logo
ಕನ್ನಡ ಸುದ್ದಿ  /  Sports  /  Cricket News Captain Rohit Sharma Is Looking Lazy On The Field Due To Their Heavy Weight Says Salman Bhatt Prs

Rohit Sharma: ರೋಹಿತ್​ ಶರ್ಮಾ ತನ್ನ ದೇಹಭಾರದಿಂದ ಸೋಮಾರಿಯಾಗ್ತಿದ್ದಾರೆ; ಅದಕ್ಕೆ ಫಿಟ್ನೆಸ್ ಲೆವೆಲ್​ ಕಾರಣ; ಪಾಕ್ ಮಾಜಿ ಕ್ರಿಕೆಟಿಗ ಟೀಕೆ

Prasanna Kumar P N HT Kannada

Jun 02, 2023 08:18 AM IST

ರೋಹಿತ್​ ಶರ್ಮಾ ಫಿಟ್​ನೆಸ್​ ಕುರಿತು ಸಲ್ಮಾನ್​ ಭಟ್​ ಹೇಳಿಕೆ

    • ರೋಹಿತ್​ ಶರ್ಮಾ (Rohit Sharma) ನಾಯಕನಾಗಿ​ ಎಲ್ಲರಿಗೂ ಮಾದರಿಯಾಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಏನೆಂಬುದು ಕೂಡ ಎಲ್ಲರಿಗೂ ಗೊತ್ತಿದೆ. ಅದು ಫಿಟ್​ನೆಸ್​ ಎಂದು ಸಲ್ಮಾನ್​ ಭಟ್ ​(Salman Bhatt) ಹೇಳಿದ್ದಾರೆ .
ರೋಹಿತ್​ ಶರ್ಮಾ ಫಿಟ್​ನೆಸ್​ ಕುರಿತು ಸಲ್ಮಾನ್​ ಭಟ್​ ಹೇಳಿಕೆ
ರೋಹಿತ್​ ಶರ್ಮಾ ಫಿಟ್​ನೆಸ್​ ಕುರಿತು ಸಲ್ಮಾನ್​ ಭಟ್​ ಹೇಳಿಕೆ

16ನೇ ಆವೃತ್ತಿಯ ರಂಗುರಂಗಿನ ಐಪಿಎಲ್ (IPL 2023)​​ ಮುಗೀತು. ಇನ್ನೇನಿದ್ದರೂ ಟೀಮ್​ ಇಂಡಿಯಾ ಆಟಗಾರರ ಗಮನ ಅಂತಾರಾಷ್ಟ್ರೀಯ ಕ್ರಿಕೆಟ್​ ಕಡೆ. ಜೂನ್​ 7ರಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ (ICC World Test Championship Final 2023) ಭಾರಿ ದೊಡ್ಡ ಮಟ್ಟದಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾ ಆಟಗಾರರು, ಲಂಡನ್​ನಲ್ಲಿ ಭರ್ಜರಿ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ನಾಯಕ ರೋಹಿತ್​ ಶರ್ಮಾ (Rohit Sharma) ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಐಪಿಎಲ್​​ ಕಳಪೆ ಪ್ರದರ್ಶನ

ಪ್ರಸಕ್ತ ಆವೃತ್ತಿಯ ಮುಕ್ತಾಯದ ಬೆನ್ನಲ್ಲೇ ರೋಹಿತ್​ ಶರ್ಮಾ ವಿರುದ್ಧ ಟೀಕೆಗಳು ಕೇಳಿ ಬಂದಿವೆ. 16 ಪಂದ್ಯಗಳಲ್ಲಿ ಕಣಕ್ಕಿಳಿದ ರೋಹಿತ್​, ಕೇವಲ 20.75ರ ಸರಾಸರಿಯಲ್ಲಿ 332 ರನ್​ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಕಳೆದ ನಾಲ್ಕು ಸೀಸನ್​ಗಳಿಂತ ಈ ಬಾರಿ ಉತ್ತಮ ಸ್ಟ್ರೈಕ್​ರೇಟ್​​​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಗಳಿಸಿದ್ದು ಕಡಿಮೆ ರನ್​ ಆದರೂ, ಅವು ಬಂದಿದ್ದು ಕೂಡ ಮಹತ್ವದ ಪಂದ್ಯಗಳಲ್ಲಿ.

ಫಿಟ್​ನೆಸ್​ ಕುರಿತು ಟೀಕೆ

ಐಪಿಎಲ್​​​​ ಬ್ಯಾಟಿಂಗ್​​​ಗೂ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಹೋಲಿಕೆ ಮಾಡಲಾಗುತ್ತಿಲ್ಲ. ಅವರ ದೃಷ್ಟಿ ಪ್ರಮುಖ ನೆಡಲು ಕಾರಣ, ಅವರ ಫಿಟ್​ನೆಸ್. ಫಿಟ್​ನೆಸ್​ ಬದಲಾಗದಿದ್ದರೆ, ಭವಿಷ್ಯದ ಕ್ರಿಕೆಟ್​ಗೆ ತೊಂದರೆಯಾಗುವ ಸಾಧ್ಯತೆಯೂ ಇದೆ. ಇದೇ ವಿಚಾರವಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಭಟ್ (Salman Bhatt) ರೋಹಿತ್​ ಬಾಡಿ ಲಾಂಗ್ವೇಜ್​ ಅನ್ನು ಟೀಕಿಸಿದ್ದಾರೆ. ಮುಂದಿನ ದಿನಗಳಲ್ಲಿ ರೋಹಿತ್​​​ ಶರ್ಮಾಗೆ ಫಿಟ್ನೆಸ್​ ಎಷ್ಟು ಮಹತ್ವ ಎಂಬುದು ತಿಳಿಯುತ್ತದೆ ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಲ್ಮಾನ್ ಭಟ್​, ರೋಹಿತ್​ ಶರ್ಮಾ ಮತ್ತು ಎಂಎಸ್​ ಧೋನಿ ಇಬ್ಬರದ್ದೂ ಬೇರೆ ಬೇರೆ ಪ್ರಪಂಚಗಳು. ಆದರೆ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿರುವ ಹಿಟ್​ಮ್ಯಾನ್​ ಇನ್ನೂ ದೂರ ಸಾಗಬೇಕಿದೆ. ನಾಯಕನಾಗಿ​ ಎಲ್ಲರಿಗೂ ಮಾದರಿಯಾಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಏನೆಂಬುದು ಕೂಡ ಎಲ್ಲರಿಗೂ ಗೊತ್ತಿದೆ. ಅದು ಫಿಟ್​ನೆಸ್​ ಎಂದು ಹೇಳಿದ್ದಾರೆ.

ರೋಹಿತ್​ ಆದರ್ಶ ಆಗಬೇಕು

ನಾಯಕನ ಸ್ಥಾನದಲ್ಲಿ ಇರುವ ವ್ಯಕ್ತಿ, ತನ್ನ ತಂಡದ ಸಹ ಆಟಗಾರರಿಗೆ ಆದರ್ಶವಾಗಿರಬೇಕು. ಎಲ್ಲರನ್ನೂ ತನ್ನ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕು. ಆಗಲೇ ಕ್ಯಾಪ್ಟನ್​ಗೆ ಟೀಮ್​ ಮೇಟ್ಸ್​ ಗೌರವಿಸುತ್ತಾರೆ. ರೋಹಿತ್​ರನ್ನು ನೋಡಿದರೆ ಒಬ್ಬ ಆಟಗಾರನಿಗೆ ಫಿಟ್​ನೆಸ್​​ ಎಷ್ಟು ಅವಶ್ಯಕತೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆತನು ಫಿಟ್​ ಆಗಿದ್ದರೆ, ಅವರ ಬ್ಯಾಟಿಂಗ್​ ಜೊತೆಗೆ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೂ ಅವರ ಫಿಟ್​ನೆಸ್​​ನಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡಿಲ್ಲ ಎಂದು ಕಿಡಿಕಾರಿದ್ದಾರೆ.

ರೋಹಿತ್​ ಅವರಿಗೆ ಫಿಟ್​​ನೆಸ್​ ಮೇಲೆ ಗಮನ ಹರಿಸಲು ಇಷ್ಟವಿಲ್ಲ ಎಂಬಂತೆ ತಿಳಿಯುತ್ತಿದೆ. ಅದಕ್ಕೆ ಕಾರಣ ಏನೆಂಬುದು ಆತನಿಗೆ ಮಾತ್ರ ಗೊತ್ತಿರುತ್ತದೆ. ನನ್ನ ಪ್ರಕಾರ ಎಂಎಸ್​ ಧೋನಿ ವಯಸ್ಸಿನವರೆಗೂ ರೋಹಿತ್​ ಶರ್ಮಾ ಕೈಲಿ ಆಡಲು ಆಗುವುದಿಲ್ಲ. ಏಕೆಂದರೆ ಅವರಿಗೆ ಫಿಟ್​ನೆಸ್​​ ಲೆವೆಲ್ಸ್​ ಸಹಕರಿಸುವುದಿಲ್ಲ ಎಂದು ಮಾಜಿ ಕ್ರಿಕೆಟರ್​ ಪ್ರತಿಕ್ರಿಯಿಸಿದ್ದಾರೆ.

ರೋಹಿತ್​ಗೆ ದೇಹಭಾರ

ಟೀಮ್​​ ಇಂಡಿಯಾ ಆಟಗಾರರ ಫಿಟ್ನೆಸ್ ಲೆವೆಲ್ಸ್ ನಾನು ಗಮನಿಸಿರುವ ಮಟ್ಟಿಗೆ ಚೆನ್ನಾಗಿಲ್ಲ. ಕೆಲವು ಹಿರಿಯ ಕ್ರಿಕೆಟಿಗರಿಗೆ ಗುಣಮಟ್ಟಕ್ಕೆ ತಕ್ಕಂತೆ ಫೀಲ್ಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಫಿಟ್‌ನೆಸ್‌ನಲ್ಲಿ ಮಾನದಂಡ ಸೃಷ್ಟಿಸಿದ್ದಾರೆ. ಅದೇ ರೀತಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಫಿಟ್ನೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ರೋಹಿತ್ ಶರ್ಮಾ ತಮ್ಮ ಭಾರದಿಂದ ಮೈದಾನದಲ್ಲಿ ಸೋಮಾರಿಯಾಗಿ ಕಾಣುತ್ತಿದ್ದಾರೆ. ಹಾಗೆಯೇ ರಿಷಭ್​​ ಪಂತ್ ಕೂಡ. ಅವರೆಲ್ಲರೂ ಫಿಟ್ ಆಗಿದ್ದರೆ ಮತ್ತಷ್ಟು ಅಪಾಯಕಾರಿ ಕ್ರಿಕೆಟಿಗರಾಗುತ್ತಾರೆ ಎಂದು ಸಲ್ಮಾನ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು