ಕನ್ನಡ ಸುದ್ದಿ  /  Astrology  /  Horoscope Astrology Things Color Which Belongs To Chandra Graha Zodiac Signs Chandra Graha Mantra Rsm

Chandra Graha: ಸ್ತ್ರೀ ಗ್ರಹವಾದ ಚಂದ್ರನ ಬಗ್ಗೆ ನಿಮಗೆಷ್ಟು ಗೊತ್ತು; ಚಂದ್ರನಿಗೆ ಸಂಬಂಧಿಸಿದ ಧಾನ್ಯ, ಬಣ್ಣ, ಲೋಹದ ಬಗ್ಗೆ ಇಲ್ಲಿದೆ ಮಾಹಿತಿ

ಚಂದ್ರನ ಅಧಿದೇವತೆ ದುರ್ಗಾ ಮಾತೆ. ಬಿಳಿ ಬಣ್ಣ ಅಥವಾ ಹಾಲಿನ ಬಣ್ಣ ಚಂದ್ರನಿಗೆ ಇಷ್ಟವಾದವುಗಳು. ಚಂದ್ರನಿಗೆ ಸಂಬಂಧಪಟ್ಟ ರತ್ನವೆಂದರೆ ಮುತ್ತು. ಚಂದ್ರನಿಗೆ ಸಂಬಂಧಿಸಿದ ಲೋಹ ಬೆಳ್ಳಿ, ಚಂದ್ರ ಗ್ರಹಕ್ಕೆ ಸಂಬಂಧಿಸಿದ ಧಾನ್ಯ ಅಕ್ಕಿ.

ಚಂದ್ರಗ್ರಹ
ಚಂದ್ರಗ್ರಹ (PC: Pixaby)

ಜಾತಕದಲ್ಲಿ ಸೂರ್ಯ ಮತ್ತು ಚಂದ್ರರಿಗೆ ಕೇವಲ ಒಂದು ಮನೆಯ ಅಧಿಪತ್ಯವಿದೆ. ಸೂರ್ಯನಂತೆ ಮುಖ್ಯವಾದ ಗ್ರಹ ಎಂದರೆ ಚಂದ್ರ. ಚಂದ್ರನು ಸ್ತ್ರೀಗ್ರಹ. ಗೋಚಾರದಲ್ಲಿ ಅತಿ ವೇಗವಾಗಿ ಚಲಿಸುವ ಗ್ರಹ ಎಂದರೆ ಚಂದ್ರ ಮಾತ್ರ. ಚಂದ್ರನು ಒಬ್ಬ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತಾನೆ.

ಮನಸ್ಸಿನ ಮೇಲೆ ಪ್ರಭಾವ ಬೀರುವ ಚಂದ್ರ

ಯಾವುದೇ ಮನುಷ್ಯನು ತನ್ನ ಮನಸ್ಸನ್ನು ಬದಲಾಯಿಸಿದ ಎಂದರೆ ಅದಕ್ಕೆ ಕಾರಣ ಚಂದ್ರ ಗ್ರಹ. ಸಾಮಾನ್ಯವಾಗಿ ಚಂದ್ರನು ಜಾತಕದಲ್ಲಿ ತಾಯಿಯನ್ನು ಸೂಚಿಸುತ್ತಾನೆ. ಹಾಗೆಯೇ ವಿವಾಹ ಆದ ನಂತರ ಅತ್ತೆಯನ್ನು ಸೂಚಿಸುತ್ತಾನೆ. ಕೆಲವು ಆಧ್ಯಾತ್ಮಿಕ ಗ್ರಂಥಗಳಲ್ಲಿ ಚಂದ್ರನನ್ನು ಪಾರ್ವತಿಯ ಸ್ವರೂಪ ಎಂದು ಹೇಳಲಾಗಿದೆ. ಚಂದ್ರನಿಗೆ ಕಟಕ ಸ್ವಕ್ಷೇತ್ರ ,ವೃಷಭ ಉಚ್ಛರಾಶಿ ಮತ್ತು ಮೂಲ ತ್ರಿಕೋನ, ಸಿಂಹ ಹಾಗೂ ಕನ್ಯಾ ರಾಶಿಗಳು ಮಿತ್ಯ ಕ್ಷೇತ್ರಗಳಾಗುತ್ತವೆ. ವೃಶ್ಚಿಕವು ನೀಚ ರಾಶಿಯಾಗುತ್ತದೆ ಉಳಿದ ರಾಶಿಗಳಾದ ಮೇಷ, ಮಿಥುನ, ತುಲಾ, ಧನಸ್ಸು, ಮಕರ, ಕುಂಭ ಮತ್ತು ಮೀನ ರಾಶಿಗಳು ಸಮಕ್ಷೇತ್ರಗಳಾಗುತ್ತವೆ.

