ಅತ್ತ ಪೀತಿಸಿದ ತಾಂಡವ್‌ ಇಲ್ಲ, ಇತ್ತ ಉಳಿಯಲು ಮನೆಯೂ ಇಲ್ಲ, ಸಿಟ್ಟಿನಿಂದ ಕುದಿಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅತ್ತ ಪೀತಿಸಿದ ತಾಂಡವ್‌ ಇಲ್ಲ, ಇತ್ತ ಉಳಿಯಲು ಮನೆಯೂ ಇಲ್ಲ, ಸಿಟ್ಟಿನಿಂದ ಕುದಿಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಅತ್ತ ಪೀತಿಸಿದ ತಾಂಡವ್‌ ಇಲ್ಲ, ಇತ್ತ ಉಳಿಯಲು ಮನೆಯೂ ಇಲ್ಲ, ಸಿಟ್ಟಿನಿಂದ ಕುದಿಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 21ರ ಎಪಿಸೋಡ್‌ನಲ್ಲಿ ಮದುವೆ ನಿಂತ ನಂತರ ಶ್ರೇಷ್ಠಾ ಮತ್ತೆ ಮನೆಗೆ ವಾಪಸ್‌ ಆಗುತ್ತಾಳೆ. ಆದರೆ ಅಲ್ಲಿ ಓನರ್‌, ತನ್ನ ಸಾಮಗ್ರಿಗಳನ್ನು ಹೊರಗೆ ಎಸೆದಿರುತ್ತಾರೆ. ತಮ್ಮನ್ನು ಪ್ರಶ್ನೆ ಮಾಡುವ ಶ್ರೇಷ್ಠಾಳನ್ನು ಓನರ್‌ ಹೊರ ಹಾಕುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 21ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 21ರ ಎಪಿಸೋಡ್‌ (PC: Jio Cinema)

Bhagyalakshmi Serial: ಮೂರನೇ ಬಾರಿಯೂ ಶ್ರೇಷ್ಠಾ, ತಾಂಡವ್‌ನಿಂದ ತಾಳಿ ಕಟ್ಟಿಸಿಕೊಳ್ಳಲು ವಿಫಲ ಆಗಿದ್ದಾಳೆ. ಸರಿಯಾಗಿ ತಾಳಿ ಕಟ್ಟಬೇಕು ಎಂದುಕೊಳ್ಳುವಷ್ಟರಲ್ಲಿ ಭಾಗ್ಯಾ ಪೊಲೀಸರನ್ನು ಕರೆತಂದು ಮದುವೆ ನಿಲ್ಲಿಸಿದ್ದಾಳೆ. ಕಾನೂನು ತಿಳಿದಿದ್ದರೂ ಇಬ್ಬರೂ ದಡ್ಡತನಿಂದ ಡಿವೋರ್ಸ್‌ ಆಗದೆ ಮದುವೆ ಆಗಲು ಹೊರಟಿದ್ದು ಅಪರಾಧವಾಗಿದ್ದರಿಂದ ಪೊಲೀಸರು ಇಬ್ಬರನ್ನೂ ಅರೆಸ್ಟ್‌ ಮಾಡಲು ಮುಂದಾಗುತ್ತಾರೆ.

