Sun Transit: ಕನ್ಯಾ ರಾಶಿಗೆ ಸೂರ್ಯ ಸಂಚಾರ; ವ್ಯಾಪಾರದಲ್ಲಿ ಲಾಭ ಸೇರಿ 12 ರಾಶಿಯವರಿಗೆ ಇಷ್ಟೊಂದು ಲಾಭಗಳಿವೆ
ಸೆಪ್ಟೆಂಬರ್ 16 ರಂದು ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಹಾರ ಬೀರುತ್ತದೆ. ಸೂರ್ಯನ ಸಂಚಾರದಿಂದ ದ್ವಾದಶ ರಾಶಿಗಳ ಶುಭ, ಅಶುಭ ಫಲಿತಾಂಶಗಳನ್ನು ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)
Sun Transit 2024: ಸಿಂಹ ರಾಶಿಯಲ್ಲಿದ್ದ ಸೂರ್ಯ ತನ್ನ ರಾಶಿಚಕ್ರ ಚಿಹ್ನಯನ್ನು ಬದಲಾಯಿಸುತ್ತಿದ್ದಾರೆ. 2024 ರ ಸೆಪ್ಟಂಬರ್ 16ರಂದು ರವಿಯು ಸಿಂಹರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಅಕ್ಟೋಬರ್ ತಿಂಗಳ 17 ರವರೆಗೆ ಇದೇ ರಾಶಿಯಲ್ಲಿ ಸೂರ್ಯ ಸಂಚರಿಸುತ್ತಾನೆ. ಇದರಿಂದ ಎಲ್ಲಾ ರಾಶಿಯವರಿಗೆ ಪ್ರಯೋಜನಗಳನ್ನು ತರಲಿದೆ. ಯಾವ ರಾಶಿಯವರಿಗೆ ಹೆಚ್ಚಿನ ಲಾಭಗಳಿವೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ನಿಮ್ಮ ಪ್ರಗತಿಗೆ ಅಡ್ಡಗಾಲಾಗುವ ಜನರು ಇದ್ದರೂ ನಿಮಗೆ ಯಾವುದೇ ತೊಂದರೆ ಆಗದು. ಕುಟುಂಬದವರ ಸುರಕ್ಷತೆಗಾಗಿ ಶ್ರಮಪಡುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಹಿರಿಯರ ಬೆಂಬಲ ದೊರೆಯುತ್ತದೆ. ಬೇರೆಯವರ ಹಣಕಾಸಿನ ವಿವಾದದಿಂದ ದೂರವಿರುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಸುಲಭ ಜಯ ಲಭಿಸುತ್ತದೆ. ನಿಮ್ಮ ವಿವಾಹ ನಿಶ್ಚಯವಾಗಲಿದೆ. ಬಂದುವರ್ಗದಲ್ಲಿನ ವಿವಾದಕ್ಕೆ ಪರಿಹಾರ ಸೂಚಿಸುವಿರಿ. ಬಿಡುವಿಲ್ಲದೆ ಯವುದಾದರೊಂದು ಕೆಲಸದಲ್ಲಿ ಮುಳುಗುವಿರಿ.
ವೃಷಭ ರಾಶಿ
ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವಿರಿ. ಮನಸ್ಸನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗದು. ಬೇಡದ ವಿಚಾರಗಳಿಗೆ ಯೋಚನೆ ಮಾಡುವಿರಿ. ವಾಸಸ್ಥಳವನ್ನು ಬದಲು ಮಾಡುವಿರಿ. ಎದುರಾಗುವ ಸಮಸ್ಯೆಗಳು ಸಣ್ಣದಾದರು ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಕ್ರಮೇಣವಾದ ಅಬಿವೃದ್ಧಿ ಕಾಣುವಿರಿ. ಆಂತರಿಕ ಸಮಸ್ಯೆಗಳನ್ನು ದೊಡ್ಡದು ಮಾಡುವಿರಿ. ವಿರೋಧಿಗಳ ಸ್ನೇಹ ಬೆಳೆಸಿ ಎಲ್ಲರ ಮನ ಗೆಲ್ಲುವಿರಿ. ಆಮದು ರಫ್ತಿನಿಂದ ಉತ್ತಮ ಲಾಭ ದೊರೆಯುತ್ತದೆ.
