ಈ 5 ರಾಶಿ ಜೋಡಿಗಳು ತುಂಬಾ ಸಂತೋಷದಿಂದ ಬಾಳ್ತಾರೆ, ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ತುಳುಕುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ 5 ರಾಶಿ ಜೋಡಿಗಳು ತುಂಬಾ ಸಂತೋಷದಿಂದ ಬಾಳ್ತಾರೆ, ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ತುಳುಕುತ್ತೆ

ಈ 5 ರಾಶಿ ಜೋಡಿಗಳು ತುಂಬಾ ಸಂತೋಷದಿಂದ ಬಾಳ್ತಾರೆ, ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ತುಳುಕುತ್ತೆ

ತಮ್ಮ ಸಂಗಾತಿಗೆ ತುಂಬಾ ಪ್ರೀತಿಯನ್ನು ನೀಡಬೇಕು, ದಾಂಪತ್ಯ ಜೀವನ ಸಂತೋಷವಾಗಿ ಇರಬೇಕೆಂದು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಆದರೆ ಸಮಯ, ಸಂದರ್ಭಗಳು ಅಂದುಕೊಂಡಂತೆ ಇರೋಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಆದರೆ ಈ 5 ರಾಶಿಯ ಜೋಡಿಗಳು ಮಾತ್ರ ಸಖತ್ ಖಷಿಯಾಗಿ ಜೀವನ ನಡೆಸುತ್ತಾರೆ.

ಜೀವನದಲ್ಲಿ ತುಂಬಾ ಸಂತೋಷದಿಂದ ಬಾಳುವ 5 ರಾಶಿಯ ದಂಪತಿಗಳ ವಿವರ ಇಲ್ಲಿದೆ.
ಜೀವನದಲ್ಲಿ ತುಂಬಾ ಸಂತೋಷದಿಂದ ಬಾಳುವ 5 ರಾಶಿಯ ದಂಪತಿಗಳ ವಿವರ ಇಲ್ಲಿದೆ.

ಮದುವೆಗೆ ಮುಂಚೆ ಪ್ರತಿಯೊಬ್ಬರೂ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ನಾನು ಮದುವೆಯಾಗುವ ಹುಡುಗ/ಹುಡುಗಿ ನನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟಪಟ್ಟಿದ್ದನ್ನು ಕೊಡಿಸಬೇಕು, ತಮ್ಮೆಲ್ಲಾ ಆಸೆಗಳನ್ನು ಪೂರೈಸಬೇಕು. ಎಲ್ಲದ್ದಕಿಂತ ಮುಖ್ಯವಾಗಿ ತುಂಬಾ ಖುಷಿಯಾಗಿ ಇರಬೇಕು ಎಂದು ಬಯಸುತ್ತಾರೆ. ಎಲ್ಲರೂ ಕೂಡ ಪ್ರೀತಿಯನ್ನು ಹಂಬಲಿಸುತ್ತಾರೆ. ದಾಂಪತ್ಯ ಜೀವನವನ್ನು ಸಂತೋಷದಿಂದ ನಡೆಸಬೇಕೆಂಬುದು ಆಸೆಯಾಗಿರುತ್ತದೆ. ಈ 5 ರಾಶಿಯ ಜೋಡಿ ತುಂಬಾ ಖುಷಿಯಾಗಿ ಬಾಳುತ್ತಾರೆ. ಇವರ ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ತುಂಬಿ ತುಳುಕುತ್ತಿರುತ್ತದೆ. ಆ ರಾಶಿಯರು ಯಾರು ಅನ್ನೋದರ ಮಾಹಿತಿ ಇಲ್ಲಿದೆ.

1. ಧನು ಮತ್ತು ಸಿಂಹ ರಾಶಿ

ಧನು ಮತ್ತು ಸಿಂಹ ರಾಶಿಯ ಜೋಡಿಗೆ ಪ್ರೀತಿಯ ವಿಚಾರದಲ್ಲಿ ನೂರಕ್ಕೆ 90 ಅಂಕಗಳು ಸಿಗುತ್ತವೆ. ಅಂದರೆ ಅಷ್ಟರ ಮಟ್ಟಿಗೆ ಇವರ ಸಾಂಸಾರಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮೆದಿ ಇರುತ್ತದೆ. ಇವರು ಎದುರಾಗುವ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಪರಿಹಾರ ಹುಡುಕುತ್ತಾರೆ. ಇವರಲ್ಲಿನ ಹೊಂದಾಣಿಕೆ ಇತರರಿಗೆ ಯಾವಾಗಲೂ ಮಾದರಿಯಾಗುತ್ತೆ. ಯಾವುದೇ ಕಾರಣಕ್ಕೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಎಲ್ಲವನ್ನು ಒಟ್ಟಾಗಿ ಎದುರಿಸುತ್ತಾರೆ. ಪರಸ್ಪರ ಮಾತುಕತೆ ನಡೆಸುತ್ತಾರೆ. ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಇಬ್ಬರು ಮಾತನಾಡಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಇವರ ಸಾಂಸಾರಿಕ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ.

2. ಕಟಕ ಮತ್ತು ಮೀನ ರಾಶಿ

ಕಟಕ ಮತ್ತು ಮೀನ ರಾಶಿ ದಂಪತಿ ಜೀವನದಲ್ಲಿ ನಂಬಲಾರದಷ್ಟು ಸಂತೋಷವಾಗಿ ಇರುತ್ತಾರೆ. ಪ್ರತಿಯೊಂದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಇವರಲ್ಲಿ ಹಾಸ್ಯ ಪ್ರಜ್ಞೆ ಜಾಸ್ತಿ ಇರುತ್ತೆ. ಕಟಕ ಮತ್ತು ಮೀನ ರಾಶಿಯ ಜೋಡಿ ಆಳವಾದ ಸಂಬಂಧವನ್ನು ಹೊಂದಿರುತ್ತಾರೆ. ಇವರದ್ದು ಲವ್ ಮ್ಯಾರೇಜ್ ಇರಲಿ ಅಥವಾ ಆರೇಂಜ್ಡ್ ಮ್ಯಾರೇಜ್ ಇರಲಿ ಜೀವನದಲ್ಲಿ ಸಂತೋಷದಿಂದ ಇರುತ್ತಾರೆ. ಇವರ ಬಂಧನ ಅದ್ಭುತವಾಗಿರುತ್ತೆ. ಯಾವುದಾದರು ವಿಷಯದಲ್ಲಿ ತಪ್ಪು ಆದರೆ ಕೂಡಲೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಾರೆ. ಹೊಂದಾಣಿಕೆಗೆ ಇವರು ಬೆಸ್ಟ್ ಕಲಪ್ ಆಗಿರುತ್ತಾರೆ.

3. ಕುಂಭ ರಾಶಿ ಮತ್ತು ಮೇಷ ರಾಶಿ

ಈ ಜೋಡಿಯೂ ಅಷ್ಟೇ ಸಾಂಸಾರಿಕ ಜೀವನದಲ್ಲಿ ತುಂಬಾ ನೆಮ್ಮದಿಯಾಗಿ ಇರುತ್ತಾರೆ. ಹೊಂದಾಣಿಕೆಯ ಸ್ವಭಾವ ಇಬ್ಬರಿಗೂ ಹೆಚ್ಚಿರುತ್ತದೆ. ಜೊತೆಗೆ ಕ್ಷಮಿಸುವ ಗುಣ ಇರುತ್ತದೆ. ಒಬ್ಬರನ್ನೊಬ್ಬರು ಹೊಗಳುತ್ತಾರೆ. ಎಂತಹ ಸವಾಲಿನ ಸಂದರ್ಭದಲ್ಲೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಒಟ್ಟಾಗಿ ಹೋರಾಡುತ್ತಾರೆ. ಪತ್ನಿಗೆ ಬೆಂಬಲವಾಗಿ ಪತ್ನಿ, ಪತ್ನಿಗೆ ಬೆಂಬಲವಾಗಿ ಪತ್ನಿ ನಿಲ್ಲುತ್ತಾರೆ. ಈ ಕಾರಣದಿಂದಲೇ ಕುಂಭ ಮತ್ತು ಮೇಷ ರಾಶಿಯ ಜೋಡಿ ಸಂತೋಷವಾಗಿರುತ್ತೆ.

4. ವೃಶ್ಚಿಕ ಮತ್ತು ವೃಷಭ ರಾಶಿ

ವೃಶ್ಚಿಕ ಮತ್ತು ವೃಷಭ ರಾಶಿಯವರದ್ದು ಕೂಡ ಅತ್ಯುತ್ತಮ ಜೋಡಿಯಾಗಿರುತ್ತೆ. ಇವರ ದಾಂಪತ್ಯ ಜೀವನದಲ್ಲಿ ಸಂತೋಷ ಹಾಗೂ ಮಾಡುವ ಪ್ರತಿ ಕೆಲಸದಲ್ಲೂ ಉತ್ಸಾಹ ಇರುತ್ತದೆ. ಗೆಲ್ಲುವ ಸ್ವಭಾವ ಇಬ್ಬರಲ್ಲೂ ಇರುತ್ತೆ. ಪರಸ್ಪರ ಹೊಂದಾಣಿಕೆ ಹೆಚ್ಚಿರುತ್ತದೆ. ಎಂತಹ ಕಷ್ಟ ಬಂದರೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಒಟ್ಟಾಗಿ ಇರುತ್ತಾರೆ.

5. ಮಿಥುನ ಮತ್ತು ತುಲಾ ರಾಶಿ

ಈ ಎರಡು ರಾಶಿಯ ಜೋಡಿಯಲ್ಲಿ ಸಾಕಷ್ಟು ಹೊಂದಾಣಿಕೆ ಇರುತ್ತದೆ. ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿರುತ್ತಾರೆ. ಪ್ರತಿಯೊಂದು ಕೆಲಸದಲ್ಲೂ ಬೆಂಬಲ ಪಡೆಯುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮುನ್ನ ಒಟ್ಟಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಪತಿಯ ಕೆಲಸಕ್ಕೆ ಪತ್ನಿ ಕೈಜೋಡಿಸುತ್ತಾರೆ. ಅದೇ ರೀತಿಯಾಗಿ ಪತ್ನಿಗೂ ಪತಿ ಸಹಾಯ ಮಾಡುತ್ತಾರೆ. ಇಬ್ಬರ ಆಲೋಚನೆಗಳು ಒಂದೇ ಆಗಿರುತ್ತವೆ. ಹೊಂದಾಣಿಕೆಯ ವಿಚಾರದಲ್ಲಿ ಮಿಥುನ ಮತ್ತು ತುಲಾ ರಾಶಿಯ ಜೋಡಿ ಕೂಡ ಬೆಸ್ಟ್ ಅಂತಲೇ ಹೇಳಲಾಗುತ್ತೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.