ತಾಂಡವ್‌ಗೆ ಮತ್ತೊಮ್ಮೆ ಎಚ್ಚರಿಕೆ ಕೊಡುವ ಭಾಗ್ಯಾ

ಜೈಲಿಗೆ ಹೋದರೆ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ತಾಂಡವ್‌, ಕೇಸ್‌ ವಾಪಸ್‌ ಪಡೆಯುವಂತೆ ಭಾಗ್ಯಾ ಬಳಿ ಮನವಿ ಮಾಡುತ್ತಾನೆ. ಅಪ್ಪ ಅಪ್ಪನ ಕಾಲು ತೊಳೆದು ಮನೆಗೆ ಬರಮಾಡಿಕೊಳ್ಳಬೇಕು, ನಾವೆಲ್ಲರೂ ಒಟ್ಟಿಗೆ ಇದೇ ಮನೆಯಲ್ಲಿರಬೇಕು. ಶ್ರೇಷ್ಠಾಳನ್ನು ಕೈ ಹಿಡಿದು ಮನೆಯಿಂದ ಹೊರಗೆ ತಳ್ಳಬೇಕು ಎಂದು ಭಾಗ್ಯಾ, ತಾಂಡವ್‌ ಬಳಿ ಕಂಡಿಷನ್‌ ಮಾಡುತ್ತಾಳೆ. ತಾಂಡವ್‌ಗೆ ಇಷ್ಟವಿಲ್ಲದಿದ್ದರೂ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಭಾಗ್ಯಾ ಹೇಳಿದಂತೆ ಕೇಳುತ್ತಾನೆ. ಮನೆಯವರೇ ಈ ಕೇಸ್‌ ಇತ್ಯರ್ಥ ಮಾಡಿಕೊಂಡಿರುವುದರಿಂದ ನಾನು ಈ ವಿಚಾರವನ್ನು ಇಲ್ಲಿಗೆ ಬಿಡುತ್ತಿದ್ದೇನೆ. ನಾವೆಲ್ಲಾ ಹೋದ ನಂತರ ಇವನು ಬಾಲ ಬಿಚ್ಚಿದರೆ ನನಗೆ ಫೋನ್‌ ಮಾಡು ಎಂದು ಇನ್ಸ್‌ಪೆಕ್ಟರ್‌, ಎಚ್ಚರಿಕೆ ನೀಡಿ ಅಲ್ಲಿಂದ ಹೊರಡುತ್ತಾರೆ.

ಹಲ್ಲು ಕಿತ್ತ ಹಾವಿನಂತಾದ ತಾಂಡವ್‌ನನ್ನು ಸುಂದ್ರಿ, ಪೂಜಾ ತಾಂಡವ್‌ ಕಾಲೆಳೆಯುತ್ತಾರೆ. ಆದರೆ ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಾಂಡವ್‌ಗೆ ತಾನು ಮಾಡಬಾರದ ಕೆಲಸ ಮಾಡಿದರೂ ಅಹಂಕಾರ ಮಾತ್ರ ಕಡಿಮೆ ಅಗಿಲ್ಲ. ಒಂದಲ್ಲಾ ಒಂದು ದಿನ ನಿಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕುತ್ತೇನೆ ಎಂದು ಸವಾಲು ಹಾಕುತ್ತಾನೆ. ಮತ್ತೆ ಭಾಗ್ಯಾ ಬಳಿ ಬಂದು ಎಮ್ಮೆ ಎಂದು ಕರೆಯುತ್ತಾನೆ. ನನಗೆ ಭಾಗ್ಯಾ ಎಂಬ ಹೆಸರಿದೆ ಹಾಗೆ ಕರೆದರೆ ಸರಿ, ನೀವು ಅಂದಿದ್ದನ್ನೆಲ್ಲಾ ಕೇಳಿಸಿಕೊಂಡು ಇರಲು ನಾನು ಹಳೆಯ ಭಾಗ್ಯಾ ಅಲ್ಲ, ಹೊಸ ಭಾಗ್ಯಾ. ಇಷ್ಟು ದಿನಗಳು ನನ್ನನು ಕಾಲುಕಸವನ್ನಾಗಿ ನೋಡುತ್ತಿದ್ದೀರಿ, ಆದರೆ ಹೆಂಡತಿ ಸ್ಥಾನ ಏನು ಎಂಬುದನ್ನು ತೋರಿಸಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಎಚ್ಚರಿಸುತ್ತಾಳೆ.

ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕಿದ ಓನರ್‌

ಇತ್ತ ಶ್ರೇಷ್ಠಾ ಕೋಪ, ನಿರಾಶೆಯಿಂದ ಮನೆಗೆ ವಾಪಸ್‌ ಆಗುತ್ತಾಳೆ. ಆದರೆ ಅಲ್ಲಿ ತನ್ನ ಲಗ್ಗೇಜ್‌ಗಳೆಲ್ಲಾ ಹೊರಗೆ ಬಿದ್ದಿರುವುದನ್ನು ನೋಡಿ ಶಾಕ್‌ ಆಗುತ್ತಾಳೆ. ಏನು ಇದೆಲ್ಲಾ ಎಂದು ಕೇಳಿದಾಗ ನೀನೇ ತಾನೇ , ನಾನು ಮನೆ ಬಿಟ್ಟು ಹೋಗುತ್ತೇನೆ ದುಡ್ಡು ಕೊಡಿ ಅಂತ ಕೇಳಿದ್ದು, ದುಡ್ಡು ತೆಗೆದುಕೊಂಡು ಇಲ್ಲಿಂದ ಹೋಗು ಎಂದು ಓನರ್‌ ಹೇಳುತ್ತಾರೆ. ಇದ್ದಕ್ಕಿದ್ದಂತೆ ಹೋಗು ಎಂದರೆ ನಾನು ಎಲ್ಲಿಗೆ ಹೋಗಲಿ, ಮೊದಲೇ ಹೇಳಬೇಕು ತಾನೇ ಎಂದು ಶ್ರೇಷ್ಠಾ ಪ್ರಶ್ನಿಸುತ್ತಾಳೆ. ನೀನು ಮಾಡಿದ್ದು ಕೂಡಾ ಹಾಗೇ ತಾನೇ, ಇದ್ದಕ್ಕಿದ್ದಂತೆ ರಾತ್ರಿ ಬಂದು ಮನೆ ಖಾಲಿ ಮಾಡುತ್ತೇನೆ ಎಂದರೆ ನಾವು ಏನು ಮಾಡಬೇಕು, ದುಡ್ಡು ಕೇಳಿದ್ದೆಯಲ್ಲ ತೆಗೆದುಕೊಂಡು ಹೋಗುತ್ತಿರು ಎಂದು ಶ್ರೇಷ್ಠಾಗೆ ಹೇಳುತ್ತಾಳೆ.

ನಾನು ಹೋಗುವುದಿಲ್ಲ ಎಂದಾದರೆ ಏನು ಮಾಡುತ್ತೀರಿ, ನನ್ನ ವಿರುದ್ಧ ಏನು ಸಾಕ್ಷಿ ಇದೆ ಎಂದು ಶ್ರೇಷ್ಠಾ ಕೇಳುತ್ತಾಳೆ. ಪೊಲೀಸರಿಗೆ ಕಂಪ್ಲೇಂಟ್‌ ಕೊಡುವೆ ಎಂದು ಓನರ್‌ ಹೇಳುತ್ತಾರೆ. ಅಷ್ಟರಲ್ಲಿ ಓನರ್‌ ನೆರೆಯವರು, ನಾನು ಸಾಕ್ಷಿ ಇದ್ದೇನೆ ಎಂದು ಅಲ್ಲಿಗೆ ಬರುತ್ತಾರೆ. ಇಬ್ಬರೂ ಶ್ರೇಷ್ಠಾಳನ್ನು ಹೊರಗೆ ತಳ್ಳುತ್ತಾರೆ. ಇದೆಲ್ಲದಕ್ಕೂ ಭಾಗ್ಯಾ ಕಾರಣ, ಇಷ್ಟು ದಿನ ತಾಂಡವ್‌ನನ್ನು ಪಡೆಯುವುದು ನನ್ನ ಆದ್ಯತೆ ಆಗಿತ್ತು. ಆದರೆ ಇನ್ಮುಂದೆ ಭಾಗ್ಯಾಗೆ ಬುದ್ಧಿ ಕಲಿಸುವುದೇ ನನ್ನ ಗುರಿ ಎಂದು ಅರಚುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner