logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Essential Oils: ಮನಸ್ಸಿಗೆ ರಿಲಾಕ್ಸ್ ನೀಡುವ ಜೊತೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣ ಈ ತೈಲಗಳು.. ಒಮ್ಮೆ ಟ್ರೈ ಮಾಡಿ

Essential Oils: ಮನಸ್ಸಿಗೆ ರಿಲಾಕ್ಸ್ ನೀಡುವ ಜೊತೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣ ಈ ತೈಲಗಳು.. ಒಮ್ಮೆ ಟ್ರೈ ಮಾಡಿ

Jan 03, 2023 06:32 PM IST

ಕೆಲವು ಎಣ್ಣೆಗಳು ದೇಹ ಮತ್ತು ಮನಸ್ಸನ್ನು ರಿಲಾಕ್ಸ್ ಮಾಡುತ್ತವೆ. ವಿವಿಧ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು. ಈ ಸಾರಭೂತ ತೈಲಗಳು (Essential Oils) ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇವು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತವೆ.

ಕೆಲವು ಎಣ್ಣೆಗಳು ದೇಹ ಮತ್ತು ಮನಸ್ಸನ್ನು ರಿಲಾಕ್ಸ್ ಮಾಡುತ್ತವೆ. ವಿವಿಧ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು. ಈ ಸಾರಭೂತ ತೈಲಗಳು (Essential Oils) ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇವು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತವೆ.
ಸಾರಭೂತ ತೈಲಗಳು ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಸಿನ ಮೇಲೂ ಮ್ಯಾಜಿಕ್​ನಂತೆ ಕೆಲಸ ಮಾಡುತ್ತವೆ. ವಿವಿಧ ಬಗೆಯ ಎಸೆನ್ಷಿಯಲ್​ ಆಯಿಲ್​ಗಳು ಹಾಗೂ ಅವುಗಳ ಪ್ರಯೋಜನಗಳನ್ನು ನೋಡೋಣ ಬನ್ನಿ.. 
(1 / 8)
ಸಾರಭೂತ ತೈಲಗಳು ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಸಿನ ಮೇಲೂ ಮ್ಯಾಜಿಕ್​ನಂತೆ ಕೆಲಸ ಮಾಡುತ್ತವೆ. ವಿವಿಧ ಬಗೆಯ ಎಸೆನ್ಷಿಯಲ್​ ಆಯಿಲ್​ಗಳು ಹಾಗೂ ಅವುಗಳ ಪ್ರಯೋಜನಗಳನ್ನು ನೋಡೋಣ ಬನ್ನಿ.. (Unsplash)
ಶ್ರೀಗಂಧದ ಎಣ್ಣೆ: ಇದು ಸುಗಂಧ ದ್ರವ್ಯಗಳು ಮತ್ತು ಏರ್ ಫ್ರೆಶ್ನರ್​​ಗಳನ್ನು ತಯಾರಿಸಲು ಮಾತ್ರವಲ್ಲದೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ನೆಗಡಿ, ಮೂತ್ರನಾಳದ ಸೋಂಕು, ಜೀರ್ಣಾಂಗವ್ಯೂಹದ ಸಮಸ್ಯೆಗಳು, ಸ್ನಾಯುಗಳ ಸಮಸ್ಯೆ ಇತ್ಯಾದಿಗಳನ್ನು ಗುಣಪಡಿಸುತ್ತದೆ. 
(2 / 8)
ಶ್ರೀಗಂಧದ ಎಣ್ಣೆ: ಇದು ಸುಗಂಧ ದ್ರವ್ಯಗಳು ಮತ್ತು ಏರ್ ಫ್ರೆಶ್ನರ್​​ಗಳನ್ನು ತಯಾರಿಸಲು ಮಾತ್ರವಲ್ಲದೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ನೆಗಡಿ, ಮೂತ್ರನಾಳದ ಸೋಂಕು, ಜೀರ್ಣಾಂಗವ್ಯೂಹದ ಸಮಸ್ಯೆಗಳು, ಸ್ನಾಯುಗಳ ಸಮಸ್ಯೆ ಇತ್ಯಾದಿಗಳನ್ನು ಗುಣಪಡಿಸುತ್ತದೆ. (Unsplash)
ಟೀ ಟ್ರೀ ಆಯಿಲ್: ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದುಂಟಾದ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಹಾಗೂ ಚರ್ಮದ ಸೋಂಕು ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯುತ್ತದೆ. 
(3 / 8)
ಟೀ ಟ್ರೀ ಆಯಿಲ್: ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದುಂಟಾದ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಹಾಗೂ ಚರ್ಮದ ಸೋಂಕು ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯುತ್ತದೆ. (Unsplash)
ಪುದೀನಾ ಎಣ್ಣೆ: ಇದನ್ನು ಸಾರಭೂತ ತೈಲ,  ಕ್ಯಾಪ್ಸುಲ್‌ಗಳಂತಹ ವಿವಿಧ ರೂಪಗಳಲ್ಲಿ ಕಾಣಬಹುದು. ಸಾರಭೂತ ತೈಲಗಳನ್ನು ಅರೋಮಾಥೆರಪಿಯಾಗಿ ಮತ್ತು ನಿಮ್ಮ ಚರ್ಮದ ಆರೈಕೆಯಲ್ಲಿಯೂ ಬಳಸಬಹುದು. ಇದು ತಲೆನೋವು, ನೆಗಡಿ, ವಾಕರಿಕೆ ಮತ್ತು ಸ್ನಾಯು ನೋವನ್ನು ನಿವಾರಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.
(4 / 8)
ಪುದೀನಾ ಎಣ್ಣೆ: ಇದನ್ನು ಸಾರಭೂತ ತೈಲ,  ಕ್ಯಾಪ್ಸುಲ್‌ಗಳಂತಹ ವಿವಿಧ ರೂಪಗಳಲ್ಲಿ ಕಾಣಬಹುದು. ಸಾರಭೂತ ತೈಲಗಳನ್ನು ಅರೋಮಾಥೆರಪಿಯಾಗಿ ಮತ್ತು ನಿಮ್ಮ ಚರ್ಮದ ಆರೈಕೆಯಲ್ಲಿಯೂ ಬಳಸಬಹುದು. ಇದು ತಲೆನೋವು, ನೆಗಡಿ, ವಾಕರಿಕೆ ಮತ್ತು ಸ್ನಾಯು ನೋವನ್ನು ನಿವಾರಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.(Unsplash)
ಜಾಸ್ಮಿನ್ (ಮಲ್ಲಿಗೆ) ಎಣ್ಣೆ: ಇದನ್ನು ಹೆಚ್ಚಾಗಿ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಇದು ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದು ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
(5 / 8)
ಜಾಸ್ಮಿನ್ (ಮಲ್ಲಿಗೆ) ಎಣ್ಣೆ: ಇದನ್ನು ಹೆಚ್ಚಾಗಿ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಇದು ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದು ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.(Unsplash)
ಲ್ಯಾವೆಂಡರ್ ಎಣ್ಣೆ: ಇದು ಅರೋಮಾಥೆರಪಿಯಲ್ಲಿ ಬಳಸುವ ಸಾಮಾನ್ಯ ಸಾರಭೂತ ತೈಲಗಳಲ್ಲಿ ಒಂದಾಗಿದೆ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಆತಂಕ, ಖಿನ್ನತೆ, ನಿದ್ರಾಹೀನತೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ನಂಬಲಾಗಿದೆ.
(6 / 8)
ಲ್ಯಾವೆಂಡರ್ ಎಣ್ಣೆ: ಇದು ಅರೋಮಾಥೆರಪಿಯಲ್ಲಿ ಬಳಸುವ ಸಾಮಾನ್ಯ ಸಾರಭೂತ ತೈಲಗಳಲ್ಲಿ ಒಂದಾಗಿದೆ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಆತಂಕ, ಖಿನ್ನತೆ, ನಿದ್ರಾಹೀನತೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ನಂಬಲಾಗಿದೆ.(Unsplash)
ರೋಸ್​ಶಿಪ್ ಎಣ್ಣೆ: ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಎಂಡಾರ್ಫಿನ್​ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಕೆಳಭಾಗಕ್ಕೆ ಮಸಾಜ್ ಮಾಡುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡಬಹುದು.
(7 / 8)
ರೋಸ್​ಶಿಪ್ ಎಣ್ಣೆ: ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಎಂಡಾರ್ಫಿನ್​ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಕೆಳಭಾಗಕ್ಕೆ ಮಸಾಜ್ ಮಾಡುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡಬಹುದು.(Unsplash)
ಕ್ಯಾಮೊಮೈಲ್ ಎಣ್ಣೆ: ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಅಜೀರ್ಣ, ಗ್ಯಾಸ್, ವಾಕರಿಕೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಆತಂಕಕ್ಕೂ ಚಿಕಿತ್ಸೆ ನೀಡುತ್ತದೆ. ಎಸ್ಜಿಮಾ ಅಥವಾ ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
(8 / 8)
ಕ್ಯಾಮೊಮೈಲ್ ಎಣ್ಣೆ: ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಅಜೀರ್ಣ, ಗ್ಯಾಸ್, ವಾಕರಿಕೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಆತಂಕಕ್ಕೂ ಚಿಕಿತ್ಸೆ ನೀಡುತ್ತದೆ. ಎಸ್ಜಿಮಾ ಅಥವಾ ಮೊಡವೆಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.(Unsplash)

    ಹಂಚಿಕೊಳ್ಳಲು ಲೇಖನಗಳು