logo
ಕನ್ನಡ ಸುದ್ದಿ  /  ಕ್ರೀಡೆ  /  Rcb 2023: ಗೋವಾದಲ್ಲಿ Rcb ಆಟಗಾರ್ತಿಯರು ಮೋಜು-ಮಸ್ತಿ; ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆಂದ ನೆಟ್ಟಿಗರು!

RCB 2023: ಗೋವಾದಲ್ಲಿ RCB ಆಟಗಾರ್ತಿಯರು ಮೋಜು-ಮಸ್ತಿ; ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆಂದ ನೆಟ್ಟಿಗರು!

HT Kannada Desk HT Kannada

Mar 26, 2023 09:22 AM IST

ಗೋವಾದ ಬೀಚ್​​ವೊದರಲ್ಲಿ ಕಾಣಿಸಿಕೊಂಡ RCB ಆಟಗಾರ್ತಿಯರು

  • RCB 2023: ರಾಯಲ್​ ಚಾಲೆಂಜರ್ಸ್​ ಆಟಗಾರ್ತಿಯರು ಸದ್ಯ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರ್ತಿಯರು, ಗೋವಾದಲ್ಲಿ ಬಿಂದಾಸ್​ ಆಗಿ ಎಂಜಾಯ್​ ಮಾಡುತ್ತಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಗೋವಾದ ಬೀಚ್​​ವೊದರಲ್ಲಿ ಕಾಣಿಸಿಕೊಂಡ RCB ಆಟಗಾರ್ತಿಯರು
ಗೋವಾದ ಬೀಚ್​​ವೊದರಲ್ಲಿ ಕಾಣಿಸಿಕೊಂಡ RCB ಆಟಗಾರ್ತಿಯರು (Twitter)

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ (Women's Premier League) ಚೊಚ್ಚಲ ಕಪ್​​ ಗೆಲ್ಲುವ ವಿಶ್ವಾಸದಲ್ಲಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡ (Royal Challengers Bangalore Women's Team), ಲೀಗ್​​​ ಹಂತದಲ್ಲೇ ಹೊರ ಬಿದ್ದಿದೆ. ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡವನ್ನು ಹೊಂದಿದ್ದರೂ, ಸತತ ಸೋಲು ಕಂಡಿದ್ದು ಮಾತ್ರ ಅಭಿಮಾನಿಗಳನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ (Smriti Mandhana), ಮುಂದಿನ ವರ್ಷ ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ಶಪಥ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಆದರೆ ಆರ್​​ಸಿಬಿ ಆಟಗಾರ್ತಿಯರ ನಡೆ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಲೀಗ್​​​​ನಿಂದ ಹೊರ ಬಿದ್ದದ್ದು ಮತ್ತು ಲೀಗ್​​ನಲ್ಲಿ ಸತತ ಐದು ಸೋಲುಗಳನ್ನು ಅಭಿಮಾನಿ ಬಳಗ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಬೇಸರದಿಂದ ಇನ್ನೂ ಹೊರ ಬಂದಿಲ್ಲ. ಆದರೆ ನೋವು ಮರೆತ ಆರ್​ಸಿಬಿ ಆಟಗಾರ್ತಿಯರು ಗೋವಾದ ಬೀಚ್​​​​ನಲ್ಲಿ ಬಿಂದಾಸ್​ ಆಗಿ ಎಂಜಾಯ್​ ಮಾಡುತ್ತಿದ್ದಾರೆ. ಇದು ರೆಡ್​ ಆರ್ಮಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಮೋಜು ಮಸ್ತಿಯಲ್ಲಿ ತೊಡಗಿದ ಮಂಧಾನ ಪಡೆ!

ರಾಯಲ್​ ಚಾಲೆಂಜರ್ಸ್​ ಆಟಗಾರ್ತಿಯರು ಸದ್ಯ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರ್ತಿಯರು, ಗೋವಾದಲ್ಲಿ ಬಿಂದಾಸ್​ ಆಗಿ ಎಂಜಾಯ್​ ಮಾಡುತ್ತಿದ್ದಾರೆ. ನಾಯಕಿ ಸ್ಮೃತಿ ಮಂಧಾನ, ಎಲಿಸ್​ ಪೆರ್ರಿ, ಹೀದರ್​ ನೈಟ್​, ಸೋಫಿ ಡಿವೈನ್​, ಮೇಗನ್​ ಶುಟ್​, ಎರಿನ್​ ಬರ್ನ್ಸ್​ ಬೀಚ್​ವೊಂದರಲ್ಲಿ ತೆಗೆಸಿಕೊಂಡಿರುವ ಗ್ರೂಪ್​ ಫೋಟೋವೊಂದು ಸಖತ್​ ವೈರಲ್​ ಆಗುತ್ತಿದೆ.

ಇದನ್ನು ನೋಡಿದ ಫ್ಯಾನ್ಸ್​, ಸೋಷಿಯಲ್​​​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಲಿ ಕಪ್​​​​​​​​ ಗೆಲ್ಲಲು ಸಾಧ್ಯವಾಗಲ್ಲ, ಇದಕ್ಕಷ್ಟೇ ಸೀಮಿತ. ಆರ್‌ಸಿಬಿ ಅಭಿಮಾನಿಗಳ ಭಾವನೆಗಳೊಂದಿಗೆ ಆಡಿದ ನಂತರ ಅವರು ಈಗ ಗೋವಾದಲ್ಲಿ ಆಡುತ್ತಿದ್ದಾರೆ ಎಂದು ಭಾವಿಸುತ್ತೇವೆ, ಸ್ಮೃತಿ ಮಂಧಾನ ಇಲ್ಲೂ ಕೂಡ ಶೈನ್​ ಆಗಿಲ್ಲ, ಬೀಚ್​​​ನಲ್ಲಿ ಮಣ್ಣಿನ ಕಪ್​ ತಯಾರಿಸುತ್ತಿದ್ದಾರೆ, ಟೀಮ್​ ಚೋಕರ್ಸ್​ ಎಂದೆಲ್ಲಾ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.

ಲೀಗ್​​ನಲ್ಲಿ ಕಳಪೆ ಪ್ರದರ್ಶನ.!

WPLನಲ್ಲಿ ಆರ್​ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್​​​ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​​ಸಿಬಿ ತಂಡಕ್ಕೆ ವಿರಾಟ್​ ಕೊಹ್ಲಿ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಧೈರ್ಯ ತುಂಬಿದ್ದರು. ಇದಾದ ಬಳಿಕ ಬ್ಯಾಕ್​ ಟು ಬ್ಯಾಕ್​ ಎರಡು ಪಂದ್ಯಗಳನ್ನು ಗೆದ್ದ ಆರ್​​ಸಿಬಿ, ಲೀಗ್​ನ ಕೊನೆಯ ಪಂದ್ಯದಲ್ಲಿ ಮುಗ್ಗರಿಸಿ, ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿತು. ಅಂಕಪಟ್ಟಿಯಲ್ಲಿ 4ನೇ ಸ್ಥಾನ ತೃಪ್ತಿಪಟ್ಟುಕೊಂಡಿತು.

RCB ಮಹಿಳಾ ತಂಡ

ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್​ ಕೀಪರ್​), ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ಸೋಫಿ ಡಿವೈನ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೊನಮ್ ಕೆ ಬೋಸೆಮ್, ಕೋಮಲ್ ಝಂಜರ್, ಮೇಗನ್ ಶಟ್, ಸಹನಾ ಪವಾರ್.

    ಹಂಚಿಕೊಳ್ಳಲು ಲೇಖನಗಳು