ಮಿಥುನ ರಾಶಿ
ಕುಟುಂಬದ ಒಟ್ಟಾರೆ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ಕೌಟುಂಬಕ ವಿಚಾರದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಹಿಳೆಯರ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಸೋದರರ ಜೊತೆಗೂಡಿ ಮಾಡುವ ಪಾಲುಗಾರಿಕೆಯ ವ್ಯಾಪಾರದಲ್ಲಿ ಸಾಧಾರಣ ಲಾಭವಿದೆ. ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳು ಕಾರ್ಯ ಸಾಧಿಸುತ್ತಾರೆ. ಉದ್ಯೋಗದಲ್ಲಿ ಶುಭವಿದೆ. ಆತುರದ ಕಾರಣ ಕೆಲಸ ಕಾರ್ಯಗಳು ಅಪೂರ್ಣವಾಗುತ್ತವೆ. ಆತ್ಮಿಯರಿಂದ ಶುಭ ವರ್ತಮಾನವೊಂದು ಬರಲಿದೆ.
ಕಟಕ ರಾಶಿ
ಉದ್ಯೋಗವನ್ನು ಬದಲಾಯಿಸುವಿರಿ. ಆತುರದಿಂದ ತೊಂದರೆ ಎದುರಿಸಬೇಕಾಗುತ್ತದೆ. ಹೂಡಿಕೆ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗಬಹುದು. ಹೊಸ ಆಸೆ ಆಕಾಂಕ್ಷೆಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ. ಉದ್ಯೋಗದಲ್ಲಿ ಒತ್ತಡ ಇರುತ್ತದೆ. ಮಹಿಳಾ ಉದ್ಯಮಿಗಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯಲಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊಸ ಮನೆ ಕೊಳ್ಳುವ ಯೋಚನೆಗೆ ಕುಟುಂಬದವ ಸಹಾಯ ದೊರೆಯುತ್ತದೆ.
ಸಿಂಹ ರಾಶಿ
ಸಹನೆಯಿಂದ ಎಲ್ಲರ ಮನ ಗೆಲ್ಲಲು ಪ್ರಯತ್ನಿಸುತ್ತೀರಿ. ಅತಿಯಾದ ಆತ್ಮವಿಶ್ವಾಸ ಹೊಸ ಅವಕಾಶಗಳನು ನೀಡಲಿವೆ. ಹಠದ ಬುದ್ಧಿ ಒಳ್ಳೆಯವರನ್ನು ದೂರ ಮಾಡುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲು ನಿಮ್ಮ ಪ್ರಯತ್ನ ಮುಖ್ಯ. ವಿದ್ಯಾರ್ಥಿಗಳಿಗೆ ಗುರುಹಿರಿಯರ ಸಹಾಯ ದೊರೆಯುತ್ತದೆ. ವಂಶದ ಅಧಿಕಾರ ನಿಮ್ಮದಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ವರಮಾನ ದೊರೆಯಲಿವೆ. ಆಧುನಿಕ ತಂತ್ರಜ್ಞಾನ ಕಲಿಯುವ ಅವಕಾಶ ನಿಮ್ಮದಾಗಲಿದೆ. ಕಂತಿನ ವ್ಯಾಪಾರದಲ್ಲಿ ಲಾಭವಿದೆ. ಹೊಸ ವ್ಯಾಪಾರವನ್ನು ಆರಂಭಿಸುವ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಕನ್ಯಾ ರಾಶಿ
