ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saturn Retrograde: ಶನಿ ಹಿಮ್ಮುಖ ಚಲನೆ; ಈ 4 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭಗಳು

Saturn Retrograde: ಶನಿ ಹಿಮ್ಮುಖ ಚಲನೆ; ಈ 4 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭಗಳು

Saturn Retrograde: ಅತಿ ಶೀಘ್ರದಲ್ಲಿ ಶನಿ ತನ್ನ ಸ್ಥಾನವನ್ನು ಬದಲಾಯಿಸಿಳ್ಳಲಿದ್ದಾನೆ. ಜೂನ್‌ನಿಂದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಆರ್ಥಿಕ ಲಾಭಗಳಿವೆ.

ಶನಿ ಹಿಮ್ಮುಖವಾಗಿ ಚಲಿಸುವುದರಿಂದ ಕೆಲವು ರಾಶಿಯವರಿಗೆ ಆರ್ಥಿಕವಾಗಿ ಲಾಭಗಳಿವೆ.
ಶನಿ ಹಿಮ್ಮುಖವಾಗಿ ಚಲಿಸುವುದರಿಂದ ಕೆಲವು ರಾಶಿಯವರಿಗೆ ಆರ್ಥಿಕವಾಗಿ ಲಾಭಗಳಿವೆ.

ನವಗ್ರಹಗಳು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಚಲಿಸಿದಾಗ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಶನಿಯ ಸಂಕ್ರಮಣ ತುಂಬಾ ಅನುಕೂಲಕರ ಫಲಿತಾಂಶಗಲನ್ನು ನೀಡಿದರೆ ಇನ್ನೂ ಕೆಲವರಿಗೆ ಕೆಟ್ಟ ಫಲಿತಾಂಶಗಳನ್ನು ಎದುರಿಸುವ ಸಂದರ್ಭಗಳು ಬರುತ್ತವೆ. ಆದುದರಿಂಲೇ ಶನಿಯು ಕರ್ಮಫಲವನ್ನು ಕೊಡುವವನೆಂದು ಕರೆಯಲಾಗುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಶನಿಯು ನಿಮ್ಮನ್ನು ಆಶೀರ್ವದಿಸುತ್ತಾನೆ.

ಶನಿಯು ಎಲ್ಲಾ ಗ್ರಹಗಳಿಗೆ ನಿಧಾನವಾಗಿ ಚಲಿಸುತ್ತಾನೆ. ಈ ಗ್ರಹಗಳಲ್ಲಿ ಚಲನೆಯು ಕ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ. ಶನಿಯು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯಲ್ಲಿ ಇಡೀ ವರ್ಷ ಇರುತ್ತಾನೆ. ಆದರೆ ಅವನು ತನ್ನ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತಾನೆ. ಶನಿಯು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ.

ಜೂನ್ ತಿಂಗಳಿನಲ್ಲಿ ಶನಿಯು ಹಿಮ್ಮುಖ ಹಂತದಲ್ಲಿ (Saturn Retrograde) ಸಾಗುತ್ತಾನೆ. ಜೂನ್ 29 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಸಾಗುತ್ತಾನೆ. ಶನಿಯ ಈ ಹಿಮ್ಮುಖ ಸಂಕ್ರಮಣವು 2024ರ ನವೆಂಬರ್ ವರೆಗೆ ಇರುತ್ತದೆ. ಮುಂದಿನ 137 ದಿನಗಳವರೆಗೆ ಶನಿಯು ಈ ಕೆಳಗಿನ ನಾಲ್ಕು ರಾಶಿಯವರಿಗೆ ಅನೇಕ ಲಾಭಗಳನ್ನು ನೀಡುತ್ತಾನೆ. ಶನಿಗ್ರಹದ ಹಿಮ್ಮುಖ ಚಲನೆಯ ಪರಿಣಾಮವಾಗಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ. ಅನ್ನೋದನ್ನು ಇಲ್ಲಿ ನೀಡಲಾಗಿದೆ. ನಿಮ್ಮ ರಾಶಿಯೂ ಇದೆಯೇ ಎಂಬುದನ್ನು ಪರಿಶೀಲಿಸಿ.

ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಶನಿ ಹಿಮ್ಮೆಟ್ಟುವಿಕೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ವ್ಯಾಪಾರದಲ್ಲಿ ಲಾಭ ಇರುತ್ತದೆ. ಉದ್ಯಮಿಗಳು ದೊಡ್ಡ ಒಪ್ಪಂಗಳನ್ನು ಮಾಡಿಕೊಳ್ಳಲಿದ್ದಾರೆ. ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ. ಸಂಪೂರ್ಣ ಆರ್ಥಿಕ ಲಾಭಗಳು ಇರುತ್ತವೆ. ವ್ಯಾಪಾರಸ್ಥರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ವೃಷಭ ರಾಶಿ (Taurus)

ಶನಿಯ ಹಿಮ್ಮುಖ ಸಂಚಾರದಿಂದ ವೃಷಭ ರಾಶಿಯವರಿಗೆ ಶುಭಕರವಾಗಿದೆ. ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಮಗುವಿನ ಕುರಿತು ಸಿಹಿ ಸುದ್ದಿ ಕೇಳುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಮತ್ತು ಅಡೆತಡೆಗಳು ನಿವಾರಣೆಯಾಗುತ್ತವೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಲಿದ್ದೀರಿ.

ವೃಶ್ಚಿಕ ರಾಶಿ (Scorpio)

ವೃಶ್ಚಿಕ ರಾಶಿಯವರಿಗೆ ತುಂಬಾ ಶುಭವಾಗಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಆದಾಯದ ಮೂಲವೂ ಹೆಚ್ಚುತ್ತದೆ. ಹಠಾತ್ ಹಣ ಬರುವ ಸಾಧ್ಯತೆಗಳಿವೆ. ಪ್ರೀತಿಯ ಜೀವನ ಚೆನ್ನಾಗಿರುತ್ತದೆ. ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ನೀವು ವೃತ್ತಿ ಜೀವನದಲ್ಲಿ ಅನುಕೂಲಕರ ಅವಕಾಶಗಳನ್ನು ಪಡೆಯುತ್ತೀರಿ. ವೃಷಭ ರಾಶಿಯವರು ತಮ್ಮ ಅಪೂರ್ಣ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೂಳಿಸುತ್ತಾರೆ. ಸಂಗಾತಿ ಅಥವಾ ಪತ್ನಿಯೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಫಲಿತಾಂಶ ಹಾಗೂ ಆದಾಯವನ್ನು ಪಡೆಯುತ್ತೀರಿ.

ಕನ್ಯಾ ರಾಶಿ (Virgo)

ಶನಿಯ ಹಿಮ್ಮುಖ ಪ್ರಭಾವದಿಂದಾಗಿ ಕನ್ಯಾ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆ ಹೋಗುತ್ತೀರಿ. ವ್ಯಾಪಾರದಲ್ಲಿ ಪಾಲುದಾರರಿಂದ ಉತ್ತಮ ಲಾಭ ದೊರೆಯಲಿದೆ. ನವೆಂಬರ್ ತಿಂಗಳವರೆಗೆ ಶನಿಯ ಆಶೀರ್ವಾದದಿಂದ ಎಲ್ಲವೂ ಚೆನ್ನಾಗಿ ನಡೆಯುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.