ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಆರಂಭಿಸಬೇಕಿದ್ದ ಉದ್ಯಮ ಹಣಕಾಸಿನ ಕೊರತೆಯಿಂದ ಮುಂದೂಡಿಕೆ, ಮನಸ್ಸಿಗೆ ಬೇಸರ: ಏಪ್ರಿಲ್‌ 13ರ ದಿನ ಭವಿಷ್ಯ

Horoscope Today: ಆರಂಭಿಸಬೇಕಿದ್ದ ಉದ್ಯಮ ಹಣಕಾಸಿನ ಕೊರತೆಯಿಂದ ಮುಂದೂಡಿಕೆ, ಮನಸ್ಸಿಗೆ ಬೇಸರ: ಏಪ್ರಿಲ್‌ 13ರ ದಿನ ಭವಿಷ್ಯ

13 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (13th April 2024 Daily Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (13th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ : ಪಂಚಮಿ 04.01 ರವರೆಗೂ ಇದ್ದು ನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಮೃಗಶಿರ ನಕ್ಷತ್ರವು ರಾತ್ರಿ 04.37 ರವರೆಗೂ ಇದ್ದು ನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.08

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: ಬೆಳಗ್ಗೆ 09.00 ರಿಂದ 10.30

ರಾಶಿಫಲ

ಸಿಂಹ

ಕುಟುಂಬದ ತಪ್ಪು ಒಪ್ಪುಗಳನ್ನು ತಿದ್ದುವಿರಿ. ಉದ್ಯೋಗದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಗುಣವಿರುತ್ತದೆ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಹೊಸ ಅವಕಾಶಗಳಿಗಾಗಿ ಕಾಯುವಿರಿ. ಕಾದು ನೋಡುವ ತಂತ್ರವೂ ಉತ್ತಮ ಫಲಗಳನ್ನು ನೀಡುತ್ತವೆ. ನಿಮ್ಮ ಮಕ್ಕಳ ಉದ್ಯೋಗದಲ್ಲಿ ಎದುರಾಗುವ ಬದಲಾವಣೆಗಳು ಅನುಕೂಲಕರವಾಗಿರುತ್ತದೆ. ನಿಮಗೆ ವಾಣಿಜ್ಯೋದ್ಯಮದಲ್ಲಿ ಅವಕಾಶ ದೊರೆಯುತ್ತದೆ. ಎದುರಾಗುವ ಕೆಲಸ ಕಾರ್ಯಗಳಲ್ಲಿ ನಿಶ್ಚಿತವಾಗಿ ಗೆಲ್ಲುವಿರಿ. ಆರಂಭಿಸಬೇಕಿದ್ದ ಉದ್ಯಮ ಹಣದ ಕೊರತೆ ಕಾರಣ ಮುಂದೂಡಲ್ಪಡುತ್ತದೆ. ಉದ್ಯೋಗದಲ್ಲಿ ಸಹ ಕಾರ್ಮಿಕರ ಸಹಕಾರ ನಿಮಗೆ ದೊರೆಯುತ್ತದೆ. ಚಿಂತೆ ಇಲ್ಲದೆ ಜೀವನ ನಿರ್ವಹಣೆ ಮಾಡುವಿರಿ. ವಾಸ ಸ್ಥಳ ಬದಲಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ಕನ್ಯಾ

ಕುಟುಂಬದಲ್ಲಿ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಉದ್ಯೋಗದಲ್ಲಿ ಅಸಾಧಾರಣ ಸವಾಲುಗಳು ಎದುರಾಗಲಿದೆ. ಮನಸ್ಸಿಗೆ ನೆಮ್ಮದಿ ಇರದು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಮನಸ್ಸು ಬದಲಾಯಿಸದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಜೌಗು ಪ್ರದೇಶದಲ್ಲಿನ ಮನೆಯನ್ನು ಕೊಳ್ಳುವಿರಿ. ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ವಿಶೇಷ ವ್ಯಕ್ತಿ ಒಬ್ಬರ ಪರಿಚಯ ಹೊಸ ಚೈತನ್ಯವನ್ನು ಉಂಟುಮಾಡಲಿದೆ. ಹಣದ ಕೊರತೆ ಕಡಿಮೆ ಆಗಲಿದೆ. ದಂಪತಿಗಳಲ್ಲಿ ಅನ್ಯೋನ್ಯತೆ ಮೂಡಲಿದೆ. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಆರೋಗ್ಯದಲ್ಲಿ ಏರಿಳಿತ ಇರಲಿದೆ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ : ಬಿಳಿ

ತುಲಾ

ಕುಟುಂಬದಲ್ಲಿನ ದೈನದಿಂದ ಜೀವನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉತ್ತಮ ಕಾರ್ಯ ನಿರ್ವಹಣೆಯ ಬಗ್ಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಸ್ವಂತ ಕೆಲಸ ಕಾರ್ಯಗಳು ಸುಲಭಗತಿಯಲ್ಲಿ ಪೂರ್ಣಗೊಳ್ಳುತ್ತವೆ. ಮನಬಿಚ್ಚಿ ಕೇಳಿದರೆ ಹಣದ ಸಹಾಯ ದೊರೆಯುತ್ತದೆ. ಸೋದರ ಮತ್ತು ನಿಮ್ಮ ಪತ್ನಿಯ ನಡುವೆ ವಾದ ವಿವಾದಗಳು ಇರಲಿವೆ. ಆತ್ಮೀಯರ ಜೀವನವನ್ನು ರೂಪಿಸುವ ಯೋಜನೆಗಳನ್ನು ರೂಪಿಸುವಿರಿ. ಒತ್ತಡ ಉಂಟಾದರೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳದಿರಿ. ವಿದ್ಯಾರ್ಥಿಗಳು ಉತ್ತಮ ಫಲಗಳನ್ನು ಪಡೆಯುತ್ತಾರೆ. ಹೊಸ ವ್ಯಾಪಾರ ಆರಂಭಿಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಇರಲಿವೆ. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಬೂದು

ವೃಶ್ಚಿಕ

ಎದುರಾಗುವ ಸನಿವೇಶವನ್ನು ಅರ್ಥ ಮಾಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುವಿರಿ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಬೇಡದ ವಿಚಾರಗಳಿಗೆ ಹಣ ಖರ್ಚು ಮಾಡುವಿರಿ. ದಿನಾಂತ್ಯಕ್ಕೆ ಹಣದ ಕೊರತೆ ಅನುಭವಿಸುವಿರಿ. ಸಹನೆ ಕಳೆದುಕೊಂಡು ದುಡುಕುತನದಿಂದ ಮಾತನಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಕುಟುಂಬದವರಿಂದಲೇ ವಿರೋಧ ಎದುರಿಸುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಜಯ ಲಬಿಸುತ್ತದೆ. ಉಸಿರಿಗೆ ಸಂಬಂಧಿಸಿದ ತೊಂದರೆ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ತಂದೆಗೆ ಅನಾವಶ್ಯಕ ಖರ್ಚುಗಳು ಬರಲಿವೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಅಧೀನದಲ್ಲಿ ಇರುವ ನೌಕರರ ಜೊತೆ ಬಿನ್ನಾಭಿಪ್ರಾಯ ಉಂಟಾಗುತ್ತದೆ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).