ಸಂಗಾತಿಯ ಬೆಂಬಲ ಸದಾ ನಿಮಗೆ ದೊರೆಯುತ್ತದೆ. ವಾಹನದಿಂದ ತೊಂದರೆ ಇರುತ್ತದೆ ಎಚ್ಚರದಿಂದಿರಿ. ಪ್ರತಿ ವಿಷಯವನ್ನು ವಿಮರ್ಶಿ ನೋಡುವ ಬುದ್ಧಿ ಇರುತ್ತದೆ. ಸೋಲಿನ ಭಯವಿಲ್ಲದೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ತೆರೆಮರೆಯ ಕಲಾವಿದರಿಗೆ ಉನ್ನತ ಗೌರವ ದೊರೆಯುತ್ತದೆ. ಗೃಹಿಣಿಯರು ವಿಶೇಷ ಸಾಧನೆಯನ್ನು ಮಾಡುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಮಟ್ಟದ ಲಾಭವಿರುತ್ತದೆ. ತಪ್ಪನ್ನು ಖಂಡಿಸುವ ಗುಣದಿಂದ ಕುಟುಂಬದವರ ವಿರೋಧಕ್ಕೆ ಗುರಿಯಾಗುವಿರಿ.
ತುಲಾ ರಾಶಿ
ಆತುರದ ನಿರ್ಧಾರಗಳು ಹೊಸ ಸಮಸ್ಯೆಯನ್ನು ಸೃಷ್ಠಿಸುತ್ತದೆ. ಹಣ ಉಳಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ. ಮಕ್ಕಳ ಅಭಿವೃದ್ಧಿಯ ಸಲುವಾಗಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುವಿರಿ. ಪ್ರಯೋಜನವಿಲ್ಲದ ವಿಚಾರಗಳಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ದೂರದ ಬಳಗದವರ ಜೊತೆಯಲ್ಲಿ ಹಣದ ವಿಚಾರದಲ್ಲಿ ವಿರಸ ಉಂಟಾಗುತ್ತದೆ. ಸಮಾಜದಲ್ಲಿನ ನಾಯಕತ್ವ ನಿಮಗೆ ದೊರೆಯುತ್ತದೆ. ಮಕ್ಕಳ ಮಾತಿಗೆ ಮನ್ನಣೆ ನೀಡುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಯಿಂದಾಗಿ ಬಡ್ತಿ ದೊರೆಯುತ್ತದೆ.
ವೃಶ್ಚಿಕ ರಾಶಿ
ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರಲಿದೆ. ಹಣಕಾಸಿನ ಕೊರತೆ ಕಡಿಮೆ ಆಗುತ್ತದೆ. ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯೊಬ್ಬರು ಸಹಾಯ ಮಾಡತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ನಿರುದ್ಯೋಗಿಗಳಿಗೆ ನೌಕರಿ ದೊರೆಯುತ್ತದೆ. ಕುಟುಂಬದ ಹಿರಿಯರು ವಿಶೇಷ ಗೌರವಕ್ಕೆ ಪಾತ್ರರಾಗುವರು. ಧಾರ್ಮಿಕ ಕೆಲಸ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ನವ ವಿವಾಹಿತರಿಗೆ ಸಂತಾನಲಾಭವಿದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ.
ಧನು ರಾಶಿ
ಮಹಿಳಿಯರಿಗೆ ಅಧಿಕಾರಯೋಗವಿದೆ. ಆಭರಣಕ್ಕೆ ಹೆಚ್ಚಿನ ಹಣ ಖರ್ಚುಮಾಡುವಿರಿ. ದಿನ ನಿತ್ಯ ಬಳಸುವ ಲೋಹದ ವಸ್ತುಗಳಿಂದ ತೊಂದರೆ ಇರುತ್ತದೆ. ಸಾಕು ಪ್ರಾಣಿಗಳಿಂದ ದೂರವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೇರಳ ಲಾಭ ದೊರೆಯುತ್ತದೆ. ಉತ್ತಮ ಆದಾಯ ಇದ್ದರೂ ಶಾಂತಿ ನೆಮ್ಮದಿಯ ಕೊರತೆ ಕಾಡಲಿದೆ. ನಿಮ್ಮ ಮಕ್ಕಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯುತ್ತವೆ.
