logo
ಕನ್ನಡ ಸುದ್ದಿ  /  Sports  /  Smriti Mandhanas Rcb Can Qualify For Playoffs Of Wpl 2023 If Win Today

RCB: ಸತತ ಐದು ಸೋಲು ಕಂಡರೂ ಆರ್​ಸಿಬಿಗೆ ಇನ್ನೂ ಇದೆ ಪ್ರಶಸ್ತಿ ಗೆಲ್ಲುವ​​ ಅವಕಾಶ!

HT Kannada Desk HT Kannada

Mar 15, 2023 07:58 AM IST

ಆರ್​​ಸಿಬಿ ಮಹಿಳಾ ತಂಡ

    • RCB ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್​ ತಂಡಗಳಿಗೆ ಸೋಲುಣಿಸಬೇಕು. ಜೊತೆಗೆ ಯುಪಿ ವಾರಿಯರ್ಸ್​ ತಂಡವು, ಎಲ್ಲಾ ಪಂದ್ಯಗಳಲ್ಲೂ ಸೋಲಬೇಕು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಆಗ ಮಾತ್ರ ಆರ್​ಸಿಬಿಗೆ ನೆಟ್​ ರನ್​ ರೇಟ್ ಆಧಾರದಲ್ಲಿ​ ಎಲಿಮಿನೇಟರ್​​ಗೆ ಎಂಟ್ರಿ ನೀಡಲು ಸಾಧ್ಯ.
ಆರ್​​ಸಿಬಿ ಮಹಿಳಾ ತಂಡ
ಆರ್​​ಸಿಬಿ ಮಹಿಳಾ ತಂಡ (WPL/Twitter)

ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲಿ (Women's Premier League) ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ಗೆಲುವಿಗಾಗಿ ಹುಡುಕಾಟ ಮುಂದುವರೆಸಿದೆ. ಈವರೆಗೂ ಆಡಿರುವ ಐದು ಪಂದ್ಯಗಳಲ್ಲೂ ಗೆಲುವಿನ ಖಾತೆ ತೆರೆಯದ ಆರ್​ಸಿಬಿ, ಇಂದು ಟೂರ್ನಿಯಲ್ಲಿ 6ನೇ ಪಂದ್ಯವನ್ನಾಡಲಿದ್ದು, ಮೊದಲ ಗೆಲುವಿನ ವಿಶ್ವಾಸದಲ್ಲಿದೆ. ವಿಶ್ವ ಕ್ರಿಕೆಟ್​​ನಲ್ಲಿ ಧೂಳೆಬ್ಬಿಸಿದ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈನ್ ಅವರಂತಹ ಬಿಗ್​​​ ಸ್ಟಾರ್​ಗಳೇ ಇದ್ದರೂ, ಗೆಲುವು ಅನ್ನೋದು ಮರೀಚಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಪ್ರಸ್ತುತ ಆರ್​​ಸಿಬಿ ಸದ್ಯ ಆಡಿದ ಐದು ಪಂದ್ಯಗಳನ್ನೂ ಸೋತಿದೆ. ಒಂದು ಪಂದ್ಯದಲ್ಲೂ ಎದುರಾಳಿ ತಂಡಕ್ಕೆ ಪೈಪೋಟಿಯೇ ನೀಡದ ಆರ್​ಸಿಬಿ, ಹೀನಾಯ ಸೋಲುಗಳನ್ನೇ ತನ್ನದಾಗಿಸಿಕೊಂಡಿದೆ. ಐದನೇ ಪಂದ್ಯದಲ್ಲಿ ರೋಚಕ ಹೋರಾಟ ನಡೆಸಿದರೂ ಗೆಲುವಿನ ದಡ ಸೇರುವಲ್ಲಿ ವಿಫಲವಾಯಿತು. ಟೂರ್ನಿಯಲ್ಲಿ ಕೇವಲ 3 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, RCB ಎಲಿಮಿನೇಟರ್​​​ ಹಂತಕ್ಕೆ ಏರುತ್ತಾ.? ಇಲ್ವಾ.? ಅನ್ನೋದು ದೊಡ್ಡ ಪ್ರಶ್ನೆ ಪ್ರಶ್ನೆಯಾಗಿದೆ.

RCB ಎಲಿನೇಟರ್ ಹಾದಿ ಹೇಗಿದೆ?

ಸತತ ಸೋಲುಗಳ ನಡುವೆಯೂ RCB ಮಹಿಳೆಯರು ಎಲಿಮಿನೇಟರ್ ಹಂತಕ್ಕೇರುವ ಆಸೆ ಕೈಬಿಟ್ಟಿಲ್ಲ. ಆದರೆ ಉಳಿದಿರುವ 3 ಪಂದ್ಯಗಳನ್ನೂ ಗೆಲ್ಲಲೇಬೇಕು. ಆದರೆ, ಇದು ಸಾಧ್ಯವಾಗಬೇಕೆಂದರೆ RCB ಉಳಿದ ತಂಡಗಳ ಫಲಿತಾಂಶಗಳ ಮೇಲೆ ನಿರ್ಧಾರವಾಗಲಿದೆ. ಕೇವಲ ಜಯ ಸಾಧಿಸಿದರೆ ಸಾಲದು, ಭರ್ಜರಿ ಗೆಲುವುಗಳೂ ತಮ್ಮದಾಗಬೇಕು.

ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್​ ತಂಡಗಳಿಗೆ ಸೋಲುಣಿಸಬೇಕು. ಇದರ ಜೊತೆಗೆ ಯುಪಿ ವಾರಿಯರ್ಸ್​ ತಂಡವು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲಬೇಕು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಆಗ ಮಾತ್ರ ಆರ್​ಸಿಬಿಗೆ ನೆಟ್​ ರನ್​ ರೇಟ್ ಆಧಾರದಲ್ಲಿ​ ಎಲಿಮಿನೇಟರ್​​ಗೆ ಎಂಟ್ರಿ ನೀಡಲು ಸಾಧ್ಯ.

ಫೈನಲ್​ಗೇರುವ ಅವಕಾಶವೂ ಇದೆ!

ವುಮೆನ್ಸ್ ಪ್ರೀಮಿಯರ್ ಲೀಗ್​ನ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. 2ನೇ ಹಾಗೂ 3ನೇ ಸ್ಥಾನ ಅಲಂಕರಿಸುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಇಲ್ಲಿ ಗೆಲ್ಲುವ ತಂಡ ಫೈನಲ್​ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಆರ್​​ಸಿಬಿ ಎಲಿಮಿನೇಟರ್​​ಗೆ ಪ್ರವೇಶ ಪಡೆದು, ಅಲ್ಲಿಯೂ ಗೆದ್ದರೆ ಫೈನಲ್​​ ಆಡುವ ಅವಕಾಶ ತನ್ನದಾಗಿಸಿಕೊಳ್ಳಲಿದೆ.

ಇಂದು ಸೋತರೆ ಲೀಗ್​ನಿಂದ ಔಟ್​​.!

ಇಂದು ಯುಪಿ ವಾರಿಯರ್ಸ್​ ವಿರುದ್ಧ ಆರ್​​ಸಿಬಿ ಸೆಣದಾಟ ನಡೆಸಲಿದೆ. ಈ ಪಂದ್ಯ ಸ್ಮೃತಿ ಮಂಧಾನ ಪಾಲಿಗೆ ಡು ಆರ್ ಡೈ ಆಗಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಇಂದು ಕೂಡ ಸೋಲು ಅನುಭವಿಸಿದರೆ, ಟೂರ್ನಿಯಿಂದಲೇ ಹೊರ ಬೀಳಲಿದೆ. ಆ ಮೂಲಕ ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಹೊರ ಬೀಳುವ ಮೊದಲ ತಂಡ ಎನಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಕನಿಕಾ ಅಹುಜಾ, ಹೀದರ್ ನೈಟ್, ಶ್ರೇಯಾಂಕಾ ಪಾಟೀಲ್, ಎರಿನ್ ಬರ್ನ್ಸ್, ಕೋಮಲ್ ಝಂಝಾದ್, ರೇಣುಕಾ ಠಾಕೂರ್ ಸಿಂಗ್, ಸಹನಾ ಪವಾರ್, ಪೂನಮ್ ಖೇಮ್ನಾರ್, ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಇಂದ್ರಾಣಿ ರಾಯ್, ಆಶಾ ಶೋಭನಾ.

    ಹಂಚಿಕೊಳ್ಳಲು ಲೇಖನಗಳು