logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೈಯಲ್ಲಿ ಬಾವುಟ ಹಿಡಿದು ಸಿಎಂ ಸಿದ್ದರಾಮಯ್ಯ ಶೂ ಬಿಚ್ಚಿದ ಕಾಂಗ್ರೆಸ್‌ ಕಾರ್ಯಕರ್ತ; ವೈರಲ್‌ ವಿಡಿಯೋಗೆ ನೆಟಿಜನ್ಸ್‌ ಆಕ್ರೋಶ

ಕೈಯಲ್ಲಿ ಬಾವುಟ ಹಿಡಿದು ಸಿಎಂ ಸಿದ್ದರಾಮಯ್ಯ ಶೂ ಬಿಚ್ಚಿದ ಕಾಂಗ್ರೆಸ್‌ ಕಾರ್ಯಕರ್ತ; ವೈರಲ್‌ ವಿಡಿಯೋಗೆ ನೆಟಿಜನ್ಸ್‌ ಆಕ್ರೋಶ

Oct 02, 2024 06:16 PM IST

ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸುವುದು, ಕೆಳಗೆ ಬೀಳಿಸುವಂತ ಎಷ್ಟೋ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಇದೀಗ ಸ್ವತ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಇಂದು ಗಾಂಧಿ ಜಯಂತಿ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಧ್ವಜಕಂಬದ ಬಳಿ ಬರುತ್ತಿದ್ದಂತೆ ತಮ್ಮ ಶೂಗಳನ್ನು ಬಿಚ್ಚುವಂತೆ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಆ ವ್ಯಕ್ತಿ ಕೈಯಲ್ಲಿ ಬಾವುಟ ಹಿಡಿದುಕೊಂಡೇ ಸಿಎಂ ಶೂಗಳನ್ನು ತೆಗೆಯುತ್ತಾರೆ. ಧ್ವಜಕ್ಕೆ ಅವಮಾನವಾಗುವುದು ತಿಳಿಯುತ್ತಿದ್ದಂತೆ ಅಲ್ಲೇ ಇದ್ದ ಮತ್ತೊಬ್ಬರು ಆ ಕಾರ್ಯಕರ್ತನ ಕೈಯಿಂದ ಧ್ವಜವನ್ನು ಪಡೆದಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಸಿದ್ದು ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.