ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವೈರಿಗಳಿಂದ ಏನು ಸಮಸ್ಯೆ; ಶತ್ರುಬಾಧೆಯಿಂದ ಪಾರಾಗಲು ಪರಿಹಾರವೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವೈರಿಗಳಿಂದ ಏನು ಸಮಸ್ಯೆ; ಶತ್ರುಬಾಧೆಯಿಂದ ಪಾರಾಗಲು ಪರಿಹಾರವೇನು?

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವೈರಿಗಳಿಂದ ಏನು ಸಮಸ್ಯೆ; ಶತ್ರುಬಾಧೆಯಿಂದ ಪಾರಾಗಲು ಪರಿಹಾರವೇನು?

ಜೀವನದಲ್ಲಿ ಪ್ರತಿಯೊಬ್ಬರನ್ನೂ ಮೆಚ್ಚಿಸುವುದು ಅಸಾಧ್ಯದ ಮಾತು. 10 ಜನರಲ್ಲಿ ಒಂಭತ್ತು ಮಂದಿ ನಮ್ಮನ್ನು ಮೆಚ್ಚಿದರೆ, ಒಬ್ಬರಾದರೂ ನಮ್ಮನ್ನು, ನಮ್ಮ ಕೆಲಸ, ಮಾತುಗಳನ್ನು ವಿರೋಧಿಸುತ್ತಾರೆ. ಕೆಲವೊಮ್ಮೆ ಇವರು ನಮಗೆ ತೊಂದರೆ ನೀಡುವುದೂ ಉಂಟು. ರಾಶಿಚಕ್ರದ ಪ್ರಕಾರ ಯಾವ ರಾಶಿಯರಿಗೆ ಶತ್ರುಗಳು ಹೆಚ್ಚು ಅದಕ್ಕೆ ಪರಿಹಾರವೇನು ನೋಡೋಣ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವೈರಿಗಳಿಂದ ಏನು ಸಮಸ್ಯೆ; ಶತ್ರುಬಾಧೆಯಿಂದ ಪಾರಾಗಲು ಪರಿಹಾರವೇನು?
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವೈರಿಗಳಿಂದ ಏನು ಸಮಸ್ಯೆ; ಶತ್ರುಬಾಧೆಯಿಂದ ಪಾರಾಗಲು ಪರಿಹಾರವೇನು? (PC: unsplash,‍ Freepik)

ಸಿಂಹ , ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಶತ್ರುಗಳಿಂದ ಏನಾದರೂ ಸಮಸ್ಯೆ ಆಗುವುದಾ? ಹೌದು ಎಂದಾದಲ್ಲಿ ವೈರಿಗಳಿಂದ ಆಗುವ ತೊಂದರೆಗಳಿಂದ ಪಾರಾಗಲು ಏನು ಪರಿಹಾರ ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ.

ಸಿಂಹ ರಾಶಿ

ಸಿಂಹ ರಾಶಿ ಅಥವ ಸಿಂಹ ಲಗ್ನದಲ್ಲಿ ಜನಿಸಿದವರು ಮುಂಗೋಪಿಗಳಾಗಿರುತ್ತಾರೆ. ಆದರೆ ಇವರ ಮನಸ್ಸು ಬಹಳ ಒಳ್ಳೆಯದು. ವಯಸ್ಸಿನ ಪರಿಮಿತಿಯಿಲ್ಲದೆ ಎಲ್ಲರನ್ನೂ ಗೌರವಿಸುವ ಇವರು ಬೇರೆಯವರಿಂದಲೂ ಗೌರವ ನಿರೀಕ್ಷಿಸುತ್ತಾರೆ. ಈ ಕಾರಣದಿಂದಾಗಿ ಇವರಿಗೆ ವಿರೋಧಿಗಳು ಹೆಚ್ಚುತ್ತಾರೆ. ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದ ಅಧಿಕಾರಿಗಳು ತಮ್ಮ ಕಾರ್ಮಿಕ ವೃಂದದ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದಿಲ್ಲ. ಈ ರಾಶಿಯವರು ಜೀವನದಲ್ಲಿ ಇವರ ಸರಿ ಸಮಾನವಾದ ಜನರಿಂದ ವಿರೋಧ ಗಳಿಸುತ್ತಾರೆ. ಪ್ರತಿದಿನ ಶ್ರೀ ಸೂರ್ಯನ ಪೂಜೆಯನ್ನು ಮಾಡುವುದರಿಂದ ವಿರೋಧಿಗಳ ಪ್ರಾಬಲ್ಯ ಕಡಿಮೆಯಾಗುತ್ತದೆ. ಆದರೆ ಬಹು ಮುಖ್ಯ ಸಭೆ ಸಮಾರಂಭಗಳು ಇರುವ ವೇಳೆ ಸಾಧ್ಯವಾದಷ್ಟು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಾರದು. ಇವರು ತಮ್ಮ ಮನದಲ್ಲಿ ಇರುವ ಕೋಪವನ್ನು ಮಾತಿನ ರೂಪದಲ್ಲಿ ಹೊರ ಹಾಕಿದಲ್ಲಿ ಮಾತ್ರ ಮನಸ್ಸಿಗೆ ಶಾಂತಿ ಇರುತ್ತದೆ. ಒಂದು ಅದೃಷ್ಟದ ವಿಚಾರವೆಂದರೆ ಇವರ ವಿರೋಧಿಗಳು ಅತಿ ನಿಧಾನದ ನಡೆ ನುಡಿ ಉಳ್ಳವರಾಗಿರುತ್ತಾರೆ.

