ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ವಿಜಯ; ಡಬ್ಲ್ಯುಟಿಸಿ ಅಪ್ಡೇಟೆಡ್ ಅಂಕಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ವಿಜಯ; ಡಬ್ಲ್ಯುಟಿಸಿ ಅಪ್ಡೇಟೆಡ್ ಅಂಕಪಟ್ಟಿ ಹೀಗಿದೆ

ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ವಿಜಯ; ಡಬ್ಲ್ಯುಟಿಸಿ ಅಪ್ಡೇಟೆಡ್ ಅಂಕಪಟ್ಟಿ ಹೀಗಿದೆ

  • ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ ಎಂಬುದನ್ನು ನೋಡೋಣ. ಅಪ್ಡೇಟೆಡ್ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಸೋತಿದ್ದ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬಂದಿತ್ತು. ಆದಾಗ್ಯೂ, ಕಿಂಗ್‌ಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ಮೂಲಕ ಮೆಹೆದಿ ಹಸನ್ ಮಿರಾಜ್ ಬಳಗ ಮತ್ತೆ ಮೇಲೇರಿತು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆಲುವಿನೊಂದಿಗೆ ಬಾಂಗ್ಲಾದೇಶ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದೆ. ಒಂಬತ್ತರಿಂದ ಎಂಟಕ್ಕೆ ಸ್ಥಾನಕ್ಕೆ ಏರಿದೆ. ಸದ್ಯ ಬಾಂಗ್ಲಾದೇಶ 12 ಪಂದ್ಯಗಳಲ್ಲಿ 31.25ರ ಸರಾಸರಿಯಲ್ಲಿ 45 ಅಂಕಗಳನ್ನು ಗಳಿಸಿದೆ. ತಂಡದ ಬಳಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಹೋಗಲು ಅವಕಾಶ ಇಲ್ಲ.
icon

(1 / 6)

ಕಿಂಗ್ಸ್‌ಸ್ಟನ್ ಟೆಸ್ಟ್‌ನಲ್ಲಿ ಸೋತ ನಂತರ ವೆಸ್ಟ್ ಇಂಡೀಸ್ ಲೀಗ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿದೆ. ಕೊನೆಯಲ್ಲಿ ಅವರು ಒಂದು ಹೆಜ್ಜೆ ಕೆಳಗಿಳಿದು ಒಂಬತ್ತನೇ ಸ್ಥಾನಕ್ಕೆ ಇಳಿದಿದೆ. ಕೆರಿಬಿಯನ್ ತಂಡ 11 ಪಂದ್ಯಗಳಲ್ಲಿ 24.24 ಸರಾಸರಿಯಲ್ಲಿ 32 ಅಂಕಗಳನ್ನು ಹೊಂದಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪ್ರವೇಶಿಸಲು ವೆಸ್ಟ್ ಇಂಡೀಸ್‌ ತಂಡಕ್ಕೆ ಅವಕಾಶವಿಲ್ಲ.
icon

(2 / 6)

ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಫಲಿತಾಂಶವು ಲೀಗ್ ಟೇಬಲ್ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಟೀಮ್ ಇಂಡಿಯಾ 15 ಪಂದ್ಯಗಳಲ್ಲಿ 61.11 ಸರಾಸರಿಯಲ್ಲಿ 110 ಅಂಕಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಸದ್ಯ ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ 59.26ರ ಸರಾಸರಿಯಲ್ಲಿ 64 ಅಂಕಗಳನ್ನು ಗಳಿಸಿದೆ.
icon

(3 / 6)

ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಫಲಿತಾಂಶವು ಲೀಗ್ ಟೇಬಲ್ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಟೀಮ್ ಇಂಡಿಯಾ 15 ಪಂದ್ಯಗಳಲ್ಲಿ 61.11 ಸರಾಸರಿಯಲ್ಲಿ 110 ಅಂಕಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಸದ್ಯ ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ 59.26ರ ಸರಾಸರಿಯಲ್ಲಿ 64 ಅಂಕಗಳನ್ನು ಗಳಿಸಿದೆ.(AFP)

