ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 22, 2024: ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆ; ಆಕ್ಷನ್ ಜೊತೆಗೆ ಮಾಸ್ ಮನರಂಜನೆ ಪಕ್ಕಾ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 22 Dec 202404:48 PM IST
ಮನರಂಜನೆ News in Kannada Live:ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆ; ಆಕ್ಷನ್ ಜೊತೆಗೆ ಮಾಸ್ ಮನರಂಜನೆ ಪಕ್ಕಾ
- ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಚಿತ್ರದುರ್ಗದಲ್ಲಿ ನಡೆದ ಅದ್ಧೂರಿ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಅಭಿನಯದ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಂದು ಮಾಸ್ ಆಕ್ಷನ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ.
Sun, 22 Dec 202410:51 AM IST
ಮನರಂಜನೆ News in Kannada Live:OTT Thriller: ತಮಿಳಿನ ಸೂಪರ್‌ಹಿಟ್ ಜೈಲ್ ಥ್ರಿಲ್ಲರ್ ಜಾನರ್‌ನ ಸೊರ್ಗವಾಸಲ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
- Sorgavaasal OTT Release Date: ತಮಿಳು ಥ್ರಿಲ್ಲರ್ ಚಿತ್ರ ಸೊರ್ಗವಾಸಲ್ ಒಟಿಟಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ. ಚಿತ್ರದ ಸ್ಟ್ರೀಮಿಂಗ್ ದಿನಾಂಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಚಿತ್ರ ಯಾವಾಗ ಮತ್ತು ಎಲ್ಲಿ ಸ್ಟ್ರೀಮಿಂಗ್ ಆಗಲಿದೆ? ಇಲ್ಲಿದೆ ವಿವರ.
Sun, 22 Dec 202409:04 AM IST
ಮನರಂಜನೆ News in Kannada Live:Seetha Rama Serial: ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ; ಸೀತಾ ರಾಮ ಸೀರಿಯಲ್ ಮೇಲೆ ವೀಕ್ಷಕರ ಮುನಿಸು
- Seetha Rama serial: ಸೀತಾ ರಾಮ ಸೀರಿಯಲ್ ಮೊದಲಿನಂತೆ ಬರುತ್ತಿಲ್ಲ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ದೂರುತ್ತಿದ್ದಾರೆ. ಸಿಹಿಯನ್ನು ಅಪಘಾತದಲ್ಲಿ ಬಲಿ ಕೊಟ್ಟಾಗಲೇ ವೀಕ್ಷಕರು ಬಹಿರಂಗವಾಗಿ ಮುನಿಸು ಹೊರಹಾಕಿದ್ದರು. ಈಗ ಆ ಮುನಿಸು ಮತ್ತಷ್ಟು ಹೆಚ್ಚಾಗಿದೆ. ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ ಎನ್ನುತ್ತಿದ್ದಾರೆ.
Sun, 22 Dec 202407:24 AM IST
ಮನರಂಜನೆ News in Kannada Live:ಸಿಟಿ ನಡುವೆ 38 ಎಕರೆ ಜಮೀನು, ಎಕರೆಗಟ್ಟಲೇ ಜಾಗದಲ್ಲಿ ಮನೆ! ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಹೋಮ್ ಟೂರ್
- ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ನಾಲ್ಕನೇ ರನ್ನರ್ ಅಪ್ ಆದ ವರ್ತೂರ್ ಸಂತೋಷ್, ಆ ಶೋ ಮೂಲಕ ನಾಡಿನ ಜನಕ್ಕೆ ಹೆಚ್ಚು ಪರಿಚಿತರಾದರು. ಹಳ್ಳಿಕಾರ್ ಒಡೆಯ ಎಂದೇ ಖ್ಯಾತಿ ಪಡೆದ ಸಂತೋಷ್ ಅವರ ವರ್ತೂರಿನ ಮನೆ ಹೇಗಿದೆ? ಎಷ್ಟು ಎಕರೆ ವ್ಯಾಪ್ತಿಯಲ್ಲಿ ಅವರ ಮನೆಗಳಿವೆ? ಹೀಗಿದೆ ಮಾಹಿತಿ.
Sun, 22 Dec 202406:03 AM IST
ಮನರಂಜನೆ News in Kannada Live:ಜೈಲಿಗೆ ಹೋಗಿ ಬಂದ ಅಲ್ಲು ಅರ್ಜುನ್ ಭೇಟಿ ಮಾಡಿದ ನೀವು, ಸಂತ್ರಸ್ತೆ ಮನೆಗೆ ಹೋಗಿದ್ರಾ? ತೆಲುಗು ನಟರಿಗೆ ಸಿಎಂ ರೇವಂತ್ ರೆಡ್ಡಿ ಟಾಂಗ್
Pushpa 2 Row: ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯ ಬಗ್ಗೆ ಸ್ವತಃ ಸಿಎಂ ರೇವಂತ್ ವಿಧಾನಸಭೆಯಲ್ಲಿ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.
Sun, 22 Dec 202405:12 AM IST
ಮನರಂಜನೆ News in Kannada Live:ಬಾಕ್ಸ್ ಆಫೀಸ್‌ನಲ್ಲಿ ಗೆದ್ದನಾ ಸತ್ಯ- ಕಲ್ಕಿ? ಉಪೇಂದ್ರ UI ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು?
- ಸಿನಿಮಾಗಳ ಕಲೆಕ್ಷನ್ ಮಾಹಿತಿ ಒದಗಿಸುವ sacnilk ವೆಬ್‌ತಾಣದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜತೆಗೆ ಎರಡನೇ ದಿನ ಈ ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಸಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಯಾವೆಲ್ಲ ಜಿಲ್ಲೆಗಳಲ್ಲಿ ಪ್ರೇಕ್ಷಕರ ಆಕ್ಯುಪೆನ್ಸಿ ಹೇಗಿದೆ ಎಂಬ ವಿವರವೂ ಲಭ್ಯವಾಗಿದೆ. ಹೀಗಿದೆ ಎರಡನೇ ದಿನದ ಕಲೆಕ್ಷನ್ ರಿಪೋರ್ಟ್.
Sun, 22 Dec 202404:49 AM IST
ಮನರಂಜನೆ News in Kannada Live:ಅತ್ತ ಪೀತಿಸಿದ ತಾಂಡವ್ ಇಲ್ಲ, ಇತ್ತ ಉಳಿಯಲು ಮನೆಯೂ ಇಲ್ಲ, ಸಿಟ್ಟಿನಿಂದ ಕುದಿಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 21ರ ಎಪಿಸೋಡ್‌ನಲ್ಲಿ ಮದುವೆ ನಿಂತ ನಂತರ ಶ್ರೇಷ್ಠಾ ಮತ್ತೆ ಮನೆಗೆ ವಾಪಸ್ ಆಗುತ್ತಾಳೆ. ಆದರೆ ಅಲ್ಲಿ ಓನರ್, ತನ್ನ ಸಾಮಗ್ರಿಗಳನ್ನು ಹೊರಗೆ ಎಸೆದಿರುತ್ತಾರೆ. ತಮ್ಮನ್ನು ಪ್ರಶ್ನೆ ಮಾಡುವ ಶ್ರೇಷ್ಠಾಳನ್ನು ಓನರ್ ಹೊರ ಹಾಕುತ್ತಾರೆ.
Sun, 22 Dec 202404:30 AM IST
ಮನರಂಜನೆ News in Kannada Live:ಚಿತ್ರರಂಗಕ್ಕೆ ಬರುವವರು ರಿಜೆಕ್ಷನ್ ಸ್ವೀಕರಿಸಲು ರೆಡಿ ಇರಲೇಬೇಕು; ಅಮೃತಧಾರೆ ಧಾರಾವಾಹಿ ನಟ ಕರಣ್ ಕೆ ಆರ್ ಸಂದರ್ಶನ
- ಸಂದರ್ಶನ: ಪದ್ಮಶ್ರೀ ಭಟ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಅಮೃತಧಾರೆʼ ಧಾರಾವಾಹಿ ಅನೇಕ ಕಾರಣಗಳಿಂದ ಇಂದು ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಯಲ್ಲಿ ಪಾರ್ಥ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿರುವ ನಟ ಕರಣ್ ಕೆ ಆರ್ ಅವರು ಎಂಟು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ್ದು, ಸೀರಿಯಲ್ ಲೋಕದ ಸವಾಲುಗಳನ್ನು ಹಂಚಿಕೊಂಡಿದ್ದಾರೆ