logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Mar 11, 2024 02:37 PM IST

ನ್ಯೂಜಿಲ್ಯಾಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಸದ್ಯ ಅಗ್ರ ಸ್ಥಾನ ಪಡೆದ ತಂಡಗಳು ಯಾವುದು ಎಂಬುದನ್ನು ನೋಡೋಣ.

  • ನ್ಯೂಜಿಲ್ಯಾಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಸದ್ಯ ಅಗ್ರ ಸ್ಥಾನ ಪಡೆದ ತಂಡಗಳು ಯಾವುದು ಎಂಬುದನ್ನು ನೋಡೋಣ.
ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.  
(1 / 5)
ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.  (AFP)
ಆಸ್ಟ್ರೇಲಿಯಾ ವಿರುದ್ಧ ಸೋತ ಕಿವೀಸ್‌. ಮೂರನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಕಿವೀಸ್ 50.00ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ, ಪ್ರತಿ ಗೆಲುವಿಗೆ 12 ಅಂಕಗಳು ಸಿಗುತ್ತವೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಎರಡೂ ತಂಡಗಳು ತಲಾ 4 ಅಂಕ ಗಳಿಸಲಿವೆ. ಒಂದು ವೇಳೆ ಟೆಸ್ಟ್ ಪಂದ್ಯ ಸಮಬಲಗೊಂಡರೆ ಎರಡೂ ತಂಡಗಳು 6 ಅಂಕ ಪಡೆಯುತ್ತವೆ.
(2 / 5)
ಆಸ್ಟ್ರೇಲಿಯಾ ವಿರುದ್ಧ ಸೋತ ಕಿವೀಸ್‌. ಮೂರನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಕಿವೀಸ್ 50.00ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ, ಪ್ರತಿ ಗೆಲುವಿಗೆ 12 ಅಂಕಗಳು ಸಿಗುತ್ತವೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಎರಡೂ ತಂಡಗಳು ತಲಾ 4 ಅಂಕ ಗಳಿಸಲಿವೆ. ಒಂದು ವೇಳೆ ಟೆಸ್ಟ್ ಪಂದ್ಯ ಸಮಬಲಗೊಂಡರೆ ಎರಡೂ ತಂಡಗಳು 6 ಅಂಕ ಪಡೆಯುತ್ತವೆ.(AP)
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಮ್ಮ ಸ್ಥಾನಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಆದರೆ ಭಾರತ ತಂಡವು ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ 74 ಅಂಕ ಗಳಿಸಿದೆ. ಭಾರತವು ಶೇಕಡಾ 68.51ರಷ್ಟು ಅಂಕಗಳನ್ನು ಗಳಿಸಿದೆ. ನಿಧಾನಗತಿಯ ಓವರ್ ರೇಟ್‌ನಿಂದಾಗಿ ತಂಡದ ಅಂಕಗಳಲ್ಲಿ ಈವರೆಗೆ 2 ಅಂಕಗಳನ್ನು ಭಾರತ ಕಳೆದುಕೊಂಡಿದೆ.
(3 / 5)
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಮ್ಮ ಸ್ಥಾನಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಆದರೆ ಭಾರತ ತಂಡವು ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ 74 ಅಂಕ ಗಳಿಸಿದೆ. ಭಾರತವು ಶೇಕಡಾ 68.51ರಷ್ಟು ಅಂಕಗಳನ್ನು ಗಳಿಸಿದೆ. ನಿಧಾನಗತಿಯ ಓವರ್ ರೇಟ್‌ನಿಂದಾಗಿ ತಂಡದ ಅಂಕಗಳಲ್ಲಿ ಈವರೆಗೆ 2 ಅಂಕಗಳನ್ನು ಭಾರತ ಕಳೆದುಕೊಂಡಿದೆ.(PTI)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ತಂಡವು ಎರಡು ಪಂದ್ಯಗಳಲ್ಲಿ ಆಡಿ 50 ಪ್ರತಿಶತ ಗೆಲುವಿನ ಪ್ರಮಾಣದೊಂದಿಗೆ 12 ಅಂಕ ಗಳಿಸಿದೆ. ಐದು ಪಂದ್ಯಗಳಲ್ಲಿ ಶೇ.36.66ರ ಸರಾಸರಿಯಲ್ಲಿ 22 ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಶೇ.33.33ರ ಸರಾಸರಿಯಲ್ಲಿ 16 ಅಂಕ ಗಳಿಸಿರುವ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಶೇ.25.00ರ ಪ್ರಮಾಣದಲ್ಲಿ 12 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಏಳನೇ ಸ್ಥಾನದಲ್ಲಿದೆ.
(4 / 5)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ತಂಡವು ಎರಡು ಪಂದ್ಯಗಳಲ್ಲಿ ಆಡಿ 50 ಪ್ರತಿಶತ ಗೆಲುವಿನ ಪ್ರಮಾಣದೊಂದಿಗೆ 12 ಅಂಕ ಗಳಿಸಿದೆ. ಐದು ಪಂದ್ಯಗಳಲ್ಲಿ ಶೇ.36.66ರ ಸರಾಸರಿಯಲ್ಲಿ 22 ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಶೇ.33.33ರ ಸರಾಸರಿಯಲ್ಲಿ 16 ಅಂಕ ಗಳಿಸಿರುವ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಶೇ.25.00ರ ಪ್ರಮಾಣದಲ್ಲಿ 12 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಏಳನೇ ಸ್ಥಾನದಲ್ಲಿದೆ.(AFP)
ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಸದ್ಯಕ್ಕೆ, ಆಂಗ್ಲರು 17.5 ಶೇಕಡಾ ದರದಲ್ಲಿ 21 ಅಂಕಗಳನ್ನು ಹೊಂದಿದೆ. ಕಳೆದ ಆಶಸ್ ಸರಣಿಯಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ತಂಡವು 19 ಅಂಕಗಳನ್ನು ಕಳೆದುಕೊಂಡಿದೆ. ಶ್ರೀಲಂಕಾ ಆಡಿದ ಎರಡು ಪಂದ್ಯಗಳಲ್ಲಿ ಯಾವುದೇ ಅಂಕಗಳನ್ನು ಗಳಿಸಲು ಸಾಧ್ಯವಾಗದ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
(5 / 5)
ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಸದ್ಯಕ್ಕೆ, ಆಂಗ್ಲರು 17.5 ಶೇಕಡಾ ದರದಲ್ಲಿ 21 ಅಂಕಗಳನ್ನು ಹೊಂದಿದೆ. ಕಳೆದ ಆಶಸ್ ಸರಣಿಯಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ತಂಡವು 19 ಅಂಕಗಳನ್ನು ಕಳೆದುಕೊಂಡಿದೆ. ಶ್ರೀಲಂಕಾ ಆಡಿದ ಎರಡು ಪಂದ್ಯಗಳಲ್ಲಿ ಯಾವುದೇ ಅಂಕಗಳನ್ನು ಗಳಿಸಲು ಸಾಧ್ಯವಾಗದ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.(PTI)

    ಹಂಚಿಕೊಳ್ಳಲು ಲೇಖನಗಳು