logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗು ಬೇಕು, ಆದರೆ ತಕ್ಷಣಕ್ಕೆ ಬೇಡ ಅನ್ನೋರಿಗೆ ಅಂಡಾಣು ಘನೀಕರಣ ನೆಚ್ಚಿನ ಆಯ್ಕೆ ಆಗ್ತಿದೆ; ಏನಿದು ಹೊಸ ಬೆಳವಣಿಗೆ -ಸಮಗ್ರ ಮಾಹಿತಿ

ಮಗು ಬೇಕು, ಆದರೆ ತಕ್ಷಣಕ್ಕೆ ಬೇಡ ಅನ್ನೋರಿಗೆ ಅಂಡಾಣು ಘನೀಕರಣ ನೆಚ್ಚಿನ ಆಯ್ಕೆ ಆಗ್ತಿದೆ; ಏನಿದು ಹೊಸ ಬೆಳವಣಿಗೆ -ಸಮಗ್ರ ಮಾಹಿತಿ

Sep 18, 2024 05:17 PM IST

ಕೆಲ ವರ್ಷಗಳ ಬಳಿಕ ಬೇಕೆಂದಾಗ ಗರ್ಭಧಾರಣೆ ಮಾಡಲು ಬಯಸುವ ಮಹಿಳೆಯರಲ್ಲಿ ಅಂಡಾಣು ಘನೀಕರಣ ಟ್ರೆಂಡ್ ಹೆಚ್ಚಳವಾಗುತ್ತಿದೆ. ಏನಿದು ಅಂಡಾಣು ಘನೀಕರಣ ಪ್ರಕ್ರಿಯೆ, ಇದು ಗರ್ಭಧಾರಣೆಗೆ ಹೇಗೆ ಪ್ರಯೋಜನಕಾರಿ, ಎಷ್ಟು ಸಮಯ ಬೇಕು, ಖರ್ಚು ಎಷ್ಟಾಗುತ್ತೆ ಎಂಬಿತ್ಯಾದಿ ವಿವರ.

ತಡವಾಗಿ ಮಕ್ಕಳನ್ನು ಹೆರುವ ಟ್ರೆಂಡ್ ಹೆಚ್ಚಳವಾಗುತ್ತಿದ್ದು, ಈ ರೀತಿ ಬಯಸುವ ಮಹಿಳೆಯರು ಅಂಡಾಣು ಘನೀಕರಣ (Egg Freezing) ತಂತ್ರದ ಮೊರೆ ಹೋಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಈ ಪ್ರಕ್ರಿಯೆಗೆ ಒಳಗಾಬೇಕು ಎನ್ನುತ್ತಾರೆ ಪರಿಣತರು.
(1 / 8)

ಸಣ್ಣ ವಯಸ್ಸಿನಲ್ಲೆ ಅಂಡಾಣು ಘನೀಕರಣ ಮಾಡಿಸಿಕೊಳ್ಳಬೇಕು ಎಂದು ಹೇಳುವುದೇಕೆ? ಅಂಡಾಣು ಘನೀಕರಣದ ವಿಷಯಕ್ಕೆ ಬಂದಾಗ, ಮಹಿಳೆಯರು 35 ವರ್ಷ ದಾಟುವ ಮೊದಲೇ ಇದನ್ನು ಮಾಡಬೇಕು ಎಂದು ಪರಿಣತರು ಶಿಫಾರಸು ಮಾಡುತ್ತಾರೆ. ಈ ಹಂತದಲ್ಲಿ, ಸಾಮಾನ್ಯವಾಗಿ ಮಹಿಳೆಯರು ಅತ್ಯುತ್ತಮ ಆರೋಗ್ಯ ಹೊಂದಿರುತ್ತಾರೆ ಎಂಬುದು ಇದಕ್ಕೆ ಕಾರಣ.
(2 / 8)

