logo
ಕನ್ನಡ ಸುದ್ದಿ  /  Sports  /  Argentina Wins Over Mexico In Fifa World Cup 2022

FIFA World Cup 2022: ಮೆಸ್ಸಿ ಮ್ಯಾಜಿಕ್, ಅರ್ಜೆಂಟೀನಾ ವಿಶ್ವಕಪ್ ಆಸೆ ಜೀವಂತ; ಮುಂದಿನ ಸುತ್ತು ಪ್ರವೇಶಿಸಿದ ಫ್ರಾನ್ಸ್

HT Kannada Desk HT Kannada

Nov 27, 2022 07:15 AM IST

ಲಿಯೋನೆಲ್‌ ಮೆಸ್ಸಿ

    • ಸದ್ಯ ಅರ್ಜೆಂಟೀನಾ ತಂಡವು C ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಪೋಲೆಂಡ್‌ಗಿಂತ ಒಂದು ಪಾಯಿಂಟ್‌ ಹಿಂದಿರುವ ತಂಡಕ್ಕೆ ಇನ್ನೊಂದು ಪಂದ್ಯವಿದೆ.
ಲಿಯೋನೆಲ್‌ ಮೆಸ್ಸಿ
ಲಿಯೋನೆಲ್‌ ಮೆಸ್ಸಿ (REUTERS)

ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದ ಅರ್ಜೆಂಟೀನಾ, ತಮ್ಮ ಪಾಳಿಯ ಎರಡನೇ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಮೆಸ್ಸಿ ತಂಡ ಗೆಲುವಿನ ಲಯಕ್ಕೆ ಮರಳುವುದರೊಂದಿಗೆ 16ರ ಸುತ್ತಿಗೆ ಅರ್ಹತೆ ಪಡೆಯಲು ದಾರಿ ಸುಗಮವಾಗಿಸಿದೆ. ಮೆಸ್ಸಿ ಅಮೋಘ ಆಟವಾಡುವುದರ ಮೂಲಕ ತಮ್ಮ ತಂಡದ ವಿಶ್ವಕಪ್‌ ಆಸೆಯನ್ನು ಜೀವಂತವಾಗಿರಿಸಿದರು.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಸೌದಿ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಹೀಗಾಗಿ ಮೆಕ್ಸಿಕೋ ವಿರುದ್ಧದ ಪಂದ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಭಾರತ ಸೇರಿದಂತೆ ಅರ್ಜೆಂಟೀನಾ ತಂಡಕ್ಕೆ ಜಾಗತಿಕವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಲಿಯೋನೆಲ್ ಮೆಸ್ಸಿ ಅವರ ಅಮೋಘ ದೀರ್ಘಶ್ರೇಣಿಯ ಸ್ಟ್ರೈಕ್ ಮತ್ತು ಎಂಜೊ ಫೆರ್ನಾಂಡಿಸ್ ಅವರ ಅದ್ಭುತ ಗೋಲಿನ ನೆರವಿನಿಂದ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಸಿ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಅರ್ಜೆಂಟೀನಾ 2-0 ಗೋಲುಗಳಿಂದ ಪ್ರಾಬಲ್ಯ ಮೆರೆಯಿತು.

ಸದ್ಯ ಅರ್ಜೆಂಟೀನಾ ತಂಡವು C ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಪೋಲೆಂಡ್‌ಗಿಂತ ಒಂದು ಪಾಯಿಂಟ್‌ ಹಿಂದಿರುವ ತಂಡಕ್ಕೆ ಇನ್ನೊಂದು ಪಂದ್ಯವಿದೆ.

ಫ್ರಾನ್ಸ್ 16ರ ಸುತ್ತಿಗೆ ಎಂಟ್ರಿ

ಸ್ಟಾರ್‌ ಆಟಗಾರ ಕೈಲಿಯನ್ ಬಪ್ಪೆ, ಹಾಲಿ ಚಾಂಪಿಯನ್‌ ತಂಡವನ್ನು 16ರ ಸುತ್ತಿಗೆ ಕರೆದೊಯ್ದಿದ್ದಾರೆ. ಒಂದು ಬಾರಿ ಗೋಲು ಗಳಿಸಿದಾಗ, ಡೆನ್ಮಾರ್ಕ್ ಜತೆಗೆ ತಂಡ ಸಮಬಲ ಸಾಧಿಸಿತು. ಹೀಗಾಗಿ ಮತ್ತೊಂದು ಗೋಲು ಬಾರಿಸುವ ಮೂಲಕ ಫ್ರಾನ್ಸ್‌ ಪಂದ್ಯ ಗೆದ್ದಿತು. ಸ್ಟೇಡಿಯಂ 974ರಲ್ಲಿ ನಡೆದ ಪಂದ್ಯದಲ್ಲಿ ಬಪ್ಪೆ ಗರ್ಜಿಸಿದರು. ಇದು 2022ರ ವಿಶ್ವಕಪ್‌ನ ಸತತ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್‌ನ ಆಟಗಾರ ಗಳಿಸಿದ ಮೂರನೇ ಗೋಲು.

ಬಪ್ಪೆ 61ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಎರಡನೇ ಗೋಲು 86ನೇ ನಿಮಿಷದಲ್ಲಿ ಆಂಟೊನಿ ಗ್ರೀಜ್‌ಮನ್ ಎಸೆತದಿಂದ ಬಂದಿತು. ಅದನ್ನು ಬಪ್ಪೆ ಅವರು ಜಿಗಿತದ ಮೂಲಕ ಎದುರಿಸಿದರು.

68ನೇ ನಿಮಿಷದಲ್ಲಿ ಆಂಡ್ರಿಯಾಸ್ ಕ್ರಿಸ್ಟೇನ್ಸನ್ ನೆರವಿನಿಂದ ಡೆನ್ಮಾರ್ಕ್ ಕೂಡಾ ಗೋಲು ಗಳಿಸಿ ಸಮಬಲ ಸಾಧಿಸಿತು. ಆ ಬಳಿಕ ಅಂಕ ಗಳಿಸಲು ಕೆಲವು ಉತ್ತಮ ಅವಕಾಶಗಳನ್ನು ಹೊಂದಿತ್ತು. ಆದರೆ ಇದಕ್ಕೆ ಫ್ರಾನ್ಸ್‌ ಅವಕಾಶ ನೀಡಲಿಲ್ಲ. ಸತತ ಎರಡು ಪಂದ್ಯಗಳ ಬಳಿಕ ಡೆನ್ಮಾರ್ಕ್‌ ಕೇವಲ ಒಂದು ಪಾಯಿಂಟ್‌ನಲ್ಲಿ ಗಳಿಸಿದರೆ, ಫ್ರಾನ್ಸ್ ಆರು ಅಂಕ ಪಡೆದಿದೆ.

ಖಾತೆ ತೆರೆದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಫಿಫಾ ವಿಶ್ವಕಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ತುನಿಷಿಯಾ ವಿರುದ್ಧದ ಪಂದ್ಯದಲ್ಲಿ 1-0 ಅಂತರದಿಂದ ಜಯಗಳಿಸಿದೆ. ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-4 ಅಂತರದ ಸೋಲು ಕಂಡಿದ್ದ ಆಸೀಸ್, ಈ ಗೆಲುವಿನೊಂದಿಗೆ 16ನೇ ಸುತ್ತಿನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಲ್ಲದೆ, ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ತುನಿಷಿಯಾ ವಿರುದ್ಧದ ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ-ಡಿ ಗುಂಪಿನ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಮತ್ತೊಂದೆಡೆ, ಡೆನ್ಮಾರ್ಕ್ ವಿರುದ್ಧ ತುನಿಷಿಯಾದ ಮೊದಲ ಪಂದ್ಯ ಡ್ರಾಗೊಂಡ ನಂತರ ತಂಡದ ರೌಂಡ್-16 ಭರವಸೆ ಹೆಚ್ಚು ಜಟಿಲವಾಗಿದೆ. ಈ ಪಂದ್ಯದಲ್ಲಿ ಸೋಲನುಭವಿಸುವುದರೊಂದಿಗೆ ಮುಂದಿನ ಹಂತಕ್ಕೆ ಮುನ್ನಡೆಯುವ ಸಾಧ್ಯತೆಗಳು ಬಹುತೇಕ ಕೈತಪ್ಪಿದಂತೆ ಕಂಡುಬರುತ್ತಿದೆ.

ಪೋಲೆಂಡ್‌ ವಿರುದ್ಧ ಸೋತ ಸೌದಿ ಅರೇಬಿಯಾ

ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದ ಸೌದಿ ಅರೇಬಿಯಾ, ಎರಡನೇ ಪಂದ್ಯದಲ್ಲಿ ಸೋಲೊಪ್ಪಿದೆ. ಪೋಲೆಂಡ್‌ ವಿರುದ್ಧ 2-0 ಗೋಲುಗಳಿಂದ ಸೋತಿದೆ. ಅರ್ಜೆಂಟೀನಾ ವಿರುದ್ಧ ಮೇಲುಗೈ ಸಾಧಿಸಿದ ತಂಡಕ್ಕೆ ಪೋಲೆಂಡ್‌ ಪುಟಿದೇಳಲು ಎಲ್ಲೂ ಅವಕಾಶ ನೀಡಲಿಲ್ಲ. ಹೀಗಾಗಿ ಸೌದಿ ಆಟಗಾರರಿಂದ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅತ್ತ ಪೋಲೆಂಡ್‌ ಎರಡು ಗೋಲು ಬಾರಿಸಿ ಸುಲಭ ವಿಜಯ ಸಾಧಿಸಿತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು