ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

Robin Uthappa: ಪಿಎಫ್​ ವಂಚನೆ ಪ್ರಕರಣ ಕ್ಕೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಸ್ಪಷ್ಟನೆ ನೀಡಿದ್ದು, ಆರೋಪ ಹೊತ್ತಿರುವ ಕಂಪನಿಗೆ ಹಲವು ವರ್ಷಗಳ ಹಿಂದೆಯೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ನವದೆಹಲಿ: ಭವಿಷ್ಯ ನಿಧಿ ವಂಚನೆ ಪ್ರಕರಣದ ಸಂಬಂಧಿಸಿ ಹೊರಡಿಸಲಾದ ಬಂಧನ ವಾರೆಂಟ್​ಗೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa) ಅವರು ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದ ಆರೋಪ ಮತ್ತು ವಿವಾದಕ್ಕೆ ಬಹಿರಂಗವಾಗಿ ಉತ್ತರಿಸಿದ ಕರ್ನಾಟಕದ ಮಾಜಿ ಕ್ರಿಕೆಟಿಗ, ಆರೋಪ ಹೊತ್ತಿರುವ ಕಂಪನಿಗೆ ಹಲವು ವರ್ಷಗಳ ಹಿಂದೆಯೇ ರಾಜೀನಾಮೆ ಕೊಟ್ಟಿದ್ದೇನೆ. ಕಂಪನಿಯಲ್ಲಿ ಕಾರ್ಯನಿರ್ವಾಹಕ ಪಾತ್ರವನ್ನು ನಿರ್ವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ-2 ಮತ್ತು ಕೆಆರ್​​ ಪುರಂನ ವಸೂಲಾತಿ ಅಧಿಕಾರಿ ಷಡಕ್ಷರ ಗೋಪಾಲ್ ರೆಡ್ಡಿ ಅವರು ಉತ್ತಪ್ಪ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದರು. ಸುಸ್ತಿದಾರ ಉತ್ತಪ್ಪನಿಂದ 23,36,602 ರೂಪಾಯಿಗಳನ್ನು ವಸೂಲಿ ಮಾಡಬೇಕು ಎಂದು ವಾರೆಂಟ್​​ನಲ್ಲಿ ಉಲ್ಲೇಖಿಸಿದ್ದರು. ಮಾಜಿ ಕ್ರಿಕೆಟಿಗ ಇಂದಿರಾನಗರ ಮೂಲದ ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿದ್ದ ಅವರು, ಇದೀಗ ಈ ಬಗ್ಗೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ರಾಬಿನ್ ಉತ್ತಪ್ಪ ಹೇಳಿದ್ದೇನು?

ನನ್ನ ವಿರುದ್ಧದ ಪಿಎಫ್ ವಂಚನೆ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಸ್ಟ್ರಾಬೆರಿ ಲ್ಯಾನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟೌರಿಯ ಲೈಫ್​ಸ್ಟೈಲ್​ ಬ್ರಾಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬೆರ್ರಿಸ್ ಫ್ಯಾಷನ್ ಹೌಸ್ ಜತೆಗಿನ ನನ್ನ ಸಂಬಂಧಕ್ಕೆ ಸಂಬಂಧಿಸಿ ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಕಂಪನಿಗಳೊಂದಿಗೆ ನಾನು ಸಾಲದ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದೆ. ಅದಕ್ಕಾಗಿ ಆ ಕಂಪನಿಗಳು ನನ್ನನ್ನು ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಿದ್ದವು. ಆದರೆ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ.

2018-19ರಲ್ಲಿ ನಿರ್ದೇಶಕರಾಗಿ ನೇಮಕವಾಗಿದ್ದೆ. ನನಗೆ ಯಾವುದೇ ಕಾರ್ಯನಿರ್ವಾಹಕ ಪಾತ್ರವಿರಲಿಲ್ಲ. ವ್ಯವಹಾರದ ದೈನಂದಿನ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರಲಿಲ್ಲ. ವೃತ್ತಿಪರ ಕ್ರಿಕೆಟಿಗನಾಗಿ, ಟಿವಿ ನಿರೂಪಕನಾಗಿ ಮತ್ತು ವೀಕ್ಷಕವಿವರಣೆಗಾರನಾಗಿಯೂ ನನಗೆ ಕಠಿಣ ವೇಳಾಪಟ್ಟಿ ಇದ್ದ ಕಾರಣ ಅಲ್ಲಿ ಭಾಗಿಯಾಗಲು ನನಗೆ ಸಮಯ ಅಥವಾ ಪರಿಣತಿ ಇರಲಿಲ್ಲ. ನಾನು ಇಲ್ಲಿಯವರೆಗೆ ಧನಸಹಾಯ ಮಾಡಿದ ಕಂಪನಿಗಳಲ್ಲಿ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿರಲಿಲ್ಲ ಎಂದು ಹೇಳಿದ್ದಾರೆ.

‘ನಾನು ಕಾನೂನು ಕ್ರಮ ಎದುರಿಸುವಂತಾಯ್ತು’

ದುರದೃಷ್ಟವಶಾತ್, ಈ ಕಂಪನಿಗಳು ನಾನು ನೀಡಿದ ಹಣವನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆ ನಾನು ಕಾನೂನು ಕ್ರಮಗಳನ್ನು ಎದುರಿಸಬೇಕಾಯಿತು. ಅದು ಪ್ರಸ್ತುತ ನ್ಯಾಯಾಲಯದಲ್ಲಿದೆ. ನಾನು ಹಲವು ವರ್ಷಗಳ ಹಿಂದೆ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತಪ್ಪ (39 ವರ್ಷ) ಭಾರತ ಕ್ರಿಕೆಟ್​​ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದು, ಒಟ್ಟು 59 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 7 ಅರ್ಧಶತಕ ಸೇರಿದಂತೆ 1,183 ರನ್ ಗಳಿಸಿದ್ದಾರೆ.

ಡಿಸೆಂಬರ್​ 27ರೊಳಗೆ ಉತ್ತಪ್ಪ ಬಾಕಿ ಪಾವತಿಸಬೇಕು, ಇಲ್ಲದಿದ್ದರೆ ಬಂಧನ ಸೇರಿದಂತೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರಂಟ್​ನಲ್ಲಿ ತಿಳಿಸಲಾಗಿದೆ. ಕಂಪನಿಯು ತನ್ನ ಕಾನೂನು ಬಾಧ್ಯತೆಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಬಾಧಿತರಾದ ಕಾರ್ಮಿಕರ ಭವಿಷ್ಯ ನಿಧಿ ಖಾತೆಗಳ ಇತ್ಯರ್ಥಕ್ಕೆ ಹಣ ಪಾವತಿಸದಿರುವುದು ಅಡ್ಡಿಯಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಹೇಳಿದ್ದರು. ಉತ್ತಪ್ಪ ಬಂಧಿಸುವಂತೆ ಇದೇ ತಿಂಗಳು 4ರಂದು ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದರು.

 

Whats_app_banner