Entertainment News in Kannada Live December 2, 2024: ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, UI ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 02 Dec 202401:44 PM IST
- ‘UI’ ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಇದರ ಮೂಲಕ ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದೇನೆ ಎಂಬುದನ್ನು ಉಪೇಂದ್ರ ಸೂಕ್ಷ್ಮವಾಗಿ ತೋರಿಸಿದ್ದಾರೆ. ‘ಸೂಪರ್’ನಲ್ಲಿ 2030ರ ವೇಳೆ ಹೇಗಿರುತ್ತದೆ ಎಂದು ಹೇಳಿದ್ದರು. ಈಗ ‘UI’ನಲ್ಲಿ ಅವರು 2040ರಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ತೋರಿಸುವ ಯತ್ನ ಮಾಡಿದ್ದಾರೆ. ಹಾಗಾದರೆ, ‘UI’, ‘ಸೂಪರ್’ನ ಮುಂದುವರೆದ ಭಾಗವಾ?
Mon, 02 Dec 202411:36 AM IST
- ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೇ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ ಸೇರಿ, ಚಿತ್ರತಂಡದ ಕೆಲವರು ಮಾಧ್ಯಮದ ಮುಂದೆ ಬಂದಿದ್ದರು. ಇದೇ ವೇಳೆ ಬೇಸರದ ವಿಚಾರವನ್ನೂ ಸುದೀಪ್ ಹೇಳಿಕೊಂಡರು.
Mon, 02 Dec 202410:23 AM IST
- OTT Releases This Week: ಈ ವಾರ ಒಟಿಟಿಯಲ್ಲಿ ಒಟ್ಟ 21 ಸಿನಿಮಾಗಳು ಡಿಜಿಟಲ್ ಸ್ಟ್ರೀಮ್ ಆಗಲಿವೆ. ಆ 21ರಲ್ಲಿ ಕ್ರೈಂ ಥ್ರಿಲ್ಲರ್, ರೊಮ್ಯಂಟಿಕ್, ಕಾಮಿಡಿ, ಮರ್ಡರ್ ಮಿಸ್ಟರಿ ಸೇರಿ ಹಲವು ಪ್ರಕಾರದ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ಗಳೂ ಈ ವಾರ ಬಿಡುಗಡೆ ಆಗಲಿವೆ. ಇಲ್ಲಿದೆ ಅವುಗಳ ಮಾಹಿತಿ.
Mon, 02 Dec 202409:20 AM IST
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಸಾವಾಗಿದೆ. ದುಷ್ಟರು ಉರುಳಿಸಿದ ದಾಳಕ್ಕೆ ಜೀವ ಚೆಲ್ಲಿದ್ದಾಳೆ ಪುಟಾಣಿ. ಈ ಮೂಲಕ ಸೀರಿಯಲ್ ಇದೀಗ ಮಗ್ಗಲು ಬದಲಿಸಿದೆ. ವೀಕ್ಷಕರಿಗೂ ಹೊಸ ಟ್ವಿಸ್ಟ್ ಸಿಕ್ಕಿದೆ.
Mon, 02 Dec 202407:20 AM IST
- UI The Movie: ಬಿಡುಗಡೆ ಆಗಿರುವ ಯುಐ ಚಿತ್ರದ ವಾರ್ನರ್ ಟೀಸರ್ ಝಲಕ್‌ನಲ್ಲಿ 2040ರ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಉಪೇಂದ್ರ. ಈ ಹಿಂದಿನ ಪೋಸ್ಟರ್‌ಗಳೆಲ್ಲವನ್ನು ನೋಡಿದ ಬಳಿಕ, ಈ ಸಿನಿಮಾದಲ್ಲಿ ಏನು ಹೇಳಿರಬಹುದು? ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ.
Mon, 02 Dec 202406:48 AM IST
- ಪುಷ್ಪ 2 ಸಿನಿಮಾ ಬಿಡುಗಡೆಗೂ ಮುನ್ನವೇ ಪೀಲಿಂಗ್ಸ್ ಹಾಡು ಭಾರಿ ಸದ್ದು ಮಾಡುತ್ತಿದೆ. ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಹಾಡು ಟ್ರೆಂಡ್ ಆಗಿದೆ. ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯಕ್ಕೆ ಕೇಳುಗರು ಫಿದಾ ಆಗಿದ್ದು, ಪೀಲಿಂಗ್ಸ್ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ.
Mon, 02 Dec 202406:06 AM IST
Vikrant Massey: 'ಟ್ವೆಲ್ವ್ ಫೇಲ್' ಚಿತ್ರದ ಮೂಲಕ ದೇಶಾದ್ಯಂತ ಯುವಕರಲ್ಲಿ ಸಾಕಷ್ಟು ಕ್ರೇಜ್ ಗಳಿಸಿದ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ, ತಮ್ಮ 37ನೇ ವಯಸ್ಸಿನಲ್ಲಿಯೇ ನಟನೆಗೆ ವಿದಾಯ ಹೇಳಿದ್ದಾರೆ. ಈ ಘೋಷಣೆಗೆ ಕಾರಣವನ್ನೂ ತಿಳಿಸಿದ್ದಾರೆ.
Mon, 02 Dec 202404:57 AM IST
- Bigg Boss Kannada 11 Elimination: ಈ ವಾರ ಮನೆಯಿಂದ ಹೊರಹೋಗಲು ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ಭವ್ಯಾ ಗೌಡ, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ ಇವರ ಪೈಕಿ ಒಬ್ಬರು ಮನೆಯಿಂದ ಹೊರಹೋಗಬೇಕಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಶೋಭಾ ಶೆಟ್ಟಿ ನಿರ್ಗಮಿಸಿದ್ದಾರೆ.
Mon, 02 Dec 202404:11 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 1ರ ಎಪಿಸೋಡ್‌ನಲ್ಲಿ ನಾನು ಶ್ರೇಷ್ಠಾಳನ್ನು ಪ್ರೀತಿಸುತ್ತಿದ್ದೇನೆ ಎಂದು ತಾಂಡವ್ ಎಲ್ಲರ ಮುಂದೆ ಧೈರ್ಯವಾಗಿ ಹೇಳುತ್ತಾನೆ. ತಾಳಿಯನ್ನು ಕೈಯಲ್ಲಿ ಹಿಡಿದು ಇದು ನನ್ನ ಪಾಲಿಗೆ ಏನೂ ಅಲ್ಲ ಎಂದು ಬಿಸಾಡುತ್ತಾನೆ. ಭಾಗ್ಯಾ ಕೋಪದಿಂದ ತಾಂಡವ್ ಕೆನ್ನೆಗೆ ಬಾರಿಸುತ್ತಾಳೆ.
Mon, 02 Dec 202404:02 AM IST
- ಕ್ರಿಸ್ಮಸ್ ಸಂದರ್ಭದಲ್ಲಿ ರಜೆಗಳಿರುತ್ತವೆ. ಜನರ ಮೂಡ್ ಸಹ ಚೆನ್ನಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಚಿತ್ರಕ್ಕೂ ಅನುಕೂಲ ಎಂಬುದು ನಿರ್ಮಾಪಕರ ನಂಬಿಕೆ. ಅದೇ ಕಾರಣಕ್ಕೆ ಈ ಸಮಯದಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಕಿಚ್ ಸುದೀಪ್ ಹೇಳಿದ್ದಾರೆ. (ವರದಿ -ಚೇತನ್ ನಾಡಿಗೇರ್)
Mon, 02 Dec 202403:47 AM IST
- Kichcha Sudeep: ಕಿಚ್ಚ ಸುದೀಪ್ ಪಾಲಿಗೆ ಮ್ಯಾಕ್ಸ್ ಸಿನಿಮಾ ಬಹು ಮುಖ್ಯವಾದುದ್ದು. ಈ ವರೆಗೂ ಮಾಡದ ಒಂದಷ್ಟು ಹೊಸ ಪ್ರಯೋಗಗಳು ಈ ಸಿನಿಮಾದಲ್ಲಾಗಿವೆ. ಇನ್ನೇನು ಇದೇ ಡಿಸೆಂಬರ್ 25ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಸೇರಿ ಈ ಹಿಂದಿನ ಚಿತ್ರಗಳ ಬಗ್ಗೆ ಕಿಚ್ಚ ಹೇಳಿದ 10 ಸಂಗತಿಗಳು ಇಲ್ಲಿವೆ.
Mon, 02 Dec 202403:21 AM IST
- ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಡಾನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಡಿಎಸ್‌ಪಿ ಸಂಗೀತ ಸಂಯೋಜನೆ ಮತ್ತೊಮ್ಮೆ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಪುಷ್ಪ 2 ಚಿತ್ರ ಪೀಲಿಂಗ್ಸ್ ಹಾಡು ಯುವಕರ ಫೀಲಿಂಗ್ಸ್ ಹೆಚ್ಚಿಸಿದೆ. ಜೊತೆಗೆ ಹಾಡಿನಲ್ಲಿರುವುದು ಅಲ್ಲು ಅರ್ಜುನ್ ಅಲ್ಲ ಮಲ್ಲು ಅರ್ಜುನ್ ಎಂದಿದ್ದಾರೆ..
Mon, 02 Dec 202402:11 AM IST
- Filmfare OTT Awards 2024: ಈ ವರ್ಷದ ಫಿಲ್ಮ್‌ಫೇರ್ ಒಟಿಟಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗಿದ್ದು, 39 ವಿಭಾಗಗಳಲ್ಲಿ ಅವಾರ್ಡ್ ಗೆದ್ದ ವಿವಿಧ ವೆಬ್ ಸೀರೀಸ್‌ಗಳು ಮತ್ತು ವೆಬ್ ಚಲನಚಿತ್ರಗಳು ಯಾವುವು ಎಂಬ ವಿವರ ಇಲ್ಲಿದೆ.
Mon, 02 Dec 202401:48 AM IST
Allu Arjun: ಪುಷ್ಪ 2 ದ ರೂಲ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 5 ರಂದು ಸಿನಿಮಾ ತೆರೆ ಕಾಣಲಿದೆ. ಈಗ ಪುಷ್ಪ2 ದ ರೂಲ್ ಸಿನಿಮಾ ರಿಲೀಸ್‌ಗೂ ಮೊದಲೇ ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿರುವುದು ಗಮನಸೆಳೆದಿದೆ. ಮುಂಬಯಿಯಲ್ಲಿ ಸಿನಿಮಾ ಪ್ರಚಾರದ ವೇಳೆ ಬಳಸಿದ ಒಂದು ಪದ ಅದಕ್ಕೆ ಕಾರಣ. ಕೇಸ್‌ನ ವಿವರ ಇಲ್ಲಿದೆ.