ದುರ್ಗೆ, ಚಂದ್ರನ ಅಧಿದೇವತೆ

ಚಂದ್ರನ ಅಧಿದೇವತೆ ದುರ್ಗಾ ಮಾತೆ. ಬಿಳಿ ಬಣ್ಣ ಅಥವಾ ಹಾಲಿನ ಬಣ್ಣ ಚಂದ್ರನಿಗೆ ಇಷ್ಟವಾದವುಗಳು. ಚಂದ್ರನಿಗೆ ಸಂಬಂಧಪಟ್ಟ ರತ್ನವೆಂದರೆ ಮುತ್ತು. ಚಂದ್ರನಿಗೆ ಸಂಬಂಧಿಸಿದ ಲೋಹ ಬೆಳ್ಳಿ, ಚಂದ್ರ ಗ್ರಹಕ್ಕೆ ಸಂಬಂಧಿಸಿದ ಧಾನ್ಯ ಅಕ್ಕಿ. ಹಾಗೇ ಹಾಲು ಕೂಡಾ ಚಂದ್ರನಿಗೆ ಸಂಬಂಧಿಸಿದ್ದಾಗಿದೆ. ಚಂದ್ರನು ಹೃದಯವನ್ನು ತೋರಿಸುತ್ತಾನೆ ಅಥವಾ ಎದೆಯ ಭಾಗವನ್ನು ತೋರಿಸುತ್ತಾನೆ. ಚಂದ್ರನಿಗೆ ರಾಹು ಕೇತು ಶತ್ರು ಗ್ರಹಗಳು. ಸೂರ್ಯ ಮತ್ತು ಬುಧ ಮಿತ್ರಗಳಾದರೆ, ಗುರು, ಶುಕ್ರ ಮತ್ತು ಶನಿ ಗ್ರಹಗಳು ಸಮಗ್ರಹಗಳಾಗಿವೆ.

ಚಂದ್ರನು ಮನಸ್ಸಿನ ಮೇಲೆ ಪ್ರಭಾವ ಬೀರುವ ಕಾರಣ ಮಾನಸಿಕ ನೆಮ್ಮದಿಗಾಗಿ ದುರ್ಗೆಯ ಪೂಜೆಯನ್ನು ಮಾಡಬಹುದು. ಹಾಗೆಯೇ ದುರ್ಗಾ ದೇವಾಲಯಕ್ಕೆ ಅಕ್ಕಿ, ಹಾಲು ಮತ್ತು ಬಿಳಿ ವಸ್ತ್ರವನ್ನು ದಾನ ನೀಡುವುದರಿಂದ ಶುಭ ಫಲಗಳನ್ನು ಪಡೆಯಬಹುದು.

ಮುತ್ತು, ಚಂದ್ರನಿಗೆ ಸಂಬಂಧಿಸಿದ ರತ್ನ

ಕುಂಡಲಿಯಲ್ಲಿ ಚಂದ್ರನ ದೋಷದ ಬಗ್ಗೆ ತಿಳಿದುಕೊಂಡು ಮುತ್ತನ್ನು ಧರಿಸಬಹುದು. ಇನ್ನೂ ಉತ್ತಮ ಫಲಗಳನ್ನು ಪಡೆಯಲು ತಾಯಿಯನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು. ವಿವಾಹ ಆದ ನಂತರ ಅತ್ತೆಯನ್ನು ಪ್ರೀತಿ ವಿಶ್ವಾಸದಿಂದ ಸಲಹಬೇಕು. ಇದರಿಂದ ಎಲ್ಲಾ ರೀತಿಯ ಶುಭ ಫಲಗಳು ದೊರೆಯುತ್ತವೆ. ಎದೆಯ ಭಾಗಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಚಂದ್ರನ ಶಾಂತಿಯನ್ನು ಮಾಡಬಹುದು. ಒಟ್ಟಾರೆ ಗೋಚಾರದಲ್ಲಿ ನಕ್ಷತ್ರವನ್ನು ಆಧರಿಸಿ ಚಂದ್ರನ ಬಲವನ್ನು ತಿಳಿಯಬಹುದು

ಒಂದು ವೇಳೆ ನಿಮ್ಮ ಜಾತಕದಲ್ಲಿ ಚಂದ್ರನ ದೋಷ ಇದ್ದರೆ ಪ್ರತಿದಿನ ಚಂದ್ರ ಬೀಜ ಮಂತ್ರ, ಚಂದ್ರ ಶಾಂತಿ ಮಂತ್ರ, ಚಂದ್ರ ಗಾಯತ್ರಿ ಮಂತ್ರವನ್ನು ಪಠಿಸಿ, ಸೂಕ್ತ ಜ್ಯೋತಿಷಿಗಳನ್ನು ಸಂಪರ್ಕಿಸಿ ಚಂದ್ರ ಶಾಂತಿ ಮಾಡಿಸಿ.

ವಿಭಾಗ