logo
ಕನ್ನಡ ಸುದ್ದಿ  /  Sports  /  Amitabh Bachchan Fosse With Messi Ronaldo Big B Said It Was Amazing

Amitabh Bachchan meets Messi and Ronaldo: ಮೆಸ್ಸಿ, ರೊನಾಲ್ಡೊ ಜೊತೆ ಅಮಿತಾಬ್ ಬಚ್ಚನ್ ಫೋಸ್; ಅದ್ಭುತ ಎಂದ ಬಿಗ್ ಬಿ

HT Kannada Desk HT Kannada

Jan 20, 2023 09:37 PM IST

ಕ್ರಿಸ್ಟಿಯಾನೊ ರೊನಾಲ್ಡೊ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ (ಫೋಟೋ-REUTERS)

  • ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ರಿಯಾದ್ ನಲ್ಲಿ ಭೇಟಿಯಾಗಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ (ಫೋಟೋ-REUTERS)
ಕ್ರಿಸ್ಟಿಯಾನೊ ರೊನಾಲ್ಡೊ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ (ಫೋಟೋ-REUTERS)

ರಿಯಾದ್ (ಸೌದಿ ಅರೇಬಿಯಾ): ಒಬ್ಬ ಲೆಜೆಂಡರಿ ನಟ ಇಬ್ಬರು ಲೆಜೆಂಡರಿ ಫುಟ್ಬಾಲ್ ಆಟಗಾರರನ್ನು ಭೇಟಿಯಾದರೆ ಹೇಗಿರುತ್ತೆ? ಇಂತಹ ಅಪರೂಪದ ಘಟನೆಗೆ ಗುರುವಾರ (ಜನವರಿ 19) ರಿಯಾದ್‌ ಸಾಕ್ಷಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಭೇಟಿಯಾಗಿದ್ದಾರೆ.

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ರಿಯಾದ್ ಸೀಸಜ್ ಕಪ್ ಫುಟ್ಬಾಲ್ ಪಂದ್ಯದಲ್ಲಿ ರೊನಾಲ್ಡೊ ಮತ್ತು ಮೆಸ್ಸಿ ಪರಸ್ಪರ ಮುಖಾಮುಖಿಯಾಗಿದ್ದರು. ಈ ಪ್ರದರ್ಶನ ಪಂದ್ಯವು ರಿಯಾದ್ ಸೀಸನ್ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಗಳ ನಡುವೆ ನಡೆಯಿತು. ಮೆಸ್ಸಿ ಪಿಎಸ್ ಜಿ ಮತ್ತು ರೊನಾಲ್ಡೊ ರಿಯಾದ್ ಸೀಸನ್ ಪರ ಆಡಿದ್ದರು.

ಈ ಪಂದ್ಯಕ್ಕೆ ಬಾಲಿವುಡ್ ನ ಅಮಿತಾಬ್ ಬಚ್ಚನ್ ಅತಿಥಿಯಾಗಿ ಬಂದಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಈ ಆಟಗಾರರಲ್ಲಿ ಬ್ರೆಜಿಲ್ ಸ್ಟಾರ್ ನೇಮರ್ ಮತ್ತು ಫ್ರಾನ್ಸ್ ಸ್ಟಾರ್ ಎಂಬಾಪೆ ಕೂಡ ಇದ್ದಾರೆ.

ಆದರೆ ಇತ್ತೀಚೆಗೆ ಅರ್ಜೆಂಟೀನಾವನ್ನು ವಿಶ್ವ ಚಾಂಪಿಯನ್ ಮಾಡಿದ ಮೆಸ್ಸಿಯನ್ನು ಭೇಟಿಯಾದಾಗ, ಅಮಿತಾಭ್ ಅವರು ಪೋರ್ಚುಗಲ್ ಸ್ಟಾರ್ ರೊನಾಲ್ಡೊ ಅವರನ್ನು ಭೇಟಿಯಾದಾಗ ಸ್ವಲ್ಪ ಸಮಯ ಹೆಚ್ಚಾಗಿಯೇ ಕೈಕುಲುಕಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಿ ಅವರೊಂದಿಗೆ ಮಾತನಾಡುವಾಗ ಈ ಇಬ್ಬರು ಆಟಗಾರರು ನಗುತ್ತಿರುವಂತೆ ಕಂಡುಬಂದಿತು.

ಫುಟ್ಬಾಲ್‌ನ ದೊಡ್ಡ ಅಭಿಮಾನಿಯಾಗಿರುವ ಅಮಿತಾಭ್ ಈ ವಿಶೇಷ ಸಂದರ್ಭವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಯಾದ್‌ನಲ್ಲಿ ಸಂಜೆ.. ಇದು ಅದ್ಭುತ ಸಂಜೆ.. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ, ಎಂಬಪ್ಪೆ, ನೇಮರ್ ಒಟ್ಟಿಗೆ ಆಡುತ್ತಿದ್ದಾರೆ, ಈ ಪಂದ್ಯದಲ್ಲಿ ಅತಿಥಿಯಾಗಿ ಭಾಗವಹಿಸಿ ಪಂದ್ಯಕ್ಕೆ ಚಾಲನೆ ನೀಡುವುದು ಪಿಎಸ್ ಜಿ vs ರಿಯಾದ್ ಸೀಸನ್ ಅದ್ಭುತ ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ.

ಅಂತಿಮವಾಗಿ ಈ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ 5-4 ಗೋಲುಗಳಿಂದ ಗೆದ್ದಿತು. ಇದಲ್ಲದೆ, ರೊನಾಲ್ಡೊ ಮತ್ತು ಮೆಸ್ಸಿ ಎರಡೂ ತಂಡಗಳಿಗೆ ಗೋಲುಗಳನ್ನು ತಂದು ಕೊಟ್ಟಿದ್ದಾರೆ. 2021ರ ಸೀಸನ್‌ನಿಂದ ಮೆಸ್ಸಿ ಪಿಎಸ್‌ಜಿ ತಂಡದಲ್ಲಿ ಆಡುತ್ತಿದ್ದರೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ ಅಲ್ ನಾಸರ್ ತಂಡದಲ್ಲಿ ಆಡಲು ಕ್ರಿಸ್ಟಿಯಾನೊ ರೊನಾಲ್ಡೊ ಒಪ್ಪಂದ ಮಾಡಿಕೊಂಡಿದ್ದಾರೆ.

ನನಗೆ ಒಬ್ಬ ಶೆಫ್ ಬೇಕು. ತಿಂಗಳಿಗೆ 4.5 ಲಕ್ಷ ರೂಪಾಯಿ ಕೊಡುತ್ತೇನೆ - ರೊನಾಲ್ಡೊ

ನನಗೆ ಒಬ್ಬ ಶೆಫ್ ಬೇಕು. ತಿಂಗಳಿಗೆ 4.5 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಪೋರ್ಚುಗಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ. ಇಂತಹ ದೊಡ್ಡ ಆಟಗಾರನಿಗೆ ಒಬ್ಬ ಪರ್ಸನಲ್ ಶೆಫ್ ಸಿಗುತ್ತಿಲ್ವಂತೆ.

ರೊನಾಲ್ಡೊ ತನ್ನ ಪತ್ನಿಯೊಂದಿಗೆ ಪೋರ್ಚುಗಲ್‌ನ ಕ್ವಿಂಟಾ ಡ ಮರಿನಾದಲ್ಲಿ ನಿರ್ಮಿಸುತ್ತಿರುವ ಐಷಾರಾಮಿ ಮನೆಗೆ ಹೋಗಲು ಯೋಜಿಸುತ್ತಿದ್ದಾರೆ. ಆದರೆ ಅದಕ್ಕೂ ಮೊದಲು, ಅವರು ತಮ್ಮ ಕುಟುಂಬಕ್ಕೆ ವೈಯಕ್ತಿಕ ಅಡುಗೆ ಮಾಡುವವರನ್ನು ಹುಡುಕುತ್ತಿದ್ದಾರೆ.

ಬಾಯಲ್ಲಿ ನೀರೂರಿಸುವ ಪೋರ್ಚುಗೀಸ್ ಆಹಾರದ ಜೊತೆಗೆ ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳನ್ನು ಅಡುಗೆ ಮಾಡುವ ಬಾಣಸಿಗನನ್ನು ಹುಡುಕುತ್ತಿರುವುದಾಗಿ ರೊನಾಲ್ಡೊ ಹೇಳಿದಿದ್ದಾರೆ.

ಇದಲ್ಲದೆ ಅಡುಗೆ ಕೆಲಸ ಮಾಡುವ ವ್ಯಕ್ತಿಗೆ ತಿಂಗಳಿಗೆ 4500 ಪೌಂಡ್ (ಸುಮಾರು 4.5 ಲಕ್ಷ ರೂ.) ನೀಡುವುದಾಗಿ ಘೋಷಿಸಿದ್ದಾರೆ. ಇಷ್ಟು ಮೊತ್ತದ ಸಂಬಲ ಕೊಡ್ತೀನಿ ಅಂತ ಹೇಳಿದರೂ ಇದುವರೆಗೆ ಯಾರೂ ಮುಂದೆ ಬಂದಿಲ್ಲ. ರೊನಾಲ್ಡೊ 170 ಕೋಟಿ ರೂ.ಗಳ ವೆಚ್ಚದಲ್ಲಿ ಕಣ್ಮನ ಸೆಳೆಯುವ ಬಂಗಲೆಯನ್ನು ನಿರ್ಮಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು