Deepavali Wishes 2024: ಬೆಳಕಿನ ಹಬ್ಬಕ್ಕೆ ಶುಭಾಶಯ ತಿಳಿಸಬೇಕಾ? ಸ್ನೇಹಿತರು, ಸಂಬಂಧಿಕರೊಂದಿಗೆ ಹಂಚಿಕೊಳ್ಳಲು ದೀಪಾವಳಿ ಸಂದೇಶಗಳಿವು
ದೇಶದಾದ್ಯಂತ ನವೆಂಬರ್ 2 ರಂದು 2024ರ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಬೆಳಕಿನ ಹಬ್ಬಕ್ಕೆ ನೀವು ನಿಮ್ಮ ಸ್ನೇಹಿತರು, ಕುಟುಂಬದವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಬೇಕಾ? ನಿಮಗಾಗಿ ದೀಪಾವಳಿ ಸಂದೇಶಗಳು ಇಲ್ಲಿವೆ.
ದೀಪಗಳಿಂದ ದೀಪಗಳನ್ನು ಹಚ್ಚುವ ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಬಂದೇ ಬಿಡ್ತು. ಹೊಸ ಬಟ್ಟೆ, ಸಿಹಿ ತಿಂಡಿಗಳು, ಪಟಾಕಿ ಸದ್ದು ಪ್ರತಿಯೊಬ್ಬರ ಮನೆಯಲ್ಲಿನ ಹಬ್ಬದ ಸಂತೋಷವನ್ನು ಹೆಚ್ಚಿಸುತ್ತದೆ. ಈ ದೀಪಾವಳಿ ಪ್ರತಿಯೊಬ್ಬರ ಜೀವನದಲ್ಲಿನ ಕತ್ತಲೆಯೆಂಬ ಕಷ್ಟಗಳು, ನೋವುಗಳನ್ನು ಸರಿಸಿ ಬೆಳಕೆಂಬ ಸುಖ, ಶಾಂತಿ ನೆಮ್ಮದಿ, ಆರೋಗ್ಯ ಹಾಗೂ ಸಮೃದ್ದಿ ತರಲೆ ಎಂಬುದನ್ನು ಎಲ್ಲರ ಹಾರೈಕೆಯಾಗಿರುತ್ತದೆ. 2024ರ ದೀಪಾವಳಿ ನವೆಂಬರ್ 2ರ ಶನಿವಾರ ಆಚರಿಸಲಾಗುತ್ತಿದೆ. ಈ ಬೆಳಕಿನ ಹಬ್ಬಕ್ಕೆ ನೀವು ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಒಂದಷ್ಟು ಸಂದೇಶಗಳನ್ನು ಇಲ್ಲಿ ನೀಡಲಾಗಿದೆ. ಈ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಬಹುದು.
1. ಈ ಬೆಳಕಿನ ಹಬ್ಬ ನಿಮ್ಮ ಜೀವನದಲ್ಲಿ ಹೊಸ ಕನಸುಗಳನ್ನು ಈಡೇರಿಸಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
2. ಕತ್ತಲೆಯೆಂಬ ನಕಾರಾತ್ಮಕ ಶಕ್ತಿ ಮೇಲೆ ಬೆಳಕೆಂಬ ಸಕಾರಾತ್ಮಕತೆ ಶಕ್ತಿ ಮೂಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು
3. ಬೆಳಕಿನ ಹಬ್ಬವನ್ನು ಏಕತೆ ಮತ್ತು ಪ್ರೀತಿಯಿಂದ ಆಚರಿಸೋಣ. ದೀಪಾವಳಿಯ ಶುಭಾಶಯಗಳು.
4. ದೀಪದಿಂದ ದೀಪ ಬೆಳಗುವಂತೆ ಪ್ರೀತಿಯಿಂದ ಪ್ರೀತಿಯನ್ನು ಹರಡೋಣ. ದೀಪಾವಳಿ ಹಬ್ಬದ ಶುಭಾಶಯಗಳು
5. ಕಷ್ಟಗಳೆಂಬ ಕತ್ತಲೆ ಕಳೆದು ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಂತೋಷ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
6. ಹಣತೆಯ ಬೆಳಕು ಅಂಧಕಾರವನ್ನು ಕಳೆಯುವಂತೆ ಈ ದೀಪಾವಳಿ ನಿಮ್ಮ ಜೀವನದ ಪ್ರತಿಯೊಂದು ಸಂಕಷ್ಟಗಳನ್ನು ದೂರವಾಗಿಸಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
7. ದೀಪಗಳ ಬೆಳಕು ಪ್ರತಿ ಮನೆಯಲ್ಲೂ ಬೆಳಗಲಿ, ಪ್ರತಿಯೊಬ್ಬರ ಮನದಲ್ಲೂ ಸಂತೋಷವನ್ನು ತರಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
8. ಅಜ್ಞಾನ, ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚೋಣ. ದ್ವೇಷ, ಅಸೂಯೆ ಬಿಟ್ಟು ಪ್ರೀತಿಯ ಜ್ಯೋತಿ ಬೆಳಗೋಣ. ದೀಪಾವಳಿ ಹಬ್ಬದ ಶುಭಾಶಯಗಳು
9. ಜಾತಿ-ಧರ್ಮ, ಕುಲ-ಮತ ಎನ್ನದೆ ಸಂತಸದಿಂದ ಬೆಳಕಿನ ಹಬ್ಬವನ್ನು ಆಚರಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು