logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Gurudev Hoysala: ಸಂಗೊಳ್ಳಿ ರಾಯಣ್ಣನ ಊರಿಗೆ ‘ಹೊಯ್ಸಳ’ನ ಎಂಟ್ರಿ!

Gurudev Hoysala: ಸಂಗೊಳ್ಳಿ ರಾಯಣ್ಣನ ಊರಿಗೆ ‘ಹೊಯ್ಸಳ’ನ ಎಂಟ್ರಿ!

Mar 29, 2023 12:57 PM IST

ಡಾಲಿ ಧನಂಜಯ್‌ ನಟನೆಯ ‘ಗುರುದೇವ್‌ ಹೊಯ್ಸಳ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ ಉಳಿದಿದೆ. ಅಂದರೆ ಮಾರ್ಚ್‌ 30ರಂದು ಕರ್ನಾಟಕ ಸೇರಿ ವಿದೇಶದಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನೇ ಆಯ್ದುಕೊಂಡ ನಿರ್ದೇಶಕ ವಿಜಯ್‌, ಅದನ್ನೀಗ ಪ್ರೇಕ್ಷಕನ ಮುಂದಿಡುವ ತುಡಿತದಲ್ಲಿದ್ದಾರೆ. ಪ್ರಚಾರದ ಬಿಸಿಯೂ ಜೋರಾಗಿಯೇ ಇದೆ. ಈಗ ರಾಯಣ್ಣನ ಪುಣ್ಯ ಭೂಮಿ ನಂದಗಢ ಮತ್ತು ಬೈಲಹೊಂಗಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದಾರೆ. ಅದರ ವಿಡಿಯೋ ಝಲಕ್‌ ಇಲ್ಲಿದೆ..