logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಪ್ಪು ಮಾಡಿದ್ದೇ ಆಗಿದ್ರೆ ರಾಜಕೀಯದಲ್ಲಿ ಉಳಿಯುತ್ತಿರಲಿಲ್ಲ, ನನಗೆ ಚಾಮುಂಡೇಶ್ವರಿ ಆಶೀರ್ವಾದವಿದೆ; ಸಿಎಂ ಸಿದ್ದರಾಮಯ್ಯ

ತಪ್ಪು ಮಾಡಿದ್ದೇ ಆಗಿದ್ರೆ ರಾಜಕೀಯದಲ್ಲಿ ಉಳಿಯುತ್ತಿರಲಿಲ್ಲ, ನನಗೆ ಚಾಮುಂಡೇಶ್ವರಿ ಆಶೀರ್ವಾದವಿದೆ; ಸಿಎಂ ಸಿದ್ದರಾಮಯ್ಯ

Oct 03, 2024 02:47 PM IST

ಇಂದಿನಿಂದ ನವರಾತ್ರಿ ಆರಂಭವಾಗಿದೆ. ಮೈಸೂರಿನಲ್ಲಿ ಸಾಹಿತಿ ಹಂಪ ನಾಗರಾಜಯ್ಯ ದಸರಾಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿ ಕೂಡಾ ಹಾಜರಿದ್ದರು. ಈ ಸಮಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಾಯಿ ಚಾಮುಂಡೇಶ್ವರಿ ಆಶೀರ್ವಾದ, ಚಾಮುಂಡೇಶ್ವರಿ ಕ್ಷೇತ್ರದ ಆಶೀರ್ವಾದ, ಜನರ ಪ್ರೀತಿ ನನ್ನ ಮೇಲೆ ಇರುವುದರಿಂದಲೇ ಇಂದು ನಾನು 2ನೇ ಬಾರಿ ಸಿಎಂ ಆಗಿದ್ದೇನೆ. ವರುಣ ಕ್ಷೇತ್ರದಲ್ಲಿ 3 ಬಾರಿ, ಬಾದಾಮಿಯಲ್ಲಿ 1 ಬಾರಿ ಗೆದ್ದು ಒಟ್ಟು 9 ಚುನಾವಣೆಯಲ್ಲಿ ಜಯ ಗಳಿಸಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ನಾನು ಇಲ್ಲಿವರೆಗೂ ಯಾವ ತಪ್ಪನ್ನು ಮಾಡಿಲ್ಲ, ಮಾಡಿದಿದ್ದರೆ ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ.