ಒಂದೇ ರೀತಿ ಮ್ಯಾಗಿ ತಿಂದು ಬೇಜಾರಾಗಿದ್ದರೆ ಈ ಪಾಕವಿಧಾನವನ್ನು ಟ್ರೈ ಮಾಡಿ: ಇಲ್ಲಿದೆ ವೆಜ್ ಬಿರಿಯಾನಿ ಮ್ಯಾಗಿ ರೆಸಿಪಿ
ಮ್ಯಾಗಿಯು ಬ್ಯಾಚುಲರ್‌ಗಳ ಫೇವರಿಟ್ ಖಾದ್ಯ ಎಂದರೆ ತಪ್ಪಿಲ್ಲ. ತ್ವರಿತವಾಗಿ ಸಿದ್ಧವಾಗುವ ಮ್ಯಾಗಿಯನ್ನು ಉಪಹಾರ, ಮಧ್ಯಾಹ್ನದ ಊಟ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಸೇವಿಸುವವರು ಅನೇಕರಿದ್ದಾರೆ. ಮೈದಾ ಮ್ಯಾಗಿ ಬದಲಿಗೆ ಗೋಧಿ ಹಿಟ್ಟು ಮತ್ತು ರಾಗಿಯಿಂದ ಮಾಡಿದ ಮ್ಯಾಗಿ ತಯಾರಿಸುವುದು ಉತ್ತಮ. ಒಂದೇ ರೀತಿ ಮ್ಯಾಗಿ ಮಾಡುವ ಬದಲು ಈ ರೀತಿ ವೆಜ್ ಬಿರಿಯಾನಿ ಮ್ಯಾಗಿ ತಯಾರಿಸಿ.
ಮ್ಯಾಗಿಯು ಬ್ಯಾಚಲರ್‌ಗಳ ನೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಕೇವಲ ಐದು ನಿಮಿಷಗಳಲ್ಲಿ ಸಿದ್ಧವಾಗುವ ಮ್ಯಾಗಿಯು ಬಹುತೇಕರ ಉಪಹಾರವು ಹೌದು. ಕೆಲವರು, ನೀರು ಬಿಸಿ ಮಾಡಿ ಅದಕ್ಕೆ ಮ್ಯಾಗಿ ಹಾಕಿ ಬೇಯಿಸಿ ತಿನ್ನುತ್ತಾರೆ. ಇನ್ನೂ ಕೆಲವರು, ತರಕಾರಿ ಅಥವಾ ಮೊಟ್ಟೆ ಮ್ಯಾಗಿಯನ್ನು ತಯಾರಿಸಿ ತಿನ್ನುತ್ತಾರೆ. ತ್ವರಿತವಾಗಿ ಸಿದ್ಧವಾಗುವುದರಿಂದ ಮ್ಯಾಗಿಯು ಬ್ಯಾಚುಲರ್‌ಗಳ ಫೇವರಿಟ್ ಎಂದರೆ ತಪ್ಪಿಲ್ಲ. ವಿಶೇಷವಾಗಿ ಈಗಂತೂ ರಾಗಿ ಮತ್ತು ಗೋಧಿ ಹಿಟ್ಟಿನ ಮ್ಯಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳೊಂದಿಗೆ ರುಚಿಕರವಾದ ಮ್ಯಾಗಿಯನ್ನು ಮಾಡಬಹುದು. ಮೈದಾ ಮ್ಯಾಗಿ ಬದಲಿಗೆ ಗೋಧಿ ಹಿಟ್ಟು ಮತ್ತು ರಾಗಿಯಿಂದ ಮಾಡಿದ ಮ್ಯಾಗಿ ತಯಾರಿಸುವುದು ಉತ್ತಮ. ಹಾಗಿದ್ದರೆ ಬಿರಿಯಾನಿ ಮ್ಯಾಗಿ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿದೆ ರೆಸಿಪಿ ತಯಾರಿಸುವ ವಿಧಾನ.
