ಕನ್ನಡ ಸುದ್ದಿ  /  Astrology  /  Horoscope Major Planets Conjunction In March 2024 These Zodiac Signs Get Benefits Saturn Venus Conjunction Mgb

Astrology: ಮಾರ್ಚ್ ತಿಂಗಳಲ್ಲಿ ಹಲವು ಪ್ರಬಲ ಗ್ರಹಗಳ ಸಂಯೋಗ: ಈ ರಾಶಿಗಳಿಗೆ ಶುಭಫಲ

Planets Conjunction: ಈ ವರ್ಷ ಮಾರ್ಚ್​ ತಿಂಗಳಲ್ಲಿ ಹೋಳಿ ಹಬ್ಬದ ಮೊದಲು ಮೂರು ಗ್ರಹಗಳ ಸಂಯೋಜನೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲ ರಾಶಿಗಳಿಗೆ ಶುಭಫಲ ನೀಡಲಿದೆ.

ಮಾರ್ಚ್ ತಿಂಗಳಲ್ಲಿ ಹಲವು ಪ್ರಬಲ ಗ್ರಹಗಳ ಸಂಯೋಗ (ಪ್ರಾತಿನಿಧಿಕ ಚಿತ್ರ)
ಮಾರ್ಚ್ ತಿಂಗಳಲ್ಲಿ ಹಲವು ಪ್ರಬಲ ಗ್ರಹಗಳ ಸಂಯೋಗ (ಪ್ರಾತಿನಿಧಿಕ ಚಿತ್ರ)

ಮಾರ್ಚ್ ತಿಂಗಳಲ್ಲಿ ಅನೇಕ ಗ್ರಹಗಳು ರಾಶಿಗಳನ್ನು ಬದಲಾಯಿಸುತ್ತಿವೆ. ಕೆಲವು ವರ್ಷಗಳ ನಂತರ ಈ ಬಾರಿ ಮಾರ್ಚ್ ತಿಂಗಳಲ್ಲಿ ಹಲವು ಪ್ರಬಲ ಗ್ರಹಗಳ ಸಂಯೋಗವಾಗಲಿದೆ. ಹೋಳಿ ಹಬ್ಬದ ಮೊದಲು ಮೂರು ಗ್ರಹಗಳ ಸಂಯೋಜನೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲ ರಾಶಿಗಳಿಗೆ ಶುಭಫಲ ನೀಡಲಿದೆ.

ಯಾವ್ಯಾವ ಗ್ರಹಗಳ ಸಂಯೋಗ?

ಬುಧ ರಾಹು ಸಂಯೋಗ: ಕುಂಭ ರಾಶಿಯಲ್ಲಿರುವ ಬುಧನು ಮಾರ್ಚ್ ತಿಂಗಳಲ್ಲಿ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆ ವೇಳೆಗಾಗಲೇ ರಾಹು ಕೂಡ ಮೀನ ರಾಶಿಯಲ್ಲಿರುತ್ತಾನೆ. ರಾಹು ಯಾವಾಗಲೂ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ ಎಂದು ಭಾವಿಸಲಾಗಿದೆ. ಆದರೆ ರಾಹುವಿನ ಸ್ಥಾನವು ಬಲವಾಗಿದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬುಧನನ್ನು ಬುದ್ಧಿವಂತಿಕೆ, ವಿವೇಚನೆ, ಏಕಾಗ್ರತೆ, ಸೌಂದರ್ಯ, ವ್ಯವಹಾರದ ಅಧಿಪತಿ ಎಂದು ಪರಿಗಣಿಸಲಾಗಿದೆ.

ಶನಿ ಮತ್ತು ಶುಕ್ರನ ಸಂಯೋಗ: ಮಾರ್ಚ್ ತಿಂಗಳ ಆರಂಭದಲ್ಲಿ ಸಂಪತ್ತು, ಐಶ್ವರ್ಯ, ಐಶ್ವರ್ಯದ ಪ್ರತೀಕ ಎನಿಸಿರುವ ಶುಕ್ರ ಗ್ರಹ ಕೂಡ ಶನಿ ನೆಲೆಸಿರುವ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸುಮಾರು 30 ವರ್ಷಗಳ ನಂತರ ಶನಿ ಮತ್ತು ಶುಕ್ರನ ಸಂಯೋಗವಾಗುತ್ತಿದೆ.

ರಾಹು-ಸೂರ್ಯ ಸಂಯೋಗ: ಶನಿಯ ನಂತರ ನಾವು ಭಯಪಡುವ ಗ್ರಹವೆಂದರೆ ರಾಹು. ರಾಹು ಈ ವರ್ಷ ಪೂರ್ತಿ ಮೀನ ರಾಶಿಯಲ್ಲಿ ಸಾಗುತ್ತಾನೆ. ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಗ್ರಹಗಳ ರಾಜನಾದ ಸೂರ್ಯನು ರಾಹುವು ಆಕ್ರಮಿಸಿಕೊಂಡಿರುವ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಸ್ಥಾನ ಬಲವಾಗಿದ್ದರೆ ಸಮಾಜದಲ್ಲಿ ವ್ಯಕ್ತಿಯ ಗೌರವ, ಹೆಸರು, ಕೀರ್ತಿ ಹೆಚ್ಚುತ್ತದೆ. ರಾಹು ಮತ್ತು ಸೂರ್ಯನ ಸಂಯೋಗದಿಂದ ಗ್ರಹಣ ಯೋಗವು ರೂಪುಗೊಳ್ಳಲಿದೆ.

ಗ್ರಹಗಳ ಸಂಯೋಗದಿಂದ ಈ ರಾಶಿಗಳಿಗೆ ಶುಭಫಲ

ಕನ್ಯಾರಾಶಿ

ಶುಕ್ರನು ಕನ್ಯಾ ರಾಶಿಯವರಿಗೆ ಸಂಪತ್ತನ್ನು ನೀಡುತ್ತಾನೆ. ಸಂತಾನ ಸಮಸ್ಯೆಗಳು ದೂರವಾಗುತ್ತವೆ. ಈ ಹಿಂದೆ ಸ್ಥಗಿತಗೊಂಡಿದ್ದ ಕೆಲಸಗಳನ್ನು ಈ ವೇಳೆಗೆ ಪೂರ್ಣಗೊಳಿಸುವಿರಿ. ಸಂಗಾತಿಯ ಬೆಂಬಲ ಸಿಗುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಶುಭ ಸಮಯ.

ಕುಂಭ ರಾಶಿ

ಕುಂಭ ರಾಶಿಯವರು ಸಾಧಾರಣ ಫಲಿತಾಂಶಗಳನ್ನು ಕಾಣಲಿದ್ದಾರೆ. ನಿಮ್ಮ ಕೆಲಸಗಳಿಗೆ ಕುಟುಂಬ ಸದಸ್ಯರಿಂದ ಬೆಂಬಲ ಹಾಗೂ ಹಣ ಸಿಗುವ ಸಾಧ್ಯತೆಗಳಿವೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ಸಮಯ ಅನುಕೂಲಕರವಾಗಿದೆ. ವ್ಯಾಪಾರ ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ. ಆದರೆ ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಆದಾಯ ಹೆಚ್ಚಲಿದೆ. ಒಳ್ಳೆಯ ಸುದ್ದಿ ಕೇಳುವಿರಿ. ಸ್ನೇಹಿತರ ಸಹಾಯದಿಂದ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)