ಕನ್ನಡ ಸುದ್ದಿ  /  Astrology  /  Bhudhaditya Rajayoga Will Be Formed After 100 Years With Lakshmi Narayana Yoga Astrology In Kannada Rsm

Bhudhaditya Rajayoga: 100 ವರ್ಷಗಳ ನಂತರ ಜೊತೆಯಾಗಿ ರೂಪುಗೊಳ್ಳುತ್ತಿದೆ ಬುಧಾದಿತ್ಯ, ಲಕ್ಷ್ಮೀನಾರಾಯಣ ರಾಜಯೋಗ; ಯಾವ ರಾಶಿಯವರಿಗೆ ಶುಭಫಲ?

Bhudhaditya Rajayogam: ಸುಮಾರು 100 ವರ್ಷಗಳ ನಂತರ ಬುಧಾದಿತ್ಯ ರಾಜಯೋಗ ಹಾಗೂ ಲಕ್ಷ್ಮೀನಾರಾಯಣ ಯೋಗವು ಒಟ್ಟಿಗೆ ರೂಪುಗೊಳ್ಳುತಿದೆ. ಇದರ ಪರಿಣಾಮದಿಂದಾಗಿ, ವೃಷಭ, ಸಿಂಹ ಸೇರಿದಂತೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ.

ಬುಧಾದಿತ್ಯ ರಾಜಯೋಗ
ಬುಧಾದಿತ್ಯ ರಾಜಯೋಗ

ಬುಧಾದಿತ್ಯ ರಾಜಯೋಗ: ಕೆಲವೇ ದಿನಗಳಲ್ಲಿ ಗ್ರಹಗಳ ಅಧಿಪತಿ ಬುಧನು ಗುರುವಿನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧವು ಮೀನ ರಾಶಿಯನ್ನು ಪ್ರವೇಶಿಸಿ ಹಿಮ್ಮುಖವಾಗಿ ಸಾಗುತ್ತಾನೆ. ಈ ಸಮಯದಲ್ಲಿ ಬುಧ, ಸೂರ್ಯ ಮತ್ತು ಶುಕ್ರರು ಮೀನ ರಾಶಿಯಲ್ಲಿ ಸಂಯೋಗವಾಗುತ್ತಾರೆ. ಇದರಿಂದ ಬುಧಾದಿತ್ಯ ರಾಜಯೋಗ ಸೃಷ್ಟಿಯಾಗುತ್ತದೆ. ಇದು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಂಗಳಕರವಾದ ಯೋಗ ಎಂದು ಪರಿಗಣಿಸಲಾಗಿದೆ.

ಇದೇ ಸಮಯದಲ್ಲಿ ಶುಕ್ರ ಮತ್ತು ಬುಧ ಭೇಟಿಯಾಗಿ ಲಕ್ಷ್ಮೀನಾರಾಯಣ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಈ ಯೋಗ ಇದ್ದರೆ ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಮೀನರಾಶಿಯಲ್ಲಿ ಏಕಕಾಲಕ್ಕೆ ಎರಡು ರಾಜಯೋಗಗಳು ಉಂಟಾಗಲಿದ್ದು, 100 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಎರಡು ರಾಜಯೋಗಗಳು ಉಂಟಾಗುತ್ತಿವೆ. ಈ ಕಾರಣದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ದುಪ್ಪಟ್ಟು ಪ್ರಯೋಜನ ಪಡೆಯಲಿದ್ದಾರೆ. ಬುಧ, ಸೂರ್ಯ, ಶುಕ್ರರ ಸಂಯೋಗದಿಂದ ಉಭಯ ರಾಜಯೋಗಕ್ಕೆ ಯಾವ ರಾಶಿಯವರಿಗೆ ಶುಭ ಫಲ ದೊರೆಯಲಿದೆ ನೋಡೋಣ.

ವೃಷಭ ರಾಶಿ

ಬುಧಾದಿತ್ಯ ರಾಜಯೋಗವು ವೃಷಭ ರಾಶಿಯ 11ನೇ ಮನೆಯಲ್ಲಿ ಉಂಟಾಗುತ್ತದೆ. ಈ ರಾಜಯೋಗಗಳ ಫಲವಾಗಿ ವೃಷಭ ರಾಶಿಯವರಿಗೆ ದುಪ್ಪಟ್ಟು ಲಾಭ ದೊರೆಯಲಿದೆ. ಕೆಲಸ ಮಾಡುವವರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವ್ಯವಹಾರಗಳಿಗೆ ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಪಾಲುದಾರರ ಬೆಂಬಲದಿಂದ ಸಣ್ಣ ಸಮಸ್ಯೆಗಳು ಸುಲಭವಾಗಿ ಪರಿಹರಿಸಲ್ಪಡುತ್ತವೆ. ದಾಂಪತ್ಯ ಜೀವನದಲ್ಲಿ ಉಂಟಾದ ಕಿರಿಕಿರಿಯ ವಾತಾವರಣ ದೂರವಾಗುತ್ತದೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಪ್ರವಾಸವನ್ನು ಎಂಜಾಯ್ ಮಾಡಲಿದ್ದೀರಿ.

ಸಿಂಹ ರಾಶಿ

ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀನಾರಾಯಣ ಯೋಗವು ಸಿಂಹ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಬುಧಗ್ರಹದ ಶುಭ ಪರಿಣಾಮದಿಂದಾಗಿ ಸ್ಥಗಿತಗೊಂಡಿದ್ದ ಎಲ್ಲಾ ಕೆಲಸಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಲಕ್ಷ್ಮೀ ಕಟಾಕ್ಷ ನಿಮಗೆ ದೊರೆಯಲಿದ್ದು ಆದಾಯ ದ್ವಿಗುಣವಾಗಲಿದೆ. ಸುಖ ಸಂಪತ್ತು ಹೇರಳವಾಗಿ ದೊರೆಯಲಿದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ವಾಹನ ಅಥವಾ ಆಸ್ತಿ ಖರೀದಿಸಲು ಅವಕಾಶವಿದೆ.

ಮೀನ ರಾಶಿ

ಬುಧ, ಸೂರ್ಯ ಮತ್ತು ಶುಕ್ರರ ಸಂಯೋಗವು ಮೀನ ರಾಶಿಯಲ್ಲಿ ನಡೆಯುತ್ತದೆ. ಇದರಿಂದ ಎರಡು ರಾಜಯೋಗಗಳ ಪ್ರಭಾವದಿಂದ ಈ ರಾಶಿಯವರಿಗೆ ದ್ವಿಗುಣ ಫಲ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಸ್ನೇಹಿತರು ಮತ್ತು ಮೇಲಧಿಕಾರಿಗಳಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಗಳು ಸೇರಿದಂತೆ ಇನ್ನಿತರ ಕಷ್ಟಗಳಿಂದ ಮುಕ್ತರಾಗುವಿರಿ. ಹೊಸ ಹೂಡಿಕೆಗಳ ಆಯ್ಕೆಯ ಬಗ್ಗೆ ಯೋಚಿಸಿ. ವಿದೇಶಕ್ಕೆ ಹೋಗುವ ಅವಕಾಶಗಳಿವೆ. ಮೀನ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಆರ್ಥಿಕ ಲಾಭವಿದೆ. ಒಟ್ಟಿನಲ್ಲಿ ನಿಮ್ಮ ಜೀವನ ಹಾಲು ಜೇನಿನಂತೆ ಇರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.