ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕರವೇ ಕಾರ್ಯಕರ್ತರು VIDEO
Sep 29, 2023 04:25 PM IST
- Cauvery Water Dispute: ಮೈಸೂರು ಕರ್ನಾಟಕ ಭಾಗದ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಕಾವೇರಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದೇ ರೀತಿ ಶುಕ್ರವಾರ ಕರ್ನಾಟಕ ಬಂದ್‌ಗೂ ಕರೆ ನೀಡಿದ್ದರಿಂದ ಸಿನಿಮಾ ಚಟುವಟಿಕೆಗಳೂ ಸ್ಥಗಿತಗೊಂಡಿದೆ. ಈ ನಡುವೆಯೇ ತಮ್ಮ ತಮಿಳು ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ಖ್ಯಾತ ನಟ ಸಿದ್ಧಾರ್ಥ್‌ಗೂ ಕಾವೇರಿ ಬಿಸಿ ತಟ್ಟಿದೆ. ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸೆ. 28ರಂದು ಪತ್ರಿಕಾಗೋಷ್ಠಿ ಸಹ ಆಯೋಜನೆಯಾಗಿತ್ತು. ಈ ವೇಳೆ ಸಿದ್ಧಾರ್ಥ್ ಮಾತನಾಡಲು ಆರಂಭಿಸಿದ್ದರು. ಏಕಾಏಕಿ ಆಗಮಿಸಿದ ಕನ್ನಡಪರ ಹೋರಾಟಗಾರರು, ಸುದ್ದಿಗೋಷ್ಠಿ ನಿಲ್ಲಿಸಿದ್ದಾರೆ. ಅಷ್ಟೇ ಸೌಜನ್ಯದಿಂದ ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.