ಆಸ್ಟ್ರೇಲಿಯಾ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 13 ಪಂದ್ಯಗಳಲ್ಲಿ 57.69 ಸರಾಸರಿಯಲ್ಲಿ 90 ಅಂಕಗಳನ್ನು ಹೊಂದಿದೆ. ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ. ಸಿಂಹಳೀಯರು 10 ಪಂದ್ಯಗಳಲ್ಲಿ 50.00ರ ದರದಲ್ಲಿ 60 ಅಂಕಗಳನ್ನು ಗಳಿಸಿದ್ದಾರೆ. ನ್ಯೂಜಿಲೆಂಡ್ ಐದನೇ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್ 12 ಪಂದ್ಯಗಳಲ್ಲಿ 47.92ರ ಸರಾಸರಿಯಲ್ಲಿ 69 ಅಂಕಗಳನ್ನು ಸಂಪಾದಿಸಿದೆ.
icon

(4 / 6)

ಆಸ್ಟ್ರೇಲಿಯಾ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 13 ಪಂದ್ಯಗಳಲ್ಲಿ 57.69 ಸರಾಸರಿಯಲ್ಲಿ 90 ಅಂಕಗಳನ್ನು ಹೊಂದಿದೆ. ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ. ಸಿಂಹಳೀಯರು 10 ಪಂದ್ಯಗಳಲ್ಲಿ 50.00ರ ದರದಲ್ಲಿ 60 ಅಂಕಗಳನ್ನು ಗಳಿಸಿದ್ದಾರೆ. ನ್ಯೂಜಿಲೆಂಡ್ ಐದನೇ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್ 12 ಪಂದ್ಯಗಳಲ್ಲಿ 47.92ರ ಸರಾಸರಿಯಲ್ಲಿ 69 ಅಂಕಗಳನ್ನು ಸಂಪಾದಿಸಿದೆ.(AP)

ಇಂಗ್ಲೆಂಡ್ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಬ್ರಿಟಿಷರು 20 ಪಂದ್ಯಗಳಲ್ಲಿ 42.50ರ ದರದಲ್ಲಿ 102 ಅಂಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಏಳನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆಡಿರುವ 10 ಪಂದ್ಯಗಳಲ್ಲಿ 33.33ರ ಸರಾಸರಿಯಲ್ಲಿ 40 ಅಂಕಗಳನ್ನು ಗಳಿಸಿದೆ.
icon

(5 / 6)

ಇಂಗ್ಲೆಂಡ್ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಬ್ರಿಟಿಷರು 20 ಪಂದ್ಯಗಳಲ್ಲಿ 42.50ರ ದರದಲ್ಲಿ 102 ಅಂಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಏಳನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆಡಿರುವ 10 ಪಂದ್ಯಗಳಲ್ಲಿ 33.33ರ ಸರಾಸರಿಯಲ್ಲಿ 40 ಅಂಕಗಳನ್ನು ಗಳಿಸಿದೆ.(AFP)

ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳಿಗೆ ದಂಡ ವಿಧಿಸಲಾಗಿದೆ. ಎರಡೂ ತಂಡಗಳ ಮೂರು ಡಬ್ಲ್ಯುಟಿಸಿ ಅಂಕಗಳನ್ನು ಕಡಿತ ಮಾಡಲಾಗಿದೆ. ಇದೇ ವೇಳೆ ಉಭಯ ದೇಶಗಳ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ.
icon

(6 / 6)

ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳಿಗೆ ದಂಡ ವಿಧಿಸಲಾಗಿದೆ. ಎರಡೂ ತಂಡಗಳ ಮೂರು ಡಬ್ಲ್ಯುಟಿಸಿ ಅಂಕಗಳನ್ನು ಕಡಿತ ಮಾಡಲಾಗಿದೆ. ಇದೇ ವೇಳೆ ಉಭಯ ದೇಶಗಳ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ.(AP)

ಇತರ ಗ್ಯಾಲರಿಗಳು