logo
ಕನ್ನಡ ಸುದ್ದಿ  /  ಕ್ರೀಡೆ  /  Virat Kohli ವಿರುದ್ಧದ ಟೀಕೆಗಳಿಗೆ ಚಾಟಿ ಬೀಸಿದ Rcb ಮಾಜಿ ಆಟಗಾರ

Virat Kohli ವಿರುದ್ಧದ ಟೀಕೆಗಳಿಗೆ ಚಾಟಿ ಬೀಸಿದ RCB ಮಾಜಿ ಆಟಗಾರ

HT Kannada Desk HT Kannada

Mar 18, 2023 05:59 PM IST

ಇಸುರು ಉಡಾನ, ವಿರಾಟ್​ ಕೊಹ್ಲಿ

    • Virat Kohli: ಶ್ರೀಲಂಕಾದ ಮಾಜಿ ಆಟಗಾರ ಹಾಗೂ ಆರ್​​ಸಿಬಿ ತಂಡದಲ್ಲಿ ಕೊಹ್ಲಿ ಜೊತೆ ಆಡಿದ್ದ ಇಸುರು ಉಡಾನ, ಕೊಹ್ಲಿ ವಿರುದ್ಧ ಕೇಳಿ ಬಂದಿದ್ದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ ವೇಳೆ ಹಿಂದೂಸ್ತಾನ್ ಟೈಮ್ಸ್ ಜೊತೆೆ ಮಾತನಾಡಿದ್ದು, ಟೀಕೆಗಳಿಗೆ ಚಾಟಿ ಬೀಸಿದ್ದಾರೆ.
ಇಸುರು ಉಡಾನ, ವಿರಾಟ್​ ಕೊಹ್ಲಿ
ಇಸುರು ಉಡಾನ, ವಿರಾಟ್​ ಕೊಹ್ಲಿ (RCB/Twitter)

ಕೇಳಿ ಬರುವ ಟೀಕೆಗಳಿಗೆ ವಿರಾಟ್​ ಕೊಹ್ಲಿ (Virat Kohli) ಅವರಂತೆ ಖಡಕ್​​​ ಉತ್ತರ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ವರ್ಷದ ಬೇಸಿಗೆಯಲ್ಲಿ ಕೊಹ್ಲಿ ಸ್ಥಾನದ ಬಗ್ಗೆ ಟೀಕೆಗಳು ಉತ್ತುಂಗಕ್ಕೇರಿದ್ದವು. ಆಗ ಏಷ್ಯಾಕಪ್,​ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ನಾಲಿಗೆ ಹರಿಯಬಿಟ್ಟವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದರು.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಏಕದಿನ ಕ್ರಿಕೆಟ್​​ನಲ್ಲಿ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ತನ್ನ ಭವಿಷ್ಯದ ಬಗ್ಗೆ ಪ್ರಶ್ನಿಸಿದವರ ಬಾಯಿ ಮುಚ್ಚಿಸಿದರು. ಕೆಲವರು ಟೆಸ್ಟ್​ ಕ್ರಿಕೆಟ್​​​ನಲ್ಲಿ ಕೊಹ್ಲಿ ಕತೆ ಮುಗೀತು ಎಂದು ಬಡಾಯಿ ಕೊಚ್ಚಿಕೊಂಡರು. ಆದರೆ, ಬಾರ್ಡರ್​​ - ಗವಾಸ್ಕರ್​ ಟೆಸ್ಟ್​ ಸಿರೀಸ್​​ನ (Border Gavaskar Trophy) 4ನೇ ಟೆಸ್ಟ್​​ ಪಂದ್ಯದಲ್ಲಿ 186 ರನ್​​​ ಸಿಡಿಸಿ, ಮತ್ತೆಂದು ತನ್ನ ಬಗ್ಗೆ ಟೀಕಿಸದ ರೀತಿ ಉತ್ತರ ನೀಡಿದರು.

ರನ್​ ಗಳಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ಅವಮಾನಿಸಿದರು. ಕೊಹ್ಲಿ ಸ್ಥಾನದ ಬಗ್ಗೆ ಚರ್ಚಿಸಿದರು. ವೈಫಲ್ಯದ ಬಗ್ಗೆ ಹೀಯಾಳಿಸಿದರು. ಆದರೆ ವೈಫಲ್ಯದ ನಡುವೆಯೂ ಅಭಿಮಾನಿಗಳು ಕೊಹ್ಲಿಯನ್ನು ಕೈಬಿಡಲಿಲ್ಲ. ಟೀಕೆ, ಅವಮಾನ, ಹತಾಶೆ ನಡುವೆ ಬೇಕಾಬಿಟ್ಟಿ ಮಾತನಾಡಿದವರಿಗೆ ಶತಕಗಳ ಮೂಲಕವೇ ಬಾಯಿ ಮುಚ್ಚಿಸಿದ್ದರು.

ಶ್ರೀಲಂಕಾದ ಮಾಜಿ ಆಟಗಾರ ಹಾಗೂ ಆರ್​​ಸಿಬಿ ತಂಡದಲ್ಲಿ ಕೊಹ್ಲಿ ಜೊತೆ ಆಡಿದ್ದ ಇಸುರು ಉಡಾನ (Isuru Udana), ಕೊಹ್ಲಿ ವಿರುದ್ಧ ಕೇಳಿ ಬಂದಿದ್ದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ ವೇಳೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಉಡಾನ, ಟೀಕೆಗಳಿಗೆ ಚಾಟಿ ಬೀಸಿದ್ದಾರೆ. ಬೇಕಾಬಿಟ್ಟಿ ಉತ್ತರಗಳಿಗೆ ಮೊಂಡು ಉತ್ತರವನ್ನೇ ನೀಡಿದ್ದಾರೆ.

ಕೊಹ್ಲಿ ಅವರ 75 ನೇ ಅಂತಾರಾಷ್ಟ್ರೀಯ ಶತಕಕ್ಕೂ ಮುನ್ನ ಟೀಕೆಗಳ ಹಿಮಪಾತದ ಬಗ್ಗೆ ಮಾತನಾಡಿದ ಉಡಾನ, ಯಾರೂ ದೀರ್ಘಕಾಲ ಪರಿಪೂರ್ಣರಾಗಲು ಸಾಧ್ಯವಿಲ್ಲ. ಅವರು ಯಾವತ್ತಿದ್ದರೂ ಲೆಜೆಂಡ್. ಅದು ನಮಗೆಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ವೈಫಲ್ಯವನ್ನು ಎದುರಿಸುತ್ತಾರೆ. ಆದರೆ ನನಗೆ ಮಾತ್ರ ಅವರು ಎಂದಿಗೂ ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ.

2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉಡಾನ ಆಡಿದ್ದರು. ತನ್ನ ಏಕೈಕ ಐಪಿಎಲ್ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದರು. ಪ್ರಸ್ತುತ LLCಯಲ್ಲಿ ಏಷ್ಯಾ ಲಯನ್ಸ್ ಪರ ಆಡುತ್ತಿರುವ ಅನುಭವಿ ಎಡಗೈ ವೇಗಿ, ಕೊಹ್ಲಿ ಮತ್ತು ನೆಚ್ಚಿನ ಕ್ರಿಕೆಟಿಗ, ಹೀರೋ ಎಬಿಡಿ ವಿಲಿಯರ್ಸ್ ಮೊದಲ ಭೇಟಿ ನೆನಪಿಸಿಕೊಂಡರು.

ಕೊಹ್ಲಿ ಮತ್ತು ನನ್ನ ನೆಚ್ಚಿನ ಹೀರೋ ಎಬಿ ಡಿವಿಲಿಯರ್ಸ್ ಅವರನ್ನು ಒಟ್ಟಿಗೆ ಭೇಟಿಯಾಗಿದ್ದು, ಇದೊಂದು ಸಂಪೂರ್ಣ ವಿಭಿನ್ನ ಅನುಭವ ನೀಡಿತ್ತು. ನನಗೆ ಸಿಕ್ಕ ಒಂದು ದೊಡ್ಡ ಭಾಗ್ಯ. ತಂಡದಲ್ಲಿ, ಡ್ರೆಸ್ಸಿಂಗ್​ರೂಮ್​​ನಲ್ಲಿ ಅವರೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ. ಪ್ರತಿ ಕ್ಷಣವೂ ಎಂದೆಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.

ಹರಾಜಿನಲ್ಲಿ 50 ಲಕ್ಷಕ್ಕೆ ಆರ್​ಸಿಬಿಗೆ ಸೇಲಾಗಿದ್ದ ಉಡಾನ, ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 9.72ರ ದುಬಾರಿ ಎಕಾನಮಿ ಹೊಂದಿದ್ದರು. ವೈಫಲ್ಯ ಅನುಭವಿಸಿದ ಕಾರಣಕ್ಕೆ ಉಡಾನ ಅವರನ್ನು ಮುಂದಿನ ಸೀಸನ್​ಗೆ ತಂಡದಿಂದ ಬಿಡುಗಡೆ ಮಾಡಲಾಯಿತು.

    ಹಂಚಿಕೊಳ್ಳಲು ಲೇಖನಗಳು