ಏನಿದು ಅಂಡಾಣು ಘನೀಕರಣ- ಇದು ಹೊಸ ತಂತ್ರಜ್ಞಾನವಾಗಿದೆ. ಇದರಲ್ಲಿ ಅಂಡಾಣುಗಳನ್ನು ಮಹಿಳೆಯಿಂದ ಹೊರತೆಗೆಯಲಾಗುತ್ತದೆ. ನಂತರ ಅವುಗಳನ್ನು ಘನೀಕರಿಸಿ ಇಡಲಾಗುತ್ತದೆ. ಮುಂದೆ ಮಹಿಳೆ ತಾನು ಗರ್ಭ ಧರಿಸಬೇಕು ಎಂದು ಬಯಸಿದಾಗ, ಈ ಘನೀಕರಿಸಿದ ಅಂಡಾಣುವನ್ನು ಮತ್ತೆ ಸಹಜ ಸ್ಥಿತಿಗೆ ತಂದು ಗರ್ಭಾಶಯಕ್ಕೆ ಸೇರಿಸಲಾಗುತ್ತದೆ.
(3 / 8)

ಅಂಡಾಣು ಘನೀಕರಣಕ್ಕೆ ವಯೋಮಿತಿ ಏನು- ಅಥವಾ ಅಂಡಾಣು ಘನೀಕರಿಸುವುದಕ್ಕೆ ಯಾವ ವಯಸ್ಸು ಸೂಕ್ತ ಎಂದು ಕೇಳಿದರೆ, 20 ರಿಂದ 35 ವರ್ಷದೊಳಗೆ ನಡೆಸಬೇಕಾದ ಪ್ರಕ್ರಿಯೆ ಇದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ವಯಸ್ಸಿನಲ್ಲಿ, ಮಹಿಳೆಯರು ಉತ್ತಮ ಪ್ರಮಾಣ ಮತ್ತು ಗುಣಮಟ್ಟದ ಅಂಡಾಣುಗಳನ್ನು ಹೊಂದಿರುವುದು ಇದಕ್ಕೆ ಕಾರಣ,
(4 / 8)

ಎಗ್ ಫ್ರೀಜಿಂಗ್ ಅಥವಾ ಅಂಡಾಣು ಘನೀಕರಣ ಪ್ರಕ್ರಿಯೆ ಹೇಗಿರುತ್ತದೆ?- ಸರಳ ಆಪರೇಷನ್ ಮೂಲಕ ಮಹಿಳೆಯ ಅಂಡಾಶಯದಿಂದ ಅಂಡಾಣುಗಳನ್ನು ಹೊರತೆಗೆಯಲಾಗುತ್ತದೆ. ಅದಾಗಿ ಘನೀಕರಿಸಿ ಇರಿಸಲಾಗುತ್ತದೆ.
(5 / 8)

ಅಂಡಾಣು ಘನೀಕರಣ ಪ್ರಕ್ರಿಯೆಗೆ ಎಷ್ಟು ಹೊತ್ತು ಬೇಕು? ಸಂಪೂರ್ಣ ಅಂಡಾಣು ಘನೀಕರಣ ಪ್ರಕ್ರಿಯೆಯು ಪೂರ್ಣಗೊಳ್ಳಲು 2 ರಿಂದ 3 ವಾರ ಬೇಕಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಪ್ರಕ್ರಿಯೆಯನ್ನು 2 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ.
(6 / 8)

ಭಾರತದಲ್ಲಿ ಅಂಡಾಣು ಘನೀಕರಣದ ವೆಚ್ಚವು ವಿಭಿನ್ನ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಕ್ಲಿನಿಕ್, ವೈದ್ಯರು ಮತ್ತು ಬಳಸಿದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಭಾರತದಲ್ಲಿ ಅಂಡಾಣು ಘನೀಕರಣ ವೆಚ್ಚವು ಸರಾಸರಿ 50,000 ರಿಂದ 2,50,000 ರೂಪಾಯಿ ಇದೆ.
(7 / 8)

ಅನೇಕ ನಟಿಯರು, ಟಿವಿ ಸೆಲಿಬ್ರಿಟಿಗಳು ವೃತ್ತಿ ಜೀವನಕ್ಕಾಗಿ ತಡವಾಗಿ ಮದುವೆ, ಸಂಸಾರ ಜೀವನದ ಕಡೆಗೆ ಹೋಗುತ್ತಾರೆ. ಅಂಥವರು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ, ಅಂಡಾಣು ಘನೀಕರಣದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ.
(8 / 8)

    ಹಂಚಿಕೊಳ್ಳಲು ಲೇಖನಗಳು