹಾರಗಳು

Natural Beard Dyes: ಬಿಳಿ ಗಡ್ಡವನ್ನು ಕಪ್ಪು ಮಾಡಲು ನೈಸರ್ಗಿಕ ಪರಿಹಾರಗಳು

Nov 22, 2022 07:18 PM IST

ತಲೆಯ ಮೇಲಿನ ಬಿಳಿ ಕೂದಲುಗಳನ್ನು ಕಪ್ಪು ಮಾಡಲು ಮಾರುಕಟ್ಟೆಯಲ್ಲಿ ಹೇರ್​ ಡೈನಂತಹ ಉತ್ಪನ್ನಗಳು ದೊರಕುತ್ತದೆ. ಗಡ್ಡವನ್ನು ಕಪ್ಪು ಮಾಡಲು ಕೂಡ ಉತ್ಪನ್ನ ಸಿಗುತ್ತದೆ. ಆದರೆ ಇದರಿಂದ ಮುಖದ ಚರ್ಮಕ್ಕೆ ಹಾನಿಯಾಗುತ್ತದೆ. ಕೆಲವು ನೈಸರ್ಗಿಕ ಸಲಹೆಗಳ ಮೂಲಕ ನಿಮ್ಮ ಗಡ್ಡವನ್ನು ಕಪ್ಪಾಗಿ ಕಾಣುವಂತೆ ಮಾಡಬಹುದು.

  • ತಲೆಯ ಮೇಲಿನ ಬಿಳಿ ಕೂದಲುಗಳನ್ನು ಕಪ್ಪು ಮಾಡಲು ಮಾರುಕಟ್ಟೆಯಲ್ಲಿ ಹೇರ್​ ಡೈನಂತಹ ಉತ್ಪನ್ನಗಳು ದೊರಕುತ್ತದೆ. ಗಡ್ಡವನ್ನು ಕಪ್ಪು ಮಾಡಲು ಕೂಡ ಉತ್ಪನ್ನ ಸಿಗುತ್ತದೆ. ಆದರೆ ಇದರಿಂದ ಮುಖದ ಚರ್ಮಕ್ಕೆ ಹಾನಿಯಾಗುತ್ತದೆ. ಕೆಲವು ನೈಸರ್ಗಿಕ ಸಲಹೆಗಳ ಮೂಲಕ ನಿಮ್ಮ ಗಡ್ಡವನ್ನು ಕಪ್ಪಾಗಿ ಕಾಣುವಂತೆ ಮಾಡಬಹುದು.
ಬಿಳಿ ಗಡ್ಡಕ್ಕೆ ಬಣ್ಣ ಹಚ್ಚುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಿಳಿ ಗಡ್ಡವನ್ನು ಕಪ್ಪಾಗಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ..
(1 / 6)

ತೆಂಗಿನ ಎಣ್ಣೆ, ಕರಿಬೇವಿನ ಪುಡಿ, ನೆಲ್ಲಿಕಾಯಿ ಮತ್ತು ಕಪ್ಪು ಎಳ್ಳುಗಳನ್ನು ಬಳಸಿ ಬಿಳಿ ಗಡ್ಡವನ್ನು ಕಪ್ಪು ಮಾಡಬಹುದು. ಅದು ಹೇಗೆ ಗೊತ್ತಾ?
(2 / 6)

ತೆಂಗಿನೆಣ್ಣೆ - ನೆಲ್ಲಿಕಾಯಿ: ಕೊಬ್ಬರಿ ಎಣ್ಣೆ ಮತ್ತು ನೆಲ್ಲಿಕಾಯಿಯನ್ನು ಕೂದಲ ಆರೈಕೆಗಾಗಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ತೆಂಗಿನ ಎಣ್ಣೆಯಲ್ಲಿ ಒಂದು ಚಮಚವಾಗುವಷ್ಟು ನೆಲ್ಲಿಕಾಯಿ ತುಂಡರಿಸಿ 2-3 ನಿಮಿಷಗಳ ಕಾಲ ಕುದಿಸಿ. ಅದರ ನಂತರ ಕೆಳಗಿಳಿಸಿ ತಣ್ಣಗಾಗಲು ಬಿಡಿ. ತಂಪಾಗಿಸಿದ ನಂತರ ನಿಮ್ಮ ಗಡ್ಡಕ್ಕೆ ಅನ್ವಯಿಸಿ. 15 ನಿಮಿಷ ಬಿಟ್ಟು ತೊಳೆಯಿರಿ.
(3 / 6)

ತೆಂಗಿನ ಎಣ್ಣೆ - ಕರಿಬೇವಿನ ಪುಡಿ: ಗಡ್ಡವನ್ನು ಕಪ್ಪಾಗಿಸಲು ಇದನ್ನು ಬಳಸಬಹುದು. ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಹುರಿಯಿರಿ. ತಣ್ಣಗಾದ ನಂತರ ನಿಮ್ಮ ಗಡ್ಡಕ್ಕೆ ಈ ಎಣ್ಣೆಯನ್ನು ಹಚ್ಚಿ. 15 ನಿಮಿಷಗಳ ಕಾಲ ಇರಿಸಿ. ಗಡ್ಡ ಕಪ್ಪು ಆಗುತ್ತದೆ.
(4 / 6)

ಕಪ್ಪು ಎಳ್ಳು: ಕಪ್ಪು ಎಳ್ಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ನಂತರ ಮರುದಿನ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಗಡ್ಡದ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ತೊಳೆಯಿರಿ.
(5 / 6)

ನಿಂಬೆ ರಸ, ರೋಸ್ಮರಿ, ವಿನೆಗರ್: ಒಂದು ಟೀಚಮಚ ಶಿಕಾಕಾಯಿ, ನಿಂಬೆ ರಸ, ವಿನೆಗರ್, ½ ಟೀಚಮಚ ತೆಂಗಿನ ಎಣ್ಣೆ, ಮೊಸರು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಒಣಗಿದ ನಂತರ ತೊಳೆಯಿರಿ.
(6 / 6)

    ಹಂಚಿಕೊಳ್ಳಲು ಲೇಖನಗಳು