logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ದಿ ಓವಲ್ ಮೈದಾನದಲ್ಲಿ 140 ವರ್ಷಗಳಿಂದಲೂ ಆಸ್ಟ್ರೇಲಿಯಾ ಕಳಪೆ ದಾಖಲೆ; ಭಾರತದ ರೆಕಾರ್ಡ್ ಹೀಗಿದೆ

WTC Final: ದಿ ಓವಲ್ ಮೈದಾನದಲ್ಲಿ 140 ವರ್ಷಗಳಿಂದಲೂ ಆಸ್ಟ್ರೇಲಿಯಾ ಕಳಪೆ ದಾಖಲೆ; ಭಾರತದ ರೆಕಾರ್ಡ್ ಹೀಗಿದೆ

Jayaraj HT Kannada

Jun 01, 2023 02:59 PM IST

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್

    • World Test Championship Final: ಇಂಗ್ಲೆಂಡ್‌ನಲ್ಲಿ 140 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ ಆಡುತ್ತಿರುವ ಆಸ್ಟ್ರೇಲಿಯಾ, ದಿ ಓವಲ್‌ ಮೈದಾನದಲ್ಲಿ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಇದೇ ಮೈದಾನದಲ್ಲಿ ಡಬ್ಲ್ಯೂಟಿಸಿ ಫೈನಲ್‌ ಪಂದ್ಯ ನಡೆಯುತ್ತಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (AP)

ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship final) ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ತಂಡಗಳು ಸಜ್ಜಾಗಿವೆ. ಭಾರತ ತಂಡದ ಆಟಗಾರರು ಐಪಿಎಲ್‌ ಪಂದ್ಯಗಳು ಮುಗಿದ ಬೆನಲ್ಲೇ ಆಗ್ಲರ ನಾಡಿಗೆ ಹಾರಿದ್ದಾರೆ. ಅತ್ತ ಕಾಂಗರೂಗಳು ಕೂಡಾ ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯಲು ತಯಾರಿ ಆರಂಭಿಸಿದ್ದಾರೆ. ಆದರೆ, ಪಂದ್ಯವು ಇಂಗ್ಲೆಂಡ್‌ನ ದಿ ಓವಲ್‌ (The Oval) ಮೈದಾನದಲ್ಲಿ ನಡೆಯುತ್ತಿದ್ದು, ಇದು ಆಸೀಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭದ ತುತ್ತಲ್ಲ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಇಂಗ್ಲೆಂಡ್‌ ನೆಲದಲ್ಲಿ ಸುಮಾರು 140 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ ಆಡುತ್ತರುವ ಬಲಿಷ್ಠ ಆಸ್ಟ್ರೇಲಿಯಾ, ಅಷ್ಟೊಂದು ಉತ್ತಮ ದಾಖಲೆ ನಿರ್ಮಿಸಿಲ್ಲ. ಅದರಲ್ಲೂ, ಇದೀಗ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿರುವ ದಿ ಓವಲ್‌ನಲ್ಲಿ ಆಸೀಸ್‌ ತಂಡದ್ದು ತೀರಾ ಕಳಪೆ ದಾಖಲೆ. ಇದು ಆಸೀಸ್‌ ತಂಡಕ್ಕೆ ಪಂದ್ಯಕ್ಕೂ ಮುನ್ನವೇ ತಲೆನೋವಾಗಿ ಪರಿಣಮಿಸಿದೆ. ಇತ್ತ ಭಾರತ ತಂಡಕ್ಕೆ ಈ ಅಂಕಿ-ಅಂಶಗಳು ಪಂದ್ಯಕ್ಕೂ ಮುನ್ನವೇ ಧನಾತ್ಮಕ ಯೋಚನೆಯೊಂದಿಗೆ ಕಣಕ್ಕಿಳಿಯುವಂತೆ ಮಾಡಿದೆ.

ದಿ ಓವಲ್‌ನಲ್ಲಿ ಆಸೀಸ್‌ ಕಳಪೆ ದಾಖಲೆ

1880ರಲ್ಲಿ ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ಮೊದಲ ಟೆಸ್ಟ್‌ ಪಂದ್ಯ ಆಡಿದ ಬಳಿಕ, ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ನ ಈ ಪ್ರಮುಖ ಮೈದಾನದಲ್ಲಿ ಈವರೆಗೆ ಒಟ್ಟು 38 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಆದರೆ, ಇದರಲ್ಲಿ ತಂಡ ಗೆಲುವನ್ನು ಸಾಧಿಸಿದ್ದು ಕೇವಲ ಏಳು ಪಂದ್ಯಗಳಲ್ಲಿ ಮಾತ್ರ. ಅಂದರೆ, ಈ ಮೈದಾನದಲ್ಲಿ ಕಾಂಗರೂಗಳ ಗೆಲುವಿನ ಪ್ರಮಾಣ ಕೇವಲ ಶೇಕಡಾ 18.42 ರಷ್ಟು ಮಾತ್ರ. ಇಂಗ್ಲೆಂಡ್‌ನ ಇತರ ಎಲ್ಲಾ ಮೈದಾನಗಳಲ್ಲಿ ಆಸೀಸ್‌ ಗೆಲುವಿನ ಪ್ರಮಾಣ ದಿ ಓವಲ್‌ ಮೈದಾನಕ್ಕಿಂತ ಹೆಚ್ಚಿದೆ.

