logo
ಕನ್ನಡ ಸುದ್ದಿ  /  Sports  /  I Will Take Blame As Well Smriti Mandhana After Rcbs Fourth Straight Defeat

RCB: ಏನಾಗ್ತಿದೆ ಅಂತ ಗೊತ್ತಿಲ್ಲ, ಸೋಲಿನ ಸಂಪೂರ್ಣ ಜವಾಬ್ದಾರಿ ನಾನೇ ಹೊರುತ್ತೇನೆ ಎಂದ ಮಂಧಾನ

HT Kannada Desk HT Kannada

Mar 11, 2023 10:43 AM IST

ಸ್ಮೃತಿ ಮಂಧಾನ

    • ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೋಲು ಕಂಡಿತು. ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಸೋಲಿನ ಕುರಿತು ನಾಯಕಿ ಸ್ಮೃತಿ ಮಂಧಾನ ಪ್ರತಿಕ್ರಿಯಿಸಿದ್ದು, ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.
ಸ್ಮೃತಿ ಮಂಧಾನ
ಸ್ಮೃತಿ ಮಂಧಾನ

ಭಾರೀ ನಿರೀಕ್ಷೆಯೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ (Women's Premier League) ಪ್ರವೇಶಿಸಿದ RCB ಸತತ ನಾಲ್ಕೂ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಸೋಲುತ್ತಿರುವುದು ಮ್ಯಾನೇಜ್ ಮೆಂಟ್ ಹಾಗೂ ಅಭಿಮಾನಿಗಳನ್ನು ಕೆರಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಶುಕ್ರವಾರ ರಾತ್ರಿ ಯುಪಿ ವಾರಿಯರ್ಸ್ (UP Warriorz) ವಿರುದ್ಧದ ಪಂದ್ಯದಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore Women) ಸೋಲು ಕಂಡಿತು. ಎದುರಾಳಿಯ ಒಂದು ವಿಕೆಟ್​ ಪಡೆಯಲಾಗದೆ 10 ವಿಕೆಟ್​ಗಳ ಹೀನಾಯ ಪರಾಭವ ಅನುಭವಿಸಿತು. ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಸೋಲಿನ ಕುರಿತು ನಾಯಕಿ ಸ್ಮೃತಿ ಮಂಧಾನ (Smriti Mandhana) ಪ್ರತಿಕ್ರಿಯಿಸಿದ್ದು, ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ.

ಕಳೆದ 4 ಪಂದ್ಯಗಳಿಂದಲೂ ಇದೇ ನಡೆಯುತ್ತಿದೆ. ಪ್ರತಿಯೊಂದು ಪಂದ್ಯದಲ್ಲೂ ಉತ್ತಮವಾಗಿ ಪ್ರಾರಂಭಿಸುತ್ತಿದ್ದೇವೆ. ಆದರೆ ಕೊನೆಯವರೆಗೂ ಮುಂದುವರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಬೌಲರ್‌ಗಳು ಡಿಪೆಂಡ್​ ಮಾಡುವಲ್ಲಿ ವಿಫಲವಾಗುತ್ತಿದ್ದಾರೆ. ಜೊತೆಗೆ ಬ್ಯಾಟ್ಸ್​ಮನ್​​​ಗಳು ಸ್ಕೋರ್​ಬೋರ್ಡ್‌ನಲ್ಲಿ ರನ್​ ಮೊತ್ತ ಏರಿಸುವಲ್ಲಿ ಎಡವುತ್ತಿದ್ದಾರೆ. ಆದರೆ ಏನು ಆಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಹಾಗಾಗಿ ಈ ಸೋಲಿನ ಸಂಪೂರ್ಣ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಹೇಳಿದ್ದಾರೆ.

ಓಪನಿಂಗ್​​, ಪವರ್​​ ಪ್ಲೇನಲ್ಲಿ ರನ್​ ಹರಿದು ಬರುತ್ತಿದೆ. ಆದರೆ ಮಧ್ಯಮ ಓವರ್​​​ಗಳ​ (7 - 15) ನಡುವೆ ರನ್​ ಸರಾಗವಾಗಿ ಹರಿದು ಬರುತ್ತಿಲ್ಲ. ಇದು ತಂಡದ ಹಿನ್ನಡೆಗೆ ಭಾರೀ ಕಾರಣವಾಗುತ್ತಿದೆ. ಈ ಬಗ್ಗೆಯೇ ಹೆಚ್ಚು ಹೆಚ್ಚು ಗಮನ ಹರಿಸುತ್ತೇವೆ. ಮುಂದಿನ ಪಂದ್ಯಗಳಲ್ಲಿಯೂ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ವಾರದಿಂದ ತಂಡಕ್ಕೆ ತುಂಬಾ ಕಷ್ಟವಾಗುತ್ತಿದೆ. ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ಈ ಸೋಲಿನ ಬಗ್ಗೆ ತಂಡದ ಎಲ್ಲರೊಂದಿಗೆ ಚರ್ಚಿಸುತ್ತಿದ್ದೇನೆ. ಕಳೆದ ವಾರ ತುಂಬಾ ಕಷ್ಟಪಟ್ಟೆ. ಅನೇಕ ಜನರು ಮೆಸೇಜ್​​​​ ಮತ್ತು ಫೋನ್‌ಗಳ ಮೂಲಕ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟಿಗರಾದ ನಮಗೆ ಇದು ಹೊಸದಲ್ಲ. ಆದರೆ ನನ್ನ ಕುಟುಂಬದ ಬೆಂಬಲವಿದೆ. ಅವರು ಯಾವಾಗಲೂ ನನಗೆ ಸಹಾಯ ಮಾಡುತ್ತಾರೆ ಎಂದು ವಿವರಿಸಿದ್ದಾರೆ.

ಶುಕ್ರವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲ್​​​ಔಟ್​ ಆಯಿತು. ಎಲಿಸ್​​​ ಪೆರ್ರಿ (52) ಮತ್ತು ಸೋಫಿ ಡಿವೈನ್ (36) ಹೊರತುಪಡಿಸಿ ಉಳಿದವರೆಲ್ಲರೂ ಸಂಪೂರ್ಣ ವಿಫಲರಾದರು. ನಾಯಕಿ ಸ್ಮೃತಿ ಮಂಧಾನ (4), ಕನಿಕಾ ಅಹುಜಾ (8), ಹೀದರ್ ನೈಟ್ (2), ಶ್ರೇಯಾಂಕ ಪಾಟೀಲ್ (15), ಎರಿನ್ ಬರ್ನ್ಸ್ (12), ರಿಚಾ ಘೋಷ್ (1) ಬೇಗನೇ ವಾಪಸ್​ ಆದರು.

ಯುಪಿ ಬೌಲರ್‌ಗಳಲ್ಲಿ ಎಕ್ಲೆಸ್ಟೋನ್ 4 ಮತ್ತು ದೀಪ್ತಿ ಶರ್ಮಾ 4 ವಿಕೆಟ್ ಪಡೆದರು. ಬಳಿಕ ಯುಪಿ 13 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿತು. ತಂಡದ ಆರಂಭಿಕರಾದ ನಾಯಕಿ ಅಲಿಸ್ಸಾ ಹೀಲಿ (47 ಎಸೆತಗಳಲ್ಲಿ ಔಟಾಗದೆ 96 ರನ್​​ ಗಳಿಸಿದರು. ಅವರ ಇನ್ನಿಂಗ್ಸ್​​ನಲ್ಲಿ 18 ಬೌಂಡರಿ, 1 ಸಿಕ್ಸರ್ ಇತ್ತು. ಮತ್ತು ದೇವಿಕಾ ವೈದ್ಯ 31 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಔಟಾಗದೆ 36 ರನ್​ ಸಿಡಿಸಿ ಮಿಂಚಿದರು.  ಆ ಮೂಲಕ ಯುಪಿ ತಂಡಕ್ಕೆ  10 ವಿಕೆಟ್​​ಗಳ ಅಮೋಘ ಜಯ ತಂದುಕೊಟ್ಟರು.

    ಹಂಚಿಕೊಳ್ಳಲು ಲೇಖನಗಳು