ವೆಜ್ ಬಿರಿಯಾನಿ ಮ್ಯಾಗಿ ರೆಸಿಪಿ ತಯಾರಿಸುವ ವಿಧಾನ
ಬೇಕಾಗುವ ಪದಾರ್ಥಗಳು: ಮ್ಯಾಗಿ ನೂಡಲ್ಸ್- ಒಂದು ಪ್ಯಾಕೆಟ್, ಎಣ್ಣೆ- ಎರಡು ಚಮಚ, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಈರುಳ್ಳಿ- ಅರ್ಧ ಕಪ್, ಟೊಮೆಟೊ ಪೇಸ್ಟ್- ಅರ್ಧ ಕಪ್, ಕ್ಯಾಪ್ಸಿಕಂ ಮೊಸರು- ಕಾಲು ಕಪ್, ಹಸಿರು ಬಟಾಣಿ- ಕಾಲು ಕಪ್, ಬೀನ್ಸ್- ಕಾಲು ಕಪ್, ಕ್ಯಾರೆಟ್- ಕಾಲು ಕಪ್, ಮೆಣಸಿನಪುಡಿ- ಒಂದು ಚಮಚ, ಅರಿಶಿನ- ಅರ್ಧ ಚಮಚ, ಬಿರಿಯಾನಿ ಮಸಾಲೆ- ಒಂದೂವರೆ ಟೀ ಚಮಚ, ಮ್ಯಾಗಿ ಮಸಾಲೆ ಪೌಡರ್- ಎರಡು ಪ್ಯಾಕೆಟ್‌ಗಳು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಎರಡು ಟೀ ಚಮಚ.
ರೆಸಿಪಿ ತಯಾರಿಸುವ ವಿಧಾನ: ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ.
- ಅದಕ್ಕೆ ಅರ್ಧದಷ್ಟು ಈರುಳ್ಳಿಯನ್ನು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
- ಸ್ವಲ್ಪ ಈರುಳ್ಳಿಯನ್ನು ಆಳವಾಗಿ ಹುರಿದ ನಂತರ ಅವುಗಳನ್ನು ಪಕ್ಕಕ್ಕೆ ಇರಿಸಿ.
- ಈಗ ಉಳಿದ ಎಣ್ಣೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಫ್ರೈ ಮಾಡಿ.
- ನಂತರ ಟೊಮೆಟೊ ಪೇಸ್ಟ್, ಕ್ಯಾಪ್ಸಿಕಂ, ಕ್ಯಾರೆಟ್ ಮತ್ತು ಬೀನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ.
- ಇದಕ್ಕೆ ಮೆಣಸಿನಪುಡಿ, ಅರಿಶಿನ ಮತ್ತು ಬಿರಿಯಾನಿ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಮ್ಯಾಗಿ ಪ್ಯಾಕೆಟ್‍ನಲ್ಲಿ ಕೊಟ್ಟಿರುವ ಮಸಾಲೆ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಈ ಸಂಪೂರ್ಣ ಮಿಶ್ರಣವನ್ನು ಕುದಿಸಲು ಎರಡು ಕಪ್ ನೀರು ಸೇರಿಸಿ.
- ನಂತರ ಮ್ಯಾಗಿ ನೂಡಲ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬೇಯಿಸಿ.
- ಬೆಂದ ನಂತರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಸ್ಟೌವ್ ಆಫ್ ಮಾಡಿದರೆ ಟೇಸ್ಟಿ ವೆಜ್ ಬಿರಿಯಾನಿ ಮ್ಯಾಗಿ ಸಿದ್ಧ.
ಬಿರಿಯಾನಿ ಮ್ಯಾಗಿಯಲ್ಲಿ ಸಾಕಷ್ಟು ಆರೋಗ್ಯಕರ ತರಕಾರಿಗಳನ್ನು ಬಳಸಲಾಗಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಆದಷ್ಟು ಇದನ್ನು ಬಿಸಿ ಬಿಸಿಯಾಗಿ ತಿನ್ನಲು ಪ್ರಯತ್ನಿಸಿ. ವಾರಕ್ಕೊಮ್ಮೆ ಮಕ್ಕಳಿಗೆ ಕೊಟ್ಟರೆ ಬಹಳ ಇಷ್ಟಪಟ್ಟು ತಿನ್ನಬಹುದು. ಹೀಗೆ ತರಕಾರಿಗಳ ಜತೆ ಮ್ಯಾಗಿ ತಿಂದರೆ ಪೌಷ್ಟಿಕಾಂಶದ ಕೊರತೆಯೂ ಕಾಡುವುದಿಲ್ಲ.
ವಿಭಾಗ