ಕಳೆದ 50 ವರ್ಷಗಳ ದಾಖಲೆ ಹೀಗಿದೆ

ಈಗ ಇತ್ತೀಚಿನ ಅಂಕಿ ಅಂಶಗಳನ್ನು ನೋಡೋಣ. ದಿ ಓವಲ್‌ನಲ್ಲಿ ಕಳೆದ 50 ವರ್ಷಗಳಲ್ಲಿ ಆಸ್ಟ್ರೇಲಿಯಾ ತಂಡ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. ಮತ್ತೊಂದೆಡೆ, ಇದೇ ಆಸ್ಟ್ರೇಲಿಯಾ ತಂಡವು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಆಡಿದ 29 ಪಂದ್ಯಗಳಲ್ಲಿ 17ರಲ್ಲಿ ಗೆಲುವು ಸಾಧಿಸಿದೆ. ಅಂದರೆ, ಇಲ್ಲಿನ ಗೆಲುವಿನ ಪ್ರಮಾಣ ಬರೋಬ್ಬರಿ 43.59 ಶೇಕಡಾ. ವಿಶೇಷವೆಂದರೆ ಇದು ಆತಿಥೇಯ ಇಂಗ್ಲೆಂಡ್‌ ತಂಡದ ಯಶಸ್ಸಿಗಿಂತಲೂ ಹೆಚ್ಚು. ಇಂಗ್ಲೀಷರು ಲಾರ್ಡ್ಸ್‌ನಲ್ಲಿ ಆಡಿದ 141 ಪಂದ್ಯಗಳಲ್ಲಿ ಶೇಕಡಾ 39.72ರಷ್ಟು ಮಾತ್ರ ಗೆಲುವಿನ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾವು 33.33 ಶೇಕಡಾ ಗೆಲುವಿನ ಪ್ರಮಾಣ ಹೊಂದಿದೆ. ಅಂದರೆ, ಲಾರ್ಡ್ಸ್‌ ಮೈದಾನದಲ್ಲಿ ಆಸ್ಟ್ರೇಲಿಯಾ ದಾಖಲೆಯೇ ಉತ್ತಮವಾಗಿದೆ. ಆದರೆ, ದಿ ಓವಲ್‌ ಮೈದಾನವು ಕಾಂಗರೂಗಳಿಗೆ ಕಂಟಕವಾಗುತ್ತಿದೆ.

ಅತ್ತ, ಆಸ್ಟ್ರೇಲಿಯಾವು ಹೆಡಿಂಗ್ಲಿಯಲ್ಲಿ 34.62 ಶೇಕಡಾ, ಟ್ರೆಂಟ್ ಬ್ರಿಡ್ಜ್‌ನಲ್ಲಿ 30.43 ಶೇಕಡಾ ಮತ್ತು ಓಲ್ಡ್ ಟ್ರಾಫರ್ಡ್ ಮತ್ತು ಎಡ್ಜ್‌ಬಾಸ್ಟನ್‌ನಲ್ಲಿ ಕ್ರಮವಾಗಿ 29.03 ಶೇಕಡಾ ಮತ್ತು 26.67 ಶೇಕಡಾ ಗೆಲುವಿನ ಪ್ರಮಾಣವನ್ನು ಹೊಂದಿದೆ.

ಭಾರತ ದಾಖಲೆ ಉತ್ತಮವಾಗಿದೆಯೇ?

ಮತ್ತೊಂದೆಡೆ, ಇದೇ ಓವಲ್‌ ಮೈದಾನದಲ್ಲಿ ಭಾರತ ತಂಡದ ದಾಖಲೆ ಕೂಡಾ ಅತ್ಯುತ್ತಮ ಎಂಬಂತಿಲ್ಲ. ಟೀಮ್‌ ಇಂಡಿಯಾ ಇಲ್ಲಿ ಗೆದ್ದಿರುವುದು ಕೇವಲ ಎರಡು ಟಸ್ಟ್‌ ಪಂದ್ಯಗಳನ್ನು ಮಾತ್ರ. ಏಳು ಪಂದ್ಯಗಳನ್ನು ಡ್ರಾ ಮಾಡಿದ್ದರೆ, ಉಳಿದಂತೆ ಐದು ಪಂದ್ಯಗಳಲ್ಲಿ ಭಾರತ ಸೋತಿದೆ. ಆದರೆ, ರೋಹಿತ್ ಶರ್ಮಾ ಪಡೆಗಿರುವ ದೊಡ್ಡ ಸಮಾಧಾನಕರ ಅಂಶವೊಂದಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 2021ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ 157 ರನ್‌ಗಳ‌ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಇದು ಕಳೆದ 40 ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಒಲಿಸಿಕೊಂಡ ಮೊದಲ ಜಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು