ODI World Cup: ಆಸ್ಟ್ರೇಲಿಯಾ 450 ರನ್, ಭಾರತ 65ಕ್ಕೆ ಆಲೌಟ್; ಏಕದಿನ ವಿಶ್ವಕಪ್ ಫೈನಲ್ನ ಭವಿಷ್ಯ ನುಡಿದ ಮಿಚೆಲ್ ಮಾರ್ಷ್
May 11, 2023 06:06 PM IST
ಮಿಚೆಲ್ ಮಾರ್ಷ್
- ODI World Cup: ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಆಸಿಸ್ 450 ರನ್ ಬಾರಿಸಲಿದೆ. ಭಾರತ 65ಕ್ಕೆ ಆಲ್ಔಟ್ ಆಗಲಿದೆ ಎಂದು ಮಿಚೆಲ್ ಮಾರ್ಷ್ ಭವಿಷ್ಯ ನುಡಿದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ (ODI World Cup 2023) ಆರಂಭಕ್ಕೆ ಇನ್ನೂ ಐದು ತಿಂಗಳ ಕಾಲ ಸಮಯವಿದೆ. ಈ ಮೆಗಾ ಟೂರ್ನಿಗೆ 12 ವರ್ಷಗಳ ನಂತರ ಭಾರತವು ಆತಿಥ್ಯ ವಹಿಸುತ್ತಿದೆ. 2013ರ ಬಳಿಕ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಭಾರತ, ಈ ಬಾರಿಯಾದರೂ ಟ್ರೋಫಿ ಬರ ನೀಗಿಸುವ ಆತ್ಮ ವಿಶ್ವಾಸದಲ್ಲಿದೆ. ಪ್ರಸ್ತುತ ಟೀಮ್ ಇಂಡಿಯಾದ ಆಟಗಾರರು ಐಪಿಎಲ್ನಲ್ಲಿ (IPL 2023) ಬ್ಯುಸಿಯಾಗಿದ್ದಾರೆ. ಬಿಸಿಸಿಐ ಟೂರ್ನಿಗೆ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮತ್ತೊಂದೆಡೆ ಪಾಕಿಸ್ತಾನವು ಭಾರತಕ್ಕೆ ಬರುತ್ತಾ ಇಲ್ಲವೋ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಹಾಗೆಯೇ ಉಳಿದ ತಂಡಗಳು ಭರ್ಜರಿ ಸಿದ್ಧತೆ ನಡೆಸಿಕೊಳ್ಳುತ್ತಿವೆ. ಇದರ ನಡುವೆಯೇ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಸಂಚಲನ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ 65 ರನ್ಗಳಿಗೆ ಆಲೌಟ್ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
2019ರ ಏಕದಿನ ವಿಶ್ವಕಪ್ ಫೈನಲ್ನ ಸೂಪರ್ ಓವರ್ನಲ್ಲಿ ಇಂಗ್ಲೆಂಡ್ ರೋಮಾಂಚನ ಗೆಲುವು ಸಾಧಿಸಿತು. ಆದರೆ ಇಂಗ್ಲೆಂಡ್ ಅನ್ನು ಹಾಲಿ ಚಾಂಪಿಯನ್ ಪಟ್ಟದಿಂದ ತೊಲಗಿಸಲು ಮುಂದಾದ ಆಸ್ಟ್ರೇಲಿಯಾ, 2015ರ ಬಳಿಕ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2015ರ ಟೂರ್ನಿಯಂತೆಯೇ ಈ ಬಾರಿಯೂ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಆಲ್ ರೌಂಡರ್ ಮಿಚೆಲ್ ಮಾರ್ಷ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಮಿಚೆಲ್ ಮಾರ್ಷ್, 2015ರಲ್ಲಿ ಐಪಿಎಲ್ 2023ರ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸುತ್ತಿರುವ ಮಿಚೆಲ್ ಮಾರ್ಷ್, 2023ರ ಏಕದಿನ ವಿಶ್ವಕಪ್ ಫೈನಲ್ ಕುರಿತು ಭಂಡ ಧೈರ್ಯದ ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ ಪ್ರವೇಶಿಸಲಿದೆ. ಆದರೆ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಎಷ್ಟು ಸ್ಕೋರ್ ಮಾಡಲಿವೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಫೈನಲ್ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಲಿದೆ. 50 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 450 ರನ್ ಗಳಿಸುತ್ತೇವೆ. ಇದಕ್ಕೆ ಪ್ರತಿಯಾಗಿ ಟೀಮ್ ಇಂಡಿಯಾ ಕೇವಲ 65 ರನ್ಗಳಿಗೆ ಆಲೌಟ್ ಆಗಲಿದೆ ಎಂದು ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ಪಾಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಕುರಿತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಜೊತೆಗೆ ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಜೊತೆಗೆ ಮಿಚೆಲ್ ಮಾರ್ಷ್ ವಿರುದ್ಧ ಕಿಡಿಕಾರಿದ್ದಾರೆ.
ಏಕದಿನ ವಿಶ್ವಕಪ್ಗೆ ಸಂಬಂಧಿಸಿದ ಸುದ್ದಿ
Ind vs Pak: ಏಕದಿನ ವಿಶ್ವಕಪ್; ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಕದನಕ್ಕೆ ಡೇಟ್ ಫಿಕ್ಸ್; ನಮ್ಮ ದೇಶಕ್ಕೆ ಬರಲು ಪಿಸಿಬಿ ಒಪ್ಪಿಗೆ
2023ರ ಏಕದಿನ ವಿಶ್ವಕಪ್ಗಾಗಿ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಒಪ್ಪಿಕೊಂಡಿದೆ. ಈ ಹಿಂದೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ಪಿಸಿಬಿ, ಬಿಸಿಸಿಐ ಮುಂದೆ ತಲೆಬಾಗಿದಂತಿದೆ. ಕ್ರಿಕ್ಬಜ್ ವರದಿಯ ಪ್ರಕಾರ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು (England vs New Zealand) ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.