logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್​​ ಕ್ರಿಕೆಟ್ ಇತಿಹಾಸದಲ್ಲಿ ಶರವೇಗದ ಅರ್ಧಶತಕ ಸಿಡಿಸಿದವರು ಯಾರು; ಟಾಪ್​-6ರಲ್ಲಿಲ್ಲ ಭಾರತೀಯರು

ಟೆಸ್ಟ್​​ ಕ್ರಿಕೆಟ್ ಇತಿಹಾಸದಲ್ಲಿ ಶರವೇಗದ ಅರ್ಧಶತಕ ಸಿಡಿಸಿದವರು ಯಾರು; ಟಾಪ್​-6ರಲ್ಲಿಲ್ಲ ಭಾರತೀಯರು

Sep 24, 2024 08:00 AM IST

Fastest Fifty in Test Cricket: ಟೆಸ್ಟ್ ಕ್ರಿಕೆಟ್​ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಯಾರು ಎಂದು ನಿಮಗೆ ತಿಳಿದಿದೆಯೇ? ಟಾಪ್-6ರಲ್ಲಿ ಭಾರತದ ಯಾವುದೇ ಆಟಗಾರನ ಹೆಸರಿಲ್ಲ. ಹಿಟ್ಟರ್​​ಗಳಾದ ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್ ಕೂಡ ಟಾಪ್-6ರಲ್ಲಿ ಸ್ಥಾನ ಪಡೆದಿಲ್ಲ.

Fastest Fifty in Test Cricket: ಟೆಸ್ಟ್ ಕ್ರಿಕೆಟ್​ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಯಾರು ಎಂದು ನಿಮಗೆ ತಿಳಿದಿದೆಯೇ? ಟಾಪ್-6ರಲ್ಲಿ ಭಾರತದ ಯಾವುದೇ ಆಟಗಾರನ ಹೆಸರಿಲ್ಲ. ಹಿಟ್ಟರ್​​ಗಳಾದ ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್ ಕೂಡ ಟಾಪ್-6ರಲ್ಲಿ ಸ್ಥಾನ ಪಡೆದಿಲ್ಲ.
ಟಿ20 ಕ್ರಿಕೆಟ್​ನಲ್ಲಿ ವೇಗದ ಅರ್ಧಶತಕ ಸಿಡಿಸಿದವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗದ ಫಿಫ್ಟಿ ಬಾರಿಸಿದವರು ಸಿಗುವುದು ತೀರಾ ವಿರಳ. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಅನ್ನೂ ಟಿ20 ಅಂತೆಯೇ ಆಡುತ್ತಿರುವುದನ್ನು ಗಮನಿಸಬೇಕಾದ ಸಂಗತಿ. ಹಾಗಾದರೆ, ಟೆಸ್ಟ್​ನಲ್ಲಿ ಫಾಸ್ಟೆಸ್ಟ್ ಹಾಫ್ ಸೆಂಚುರಿ ಬಾರಿಸಿದವರು ಯಾರು? ಭಾರತದ ಬ್ಯಾಟರ್​​ಗಳು ಸ್ಥಾನ ಪಡೆದಿದ್ದಾರೆಯೇ? ಇಲ್ಲಿದೆ ಉತ್ತರ.
(1 / 7)
ಟಿ20 ಕ್ರಿಕೆಟ್​ನಲ್ಲಿ ವೇಗದ ಅರ್ಧಶತಕ ಸಿಡಿಸಿದವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗದ ಫಿಫ್ಟಿ ಬಾರಿಸಿದವರು ಸಿಗುವುದು ತೀರಾ ವಿರಳ. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಅನ್ನೂ ಟಿ20 ಅಂತೆಯೇ ಆಡುತ್ತಿರುವುದನ್ನು ಗಮನಿಸಬೇಕಾದ ಸಂಗತಿ. ಹಾಗಾದರೆ, ಟೆಸ್ಟ್​ನಲ್ಲಿ ಫಾಸ್ಟೆಸ್ಟ್ ಹಾಫ್ ಸೆಂಚುರಿ ಬಾರಿಸಿದವರು ಯಾರು? ಭಾರತದ ಬ್ಯಾಟರ್​​ಗಳು ಸ್ಥಾನ ಪಡೆದಿದ್ದಾರೆಯೇ? ಇಲ್ಲಿದೆ ಉತ್ತರ.
Misbah ul haq : ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅತಿವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಿಸ್ಬಾ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕವಾಗಿದ್ದು, ಈ ದಾಖಲೆಯನ್ನು ಮುರಿಯಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ.
(2 / 7)
Misbah ul haq : ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅತಿವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಿಸ್ಬಾ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕವಾಗಿದ್ದು, ಈ ದಾಖಲೆಯನ್ನು ಮುರಿಯಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ.(ICC X Handle)
David Warner: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ವಾರ್ನರ್ 2017 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಸಿಡ್ನಿ ಕ್ರಿಕೆಟ್ ಮೈದಾನವು ವಾರ್ನರ್ ಅವರ ತವರು ಮೈದಾನವೂ ಆಗಿದೆ.
(3 / 7)
David Warner: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ವಾರ್ನರ್ 2017 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಸಿಡ್ನಿ ಕ್ರಿಕೆಟ್ ಮೈದಾನವು ವಾರ್ನರ್ ಅವರ ತವರು ಮೈದಾನವೂ ಆಗಿದೆ.(ICC X Handle)
Jacques Kallis: ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಮೂರನೇ ಸ್ಥಾನದಲ್ಲಿದ್ದಾರೆ. 2005 ರಲ್ಲಿ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕಾಲಿಸ್ ಜಿಂಬಾಬ್ವೆ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
(4 / 7)
Jacques Kallis: ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಮೂರನೇ ಸ್ಥಾನದಲ್ಲಿದ್ದಾರೆ. 2005 ರಲ್ಲಿ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕಾಲಿಸ್ ಜಿಂಬಾಬ್ವೆ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.(ICC X Handle)
Ben Stokes: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕಗಳಲ್ಲಿ ಜಾಕ್ ಕಾಲೀಸ್ ಅವರಂತೆ ಬೆನ್ ಸ್ಟೋಕ್ಸ್ ಕೂಡ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ನಾಯಕ 2024 ರಲ್ಲಿ ಬರ್ಮಿಂಗ್​ಹ್ಯಾಮ್​​ ಟೆಸ್ಟ್​​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು.
(5 / 7)
Ben Stokes: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕಗಳಲ್ಲಿ ಜಾಕ್ ಕಾಲೀಸ್ ಅವರಂತೆ ಬೆನ್ ಸ್ಟೋಕ್ಸ್ ಕೂಡ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ನಾಯಕ 2024 ರಲ್ಲಿ ಬರ್ಮಿಂಗ್​ಹ್ಯಾಮ್​​ ಟೆಸ್ಟ್​​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು.(ICC X Handle)
Shane Shillingford: 2014ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್​ನ ಬೌಲರ್ ಶೇನ್ ಶಿಲ್ಲಿಂಗ್‌ಫೋರ್ಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಶಿಲ್ಲಿಂಗ್‌ಫೋರ್ಡ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
(6 / 7)
Shane Shillingford: 2014ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್​ನ ಬೌಲರ್ ಶೇನ್ ಶಿಲ್ಲಿಂಗ್‌ಫೋರ್ಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಶಿಲ್ಲಿಂಗ್‌ಫೋರ್ಡ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.(WICB Media)
Shahid Afridi: 2005ರಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಶಾಹೀದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಅಫ್ರಿದಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ 168 ರನ್‌ಗಳಿಂದ ಸೋಲಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಟಾಪ್​-6 ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆದಿಲ್ಲ.
(7 / 7)
Shahid Afridi: 2005ರಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಶಾಹೀದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಅಫ್ರಿದಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ 168 ರನ್‌ಗಳಿಂದ ಸೋಲಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಟಾಪ್​-6 ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆದಿಲ್ಲ.(ICC X Handle)

    ಹಂಚಿಕೊಳ್ಳಲು ಲೇಖನಗಳು