logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mangalore : ಸೈಬರ್ ವಂಚಕ ಜಾಲಕ್ಕೆ ಸಿಲುಕಿ ದುಬೈನಲ್ಲಿ ಜೈಲುಪಾಲಿಗಿದ್ದ ವ್ಯಕ್ತಿ ತಾಯ್ನಾಡಿಗೆ ; ಏರ್ಪೋರ್ಟ್ ನಲ್ಲಿ ಭಾವುಕ ಕ್ಷಣ

Mangalore : ಸೈಬರ್ ವಂಚಕ ಜಾಲಕ್ಕೆ ಸಿಲುಕಿ ದುಬೈನಲ್ಲಿ ಜೈಲುಪಾಲಿಗಿದ್ದ ವ್ಯಕ್ತಿ ತಾಯ್ನಾಡಿಗೆ ; ಏರ್ಪೋರ್ಟ್ ನಲ್ಲಿ ಭಾವುಕ ಕ್ಷಣ

Nov 22, 2023 04:56 PM IST

ಸೈಬರ್ ವಂಚಕ್ಕೆ ಜಾಲಕ್ಕಿ ಸಿಲುಕಿ ದುಬೈನಲ್ಲಿ ಜೈಲುಪಾಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವ್ಯಕ್ತಿ ಕೊನೆಗೂ  ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ರಿಯಾದ್‌ನಲ್ಲಿ ಅಲ್ ಫನಾರ್ ಕೋನಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದ ಇವರು, ಒಂದು ವರ್ಷದ ಹಿಂದೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಲು ಅಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಅಂಗಡಿಯವನು ಎರಡು ಬಾರಿ ಹೆಬ್ಬೆರಳಿನ ಗುರುತನ್ನು ಪಡೆದುಕೊಂಡಿದ್ದಾನೆ. ನಂತರ ಚಂದ್ರಶೇಖರ್ ಮೊಬೈಲ್ ಗೆ ಅರೆಬಿಕ್ ಭಾಷೆಯಲ್ಲಿ ಓಟಿಪಿ ಬಂದಿದ್ದು,  ಆ ವ್ಯಕ್ತಿ ಚಂದ್ರಶೇಖರ್ ಅವರಿಂದ ಒಟಿಪಿ ಕೇಳಿದ್ದಾನೆ. ಇದನ್ನ ಹಂಚಿಕೊಂಡ ಬಳಿಕ ಇವರ ವಿರುದ್ಧ ಬ್ಯಾಂಕ್ ವಂಚನೆ ಕೇಸ್ ದಾಖಲಾಗಿತ್ತು. ನಂತರ ಸಾಮಾಜಿಕ ಹೋರಾಟಗಾರ ಶ್ರೀಧರ್ ಮತ್ತು ದುಬೈನಲ್ಲಿರುವ ಭಾರತೀಯರ ನೆರವಿನಿಂದ ಚಂದ್ರಶೇಖರ್ ಜೈಲಿನಿಂದ ಬಿಡುಗಡೆಯಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.