ಮಕರ ರಾಶಿ
ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡುವಿರಿ. ಆಶಾವಾದಿಗಳಿಗೆ ಸಮಾಜದಲ್ಲಿ ಸೇವೆಸಲ್ಲಿಸುವ ಉತ್ತಮ ಅವಕಾಶ ದೊರೆಯುತ್ತದೆ. ಬೇರೊಬ್ಬರ ಹಂಗಿಲ್ಲದೆ ಜೀವನದಲ್ಲಿ ಮುಂದುವರಿಯುವಿರಿ. ಹೊಗಳಿಕೆಗೆ ಸುಲಭವಾಗಿ ಮರುಳಾಗಿ ತೊಂದರೆಗೆ ಒಳಗಾಗುವಿರಿ. ನಿಮ್ಮನ್ನು ಹೊಗಳಿ ನಿಮ್ಮಿಂದ ಸಹಾಯ ಪಡೆವ ಜನರಿದ್ದಾರೆ ಎಚ್ಚರಿಕೆ ಇರಲಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಬಿಡುವಿಲ್ಲದ ದುಡಿಮೆ ಬೇಸರ ಮೂಡಿಸುತ್ತದೆ.
ಕುಂಭ ರಾಶಿ
ಮನದಲ್ಲಿನ ಆತಂಕವು ದೂರವಾಗುತ್ತದೆ. ಹೆಚ್ಚಿನ ಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಭೂವ್ಯವಹಾರದ ವಿವಾದವು ದೂರವಾಗಲಿದೆ. ಉದ್ಯೋಗದಲ್ಲಿ ಗಲಿಬಿಲಿಯ ವಾತಾವರಣ ಉಂಟಾಗಬಹುದು. ಸ್ವಂತ ಉದ್ದಿಮೆ ಇರುವವರಿಗೆಗೆ ವಿಶೇಷವಾದ ಲಾಭವಿರುತ್ತದೆ. ತಾಳ್ಮೆಯಿಂದ ವ್ಯವಹರಿಸಿದಲ್ಲಿ ಹಣಕಾಸಿನ ವಿಚಾರದಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಯಾವುದೂ ಅಸಾಧ್ಯವಲ್ಲ. ಅಪನಂಬಿಕೆಯ ಕಾರಣ ಬಂಧು ಬಳದವರಿಂದ ದೂರ ಉಳಿಯುವಿರಿ. ಗೃಹಿಣಿಯರಿಗೆ ವಿಶ್ರಾಂತಿಯ ಅಗತ್ಯವಿದೆ.
ಮೀನ ರಾಶಿ
ಸತತ ಪ್ರಯತ್ನದಿಂದ ಹಣಕಾಸಿನ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಆಶಾದಾಯಕ ಬದಲಾವಣೆಗಳು ಎದುರಾಗಲಿವೆ. ಮಹಿಳಾ ಉದ್ಯಮಿಗಳು ವಿಶೇಷ ಸೌಕರ್ಯವನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಉನ್ನತ ಅಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವರು. ದೊರೆಯುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಹೊಸ ವ್ಯಾಪಾರ ವ್ಯವಹಾರಗಳ ಆರಂಭದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಸಂಪ್ರದಾಯಕ ವಿಧಿ ವಿಧಾನಗಳಿಗೆ ಹೆಚ್ಚಿನ ಹೆಚ್ಚಿನ ಹಣದ ಅವಶ್ಯಕತೆ ಇದೆ. ಹಿರಿಯರ ರೀತಿ ನೀತಿಗಳನ್ನು ಅನುಸರಿಸುವಿರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.