Malavya Rajayoga: 2025ರ ಜನವರಿಯಲ್ಲಿ ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನ ಲಾಭ
2025 ರ ಜನವರಿಯಲ್ಲಿ ಪ್ರಮುಖ ಗ್ರಹ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳು ಕೆಲವು ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ತಿರುವುಗಳನ್ನು ತರುತ್ತವೆ. 2025 ರ ಜನವರಿಯಲ್ಲಿ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಾಲವ್ಯ ಯೋಗ ಉಂಟಾಗುತ್ತದೆ. ಇದು ಕೆಲವು ರಾಶಿಯವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಾಳವ್ಯ ರಾಜಯೋಗವು ಪಂಚ ಮಹಾಪುರುಷ ರಾಜಯೋಗಗಳಲ್ಲಿ ಅತ್ಯಂತ ಪವಿತ್ರ ಮತ್ತು ನಿರ್ಣಾಯಕವಾಗಿದೆ. ಶುಕ್ರನ ಸಂಕ್ರಮಣ ಬದಲಾವಣೆಯಿಂದ ಈ ಯೋಗವು ರೂಪುಗೊಳ್ಳುತ್ತದೆ. ಶುಕ್ರನು ಅದೃಷ್ಟ, ಸಮೃದ್ಧಿ, ಹಿರಿಮೆ, ಪ್ರೀತಿ, ಕೀರ್ತಿ, ಸಂಪತ್ತು ಹಾಗೂ ಆಕರ್ಷಣೆಯ ಸಂಕೇತವಾಗಿದೆ. ಶುಕ್ರನ ಸಂಕ್ರಮಣದಿಂದಾಗಿ ವ್ಯಕ್ತಿಯು ಧೈರ್ಯಶಾಲಿ, ಶಕ್ತಿಶಾಲಿ ಹಾಗೂ ಅದೃಷ್ಟಶಾಲಿಯಾಗುತ್ತಾನೆ. ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಶಾಂತವಾಗಿರುತ್ತಾನೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಪ್ರೀತಿಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಾನೆ. ಎಲ್ಲದರಲ್ಲೂ ಅದೃಷ್ಟವು ದಾರಿ ಮಾಡಿಕೊಡುತ್ತದೆ. ಅಗತ್ಯದ ಸಮಯದಲ್ಲಿ ಹಣವು ಹರಿದು ಬರುತ್ತದೆ ಮತ್ತು ಹೇರಳವಾಗಿ ಬರುತ್ತದೆ.
ಪಂಚಾಂಗದ ಪ್ರಕಾರ 2025 ರ ಜನವರಿ 28 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಉಂಟಾಗುವ ಮಾಲವ್ಯ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಚೆನ್ನಾಗಿ ಹೊಂದುತ್ತದೆ. ಈ ಅಪರೂಪದ ಯೋಗದಿಂದ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂದು ತಿಳಿಯೋಣ.
ವೃಷಭ ರಾಶಿ
ಶುಕ್ರ ಅಧಿಪತ್ಯವಿರುವ ವೃಷಭ ರಾಶಿಯವರಿಗೆ ಈ ಮಾಲವ್ಯ ಯೋಗವು ಅನೇಕ ಲಾಭಗಳನ್ನು ತರುತ್ತದೆ. ಆವಿಷ್ಕಾರದ ಬಯಕೆ ಈಡೇರುತ್ತದೆ. ಆರ್ಥಿಕವಾಗಿ ಹೆಚ್ಚು ಲಾಭದಾಯಕ ದಿನಗಳನ್ನು ಕಾಣಬಹುದು. ವಾಹನ ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ಅವಿವಾಹಿತರು ಈ ಸಮಯದಲ್ಲಿ ಮದುವೆಯ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ. ಪೀಡಿಸುವ ಸಾಲದ ಸಂಕಟಗಳು ಕೊನೆಗೊಳ್ಳುತ್ತವೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ.
ಕಟಕ ರಾಶಿ
ಕಟಕ ರಾಶಿಯವರು ಮಾಲವ್ಯ ಯೋಗದಿಂದ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಾಣುವರು. ಮೀನ ರಾಶಿಯಲ್ಲಿ ಶುಕ್ರ ಸಂಚಾರವು ಈ ರಾಶಿಯಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಯೋಜಿತ ಕೆಲಸವನ್ನು ನೀವು ಅಂದುಕೊಂಡತೆ ನಡೆಯುತ್ತವೆ. ಯಾವುದೇ ಚಿಂತೆಯಿಲ್ಲದೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲಾಗುತ್ತದೆ. ಈ ಯೋಗದಲ್ಲಿ ಅತಿ ದೊಡ್ಡ ಆರೋಗ್ಯ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ತುಲಾ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಲಾವನ್ನು ಆಳುವ ಗ್ರಹ ಶುಕ್ರ. ಮಾಲವ್ಯ ಯೋಗವು ಶುಕ್ರನ ಸಂಕ್ರಮಣ ಬದಲಾವಣೆಯಿಂದ ತುಲಾ ರಾಶಿಯ ಸ್ಥಾನವನ್ನು ಬದಲಾಯಿಸುತ್ತದೆ. ಹಣಕಾಸಿನ ಲಾಭ ಹೆಚ್ಚಾಗುತ್ತದೆ. ನಿಮ್ಮ ಆದಾಯದ ಮೂಲಗಳು ಬಲಗೊಳ್ಳುತ್ತವೆ. ಇದು ನಿಮ್ಮ ಲಾಭವನ್ನು ಹೆಚ್ಚಿಸುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.
ವೃಶ್ಚಿಕ ರಾಶಿ
ಮಾಲವ್ಯ ರಾಜಯೋಗದಿಂದಾಗಿ ವೃಶ್ಚಿಕ ರಾಶಿಯಲ್ಲಿ ಅತ್ಯುತ್ತಮ ಲಾಭವನ್ನು ಕಾಣಬಹುದು. ಅದರಲ್ಲೂ ಗೃಹಿಣಿಯರಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಹಳೆಯ ಸಮಸ್ಯೆಗಳು ಬಗೆಹರಿಯುತ್ತವೆ. ಉತ್ತಮ ಆರ್ಥಿಕ ಸುಧಾರಣೆ ಇರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷವಾಗುತ್ತದೆ.
ಧನು ರಾಶಿ
ಮಾಳವ್ಯ ಯೋಗವು ಧನು ರಾಶಿಯವರಿಗೆ ಸೂಕ್ತವಾಗಿರುತ್ತದೆ. ಅನಾದಿ ಕಾಲದಿಂದ ಕಾಡುತ್ತಿದ್ದ ಹಳೆಯ ಸಮಸ್ಯೆಗಳು ಈಗ ಬಗೆಹರಿಯಲಿವೆ. ವ್ಯವಹಾರದಲ್ಲಿ ಬಹಳ ಲಾಭದಾಯಕ ದಿನಗಳು ಇರುತ್ತವೆ. ನೀವು ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ, ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಒಳ್ಳೆಯ ಸುದ್ದಿ ಕೇಳುತ್ತೀರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.