logo
ಕನ್ನಡ ಸುದ್ದಿ  /  ಕ್ರೀಡೆ  /  Lsg Vs Mi Eliminator: ನವೀನ್​, ಯಶ್​ ಠಾಕೂರ್ ದರ್ಬಾರ್; ಕೊನೆಯಲ್ಲಿ ನೇಹಾಲ್​ ವಧೇರಾ ಅಬ್ಬರ; ಲಕ್ನೋ ಗೆಲುವಿಗೆ ಬೇಕು 183 ರನ್

LSG vs MI Eliminator: ನವೀನ್​, ಯಶ್​ ಠಾಕೂರ್ ದರ್ಬಾರ್; ಕೊನೆಯಲ್ಲಿ ನೇಹಾಲ್​ ವಧೇರಾ ಅಬ್ಬರ; ಲಕ್ನೋ ಗೆಲುವಿಗೆ ಬೇಕು 183 ರನ್

Prasanna Kumar P N HT Kannada

May 24, 2023 09:35 PM IST

ಲಕ್ನೋ ಸೂಪರ್ ಜೈಂಟ್ಸ್​ ತಂಡದ ಆಟಗಾರರು

    • 16ನೇ ಆವೃತ್ತಿಯ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ಸ್ಪಿನ್​ ಪಿಚ್​​ನಲ್ಲಿ ಮುಂಬೈ, ಲಕ್ನೋ ಸೂಪರ್ ಜೈಂಟ್ಸ್​​ ತಂಡಕ್ಕೆ 183 ರನ್​ಗಳ ಬೃಹತ್​ ಗುರಿ ನೀಡಿದೆ.
ಲಕ್ನೋ ಸೂಪರ್ ಜೈಂಟ್ಸ್​ ತಂಡದ ಆಟಗಾರರು
ಲಕ್ನೋ ಸೂಪರ್ ಜೈಂಟ್ಸ್​ ತಂಡದ ಆಟಗಾರರು (IPL Twitter)

ವೇಗದ ಬೌಲರ್​​ ನವೀನ್​ ಉಲ್​ ಹಕ್​ ಅವರ ಮಾರಕ ಬೌಲಿಂಗ್​ ದಾಳಿಯಿಂದ ಮುಂಬೈ ಇಂಡಿಯನ್ಸ್​ ತತ್ತರಿಸಿತು. ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಬೌಲಿಂಗ್​​ ಎದುರಿಸಲು ಪರದಾಟ ನಡೆಸಿತು. ಆದರೆ ಕೊನೆಯ ಓವರ್​ನಲ್ಲಿ ನೇಹಾಲ್​ ವಧೇರಾ ಸ್ಫೋಟಕ ಬ್ಯಾಟಿಂಗ್​ ಬೃಹತ್​ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಚೆನ್ನೈನ ಚೆಪಾಕ್​​ ಮೈದಾನದಲ್ಲಿ ಲಕ್ನೋ ತಂಡಕ್ಕೆ 183 ರನ್​ಗಳ ಟಾರ್ಗೆಟ್​ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಮಹತ್ವದ ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಮುಂಬೈ ಇಂಡಿಯನ್ಸ್​ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​​​ ಶರ್ಮಾ (15) ಮತ್ತು ಇಶಾನ್​ ಕಿಶನ್ (12)​ ಪವರ್​​ ಪ್ಲೇ ಮುಗಿಯುವುದರೊಳಗೆ ತಂಡಕ್ಕೆ ಡಬಲ್​ ಆಘಾತ ನೀಡಿದರು. ಈ ಹಂತದಲ್ಲಿ ಲಕ್ನೋ ಬೌಲರ್​​ಗಳು ಮೇಲುಗೈ ಸಾಧಿಸಿದರು.

ತಂಡಕ್ಕೆ ಆಸರೆಯಾದ ಗ್ರೀನ್​-ಸೂರ್ಯ

4.2 ಓವರ್​​ಗಳಿಗೆ 38 ರನ್​ ಗಳಿಸಿದ್ದಾಗ 2 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಕ್ಯಾಮರೂನ್​ ಗ್ರೀನ್​ - ಸೂರ್ಯಕುಮಾರ್​ ಯಾದವ್​ ಆಸರೆಯಾದರು. 3ನೇ ವಿಕೆಟ್​ಗೆ 66 ರನ್​​ಗಳ ಜೊತೆಯಾಟವಾಡಿದರು. ಇದರೊಂದಿಗೆ ಆರಂಭಿಕ ಕುಸಿತದಿಂದ ಪಾರು ಮಾಡಿದ ಈ ಜೋಡಿ, ಬೃಹತ್​ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಹಾಕಿದರು.

10 ಓವರ್​​​ಗಳಲ್ಲಿ 98 ರನ್ ಗಳಿಸಿದ್ದ ಮುಂಬೈ ತಂಡಕ್ಕೆ ಮತ್ತಷ್ಟು ಆಸರೆ ನೀಡಲು ಯತ್ನಿಸಿದರು. ಆ ಮೂಲಕ ಬೌಲರ್​ಗಳ ಬಿಗಿ ಹಿಡಿತ ಸಾಧಿಸಲು ಮುಂದಾದರು. ಈ ವೇಳೆ ಸೂರ್ಯಕುಮಾರ್​ 33 ರನ್​​ ಗಳಿಸಿ, ಕ್ಯಾಮರೂನ್​ ಗ್ರೀನ್​ 41 ರನ್​ ಗಳಿಸಿ ಹೊರ ನಡೆದರು. ಇಬ್ಬರಿಗೂ ನವೀನ್​ ಉಲ್​ ಹಕ್​ ಶಾಕ್​ ನೀಡಿದರು.

ವದೇರಾ ಮಿಂಚು, ತಿಲಕ್​ ಪರವಾಗಿಲ್ಲ, ಡಲ್​ ಆದ ಡೇವಿಡ್​​

ಬ್ಯಾಕ್ ಟು ಬ್ಯಾಕ್​ ವಿಕೆಟ್​ಗಳು ಕಳೆದುಕೊಳ್ಳುತ್ತಿದ್ದಂತೆ, ಕ್ರೀಸ್​​ನಲ್ಲಿದ್ದ ತಿಲಕ್​ ವರ್ಮಾ ಮತ್ತು ಟಿಮ್​ ಡೇವಿಡ್​ ನಿಧಾನವಾಗಿ ಬ್ಯಾಟ್​ ಬೀಸಿದರು. ಬೃಹತ್​ ಮೊತ್ತ ಕಲೆ ಹಾಕುವ ಲೆಕ್ಕಾಚಾರ ಹಾಕಿದ್ದ ಮುಂಬೈ ಕೊಂಚ ಹಿನ್ನಡೆ ಅನುಭವಿಸಿತು. ಸ್ಲೋ ಇನ್ನಿಂಗ್ಸ್​ ಕಟ್ಟುತ್ತಿದ್ದ ಡೇವಿಡ್​​ 13 ರನ್​ ಗಳಿಗೆ ಆಟ ಮುಗಿಸಿದರು.

ಮತ್ತೊಂದೆಡೆ ಆಗ್ಗಾಗೆ ಚೆಂಡನ್ನು ಬೌಂಡರಿ ಗೆರೆ ಮುಟ್ಟಿಸುತ್ತಿದ್ದ ತಿಲಕ್​ ವರ್ಮಾ ಕೂಡ ಹೆಚ್ಚು ಆಕರ್ಷಣೀಯ ಇನ್ನಿಂಗ್ಸ್​ ಕಟ್ಟಲಿಲ್ಲ. ತಿಲಕ್​ 22 ಎಸೆತಗಳಲ್ಲಿ 2 ಸಿಕ್ಸರ್​ಗಳ ನೆರವಿನಿಂದ 26 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ನೇಹಾಲ್​ ವಧೇರಾ ಕೊನೆಯಲ್ಲಿ ಅಬ್ಬರಿಸಿದರು. ಅದರಲ್ಲೂ 20ನೇ ಓವರ್​​​ನಲ್ಲಿ ಬೌಂಡರಿಗಳ ಸುರಿಮಳೆಗೈದರು. 12 ಎಸೆತಗಳಲ್ಲಿ 22 ರನ್​ ಗಳಿಸಿದರು.

ನವೀನ್​ ಉಲ್​ ಹಕ್​ ದರ್ಬಾರ್​

ಎಲಿಮಿನೇಟರ್​ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರಯೋಗಿಸಿದ ನವೀನ್​ ಉಲ್​ ಹಕ್​​, ಮುಂಬೈ ತಂಡದ ಪ್ರಮುಖ ವಿಕೆಟ್​​ಗಳನ್ನೇ ಉರುಳಿಸಿದರು. ಆರಂಭದಲ್ಲಿ ರೋಹಿತ್​ ವಿಕೆಟ್​ ಪಡೆದು ಲಕ್ನೋ ತಂಡಕ್ಕೆ ಮೇಲುಗೈ ತಂದುಕೊಟ್ಟರು. ನಂತರ ತಂಡದ ಹಾದಿ ತಪ್ಪುತ್ತಿದ್ದಾಗ ಗ್ರೀನ್​ - ಸೂರ್ಯ, ತಿಲಕ್​ ವಿಕೆಟ್​ ಉರುಳಿಸಿ ಮತ್ತೆ ಮುನ್ನಡೆ ತಂದುಕೊಟ್ಟರು. 4 ಓವರ್​​ಗಳಲ್ಲಿ 38 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಪಡೆದರು.

ನವೀನ್​ ಉಲ್​ ಹಕ್​ಗೆ ಯಶ್​ ಠಾಕೂರ್ ಮತ್ತು ಮೊಹ್ಸಿನ್​ ಖಾನ್​ ಸಾಥ್​ ನೀಡಿದರು. ಯಶ್​ ಠಾಕೂರ್​​ 3 ವಿಕೆಟ್​ ಪಡೆದರೆ, ಮೊಹ್ಸಿನ್​ ಅವರು 1 ವಿಕೆಟ್​ ಪಡೆದರು. ಅಂತಿಮ ಮುಂಬೈ ಇಂಡಿಯನ್ಸ್​​ 20 ಓವರ್​​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿದೆ. ಈ ಪಿಚ್​​ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 172 ರನ್​ಗಳನ್ನು ಚೆನ್ನೈ ಸೂಪರ್ ಕಿಂಗ್ಸ್​ ಡಿಪೆಂಡ್​ ಮಾಡಿಕೊಂಡು ಗೆದ್ದುಕೊಂಡಿತ್ತು.

    ಹಂಚಿಕೊಳ್ಳಲು ಲೇಖನಗಳು