ಪರಿಹಾರ: ಹಿರಿಯ ಅಣ್ಣ ಅಥವಾ ಹಿರಿಯ ಅಕ್ಕನ ಆಶೀರ್ವಾದದಿಂದ ಇವರಿಗೆ ಶಾಂತಿಯುತ ಜೀವನ ಲಭಿಸುತ್ತದೆ. ಧಾರ್ಮಿಕ ಕೇಂದ್ರಕ್ಕೆ ನೀಲಿ ಬಣ್ಣದ ಬಟ್ಟೆಯನ್ನು ದಾನ ನೀಡಬೇಕು. ಹಾಗೆಯೇ ಶ್ರೀ ಆಂಜನೇಯನ ಪೂಜೆ ಮಾಡಬೇಕು.

ಕನ್ಯಾ ರಾಶಿ

ಕನ್ಯಾ ಲಗ್ನ ಅಥವಾ ಕನ್ಯಾ ರಾಶಿಯಲ್ಲಿ ಜನಿಸಿದ ಜನರಿಗೆ ಬೇರೆಯವರನ್ನು ಟೀಕಿಸುವ ಗುಣವಿರುತ್ತದೆ. ಇವರಿಗೆ ಉತ್ತಮ ವಿದ್ಯೆ ಇರುತ್ತದೆ. ಈ ಕಾರಣದಿಂದಾಗಿ ಇವರು ಮತ್ತೊಬ್ಬರ ನಿರ್ಧಾರವನ್ನು ಒಪ್ಪುವುದಿಲ್ಲ. ಆದ್ದರಿಂದ ಇವರಿಗೆ ವಿರೋಧಿಗಳು ಹೆಚ್ಚಾಗಿಯೇ ಇರುತ್ತಾರೆ. ಆದರೂ ಯಾವುದೇ ತೊಂದರೆ ಇರುವುದಿಲ್ಲ. ಸಾಧ್ಯವಾದಷ್ಟು ಬೇರೆಯವರನ್ನು ಟೀಕಿಸುವುದನ್ನು ಕಡಿಮೆ ಮಾಡಬೇಕು. ನೀವು ಪ್ರೀತಿ ವಿಶ್ವಾಸದಿಂದ ಯಾರ ಮನಸ್ಸನ್ನು ಬೇಕಾದರೂ ಗೆಲ್ಲಬಹುದು.

ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಸಿರು ಬಟ್ಟೆಯನ್ನು ದಾನ ನೀಡುವುದರಿಂದ ವಿರೋಧಿಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಹಾಗೆಯೇ ಗುರುಗಳ ಪೂಜೆ ಮಾಡುವುದು ಒಳ್ಳೆಯದು. ರುದ್ರಾಕ್ಷಿ ಧರಿಸಿದಲ್ಲಿ ಪರಸ್ಪರ ವಾದ ವಿವಾದ ಅಧಿಕವಾಗುತ್ತವೆ ಆದ್ದರಿಂದ ರುದ್ರಾಕ್ಷಿಯನ್ನು ದಾನ ನೀಡುವುದು ಒಳ್ಳೆಯದು. ಒಟ್ಟಾರೆ, ಆಡುವ ಮಾತಿನಲ್ಲಿ ಹತೋಟಿಯಲ್ಲಿ ಇದ್ದಲ್ಲಿ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ.

ತುಲಾ ರಾಶಿ

ತುಲಾ ಲಗ್ನ ಅಥವಾ ತುಲಾ ರಾಶಿಯಲ್ಲಿ ಜನಿಸಿದವರಿಗೆ ಸಮಯ ಸಂದರ್ಭಕ್ಕೆ ಹೊಂದಿಕೊಂಡು ಹೋಗುವ ಗುಣವಿರುತ್ತದೆ. ಇವರ ಶಾಂತಿ ಸಂಯಮದ ವರ್ತನೆ ಎಲ್ಲರಲ್ಲಿಯೂ ಸಂತೋಷ ಉಂಟು ಮಾಡುತ್ತದೆ. ಯಾವುದೇ ಕೆಲಸವನ್ನಾಗಲಿ ಸಮಯದ ಇತಿ ಮಿತಿ ಇಲ್ಲದೆ ಪೂರ್ಣಗೊಳಿಸುವುದೊಂದೇ ಇವರ ಗುರಿಯಾಗುತ್ತದೆ. ಯಾವುದೇ ವ್ಯಕ್ತಿಯಾಗಲಿ ತಮ್ಮ ಕೆಲಸ ಕಾರ್ಯಗಳನ್ನು ತೃಪ್ತಿಕರವಾಗಿ ನಿರ್ವಹಿಸದೆ ಹೋದರೆ ಮಾತ್ರ ಇವರ ಸಹನೆ ಮರೆಯಾಗಿ ಕೋಪ ಹೆಚ್ಚುತ್ತದೆ. ಸಾಮಾನ್ಯವಾಗಿ ಇವರಿಗೆ ತಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಒಡನಾಟ ಇರುವುದಿಲ್ಲ. ಇವರು ಶಾಂತ ಸ್ವಭಾವದವರಿರಬಹುದು. ಆದರೆ ಇವರ ವಿರೋಧಿಗಳಿಗೆ ಮುಂಗೋಪ ಹೆಚ್ಚಾಗಿರುತ್ತದೆ. ಆದ್ದರಿಂದ ಜಗಳದ ಸಮಯದಲ್ಲಿ ಇವರು ಮೌನವಾಗಿರುವುದು ಉತ್ತಮ. ವಿರೋಧಿಗಳು ಇವರು ಮಾಡುವ ತಪ್ಪನ್ನು ಎಂದಿಗೂ ಒಪ್ಪುವುದಿಲ್ಲ. ದಂಪತಿ ನಡುವೆ ಮನಸ್ತಾಪ ಇರುತ್ತದೆ.

ಪರಿಹಾರ: ಈ ರಾಶಿಯವರು ಕೆಂಪು ಬಟ್ಟೆಯನ್ನು ಧರಿಸುವುದರಿಂದ ದೂರ ಇರಬೇಕು. ಕಾದು ನೋಡುವ ತಂತ್ರವನ್ನು ಉಪಯೋಗಿಸಬೇಕು. ಇತ್ತೀಚೆಗಷಷ್ಟೆ ಮದುವೆ ಆದ ದಂಪತಿಗೆ ಆಹಾರದ ವ್ಯವಸ್ಥೆ ಮಾಡುವುದರಿಂದ ಇವರ ವಿರೋಧಿಗಳ ಶಕ್ತಿ ಕಡಿಮೆಯಾಗುತ್ತದೆ. ಪ್ರತಿ ಶನಿವಾರ ಶ್ರೀರಾಮ ದೇವರ ಪೂಜೆ ಮಾಡಬೇಕು. ಇದರಿಂದ ವಿರೋಧಿಗಳ ಮನಸ್ಸನ್ನು ಗೆಲ್ಲಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ಲಗ್ನ ಅಥವಾ ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಅಪಾರ ಕೋಪವಿರುತ್ತದೆ. ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ಬಾಳ ಸಂಗಾತಿ ಮೇಲೆ ಕೋಪ ತೋರಿಸುತ್ತಾರೆ. ಬಾಳ ಸಂಗಾತಿ ಜೊತೆ ಉತ್ತಮ ಸಂಬಂಧವಿರುತ್ತದೆ. ಇವರಿಗೆ ವಿರೋಧಿಗಳಿದ್ದರೂ ಅವರಿಂದ ತೊಂದರೆ ಕಡಿಮೆ. ಬೇರೆಯವರ ಸಹಾಯ ಸಹಕಾರವಿಲ್ಲದೆ ಇವರ ಯಾವುದೇ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಸಮಯಕ್ಕೆ ಸರಿಯಾಗಿ ವರ್ತಿಸುವ ಬುದ್ಧಿ ಇವರಿಗೆ ಇರುವುದಿಲ್ಲ.

ಪರಿಹಾರ: ಮದುವೆ ಆಗದ ಹೆಣ್ಣು ಮಕ್ಕಳಿಗೆ ಅವರಿಗೆ ಇಷ್ಟವಾಗುವ ವಸ್ತ್ರಗಳನ್ನು ನೀಡಬೇಕು. ರವೆಯಿಂದ ಮಾಡಿದ ಸಿಹಿ ತಿಂಡಿ ತಿನಿಸನ್ನು ಅವರಿಗೆ ನೀಡುವುದರಿಂದ ವಿರೋಧಿಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ರತಿ ಗುರುವಾರ ಗುರು ಪೂಜೆ ಮಾಡುವುದರಿಂದ ಈ ರಾಶಿಯವರಿಗೆ ಒಳಿತಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.