Horoscope Today: ಪ್ರೀತಿಯ ವಿಚಾರದಲ್ಲಿ ನಿಮಗೆ ಉತ್ತಮ ದಿನ, ಹಣದಲ್ಲಿ ಅದೃಷ್ಟವಂತರು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ
Horoscope Today: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (17th September 2024 Horoscope).
Horoscope Today: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಗ್ರಹದಿಂದ ಆಳಲ್ಪಡುತ್ತದೆ. ಜಾತಕವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. 2024ರ ಸೆಪ್ಟೆಂಬರ್ 17 ರ ಮಂಗಳವಾರದ ದಿನ ಭವಿಷ್ಯವನ್ನು ತಿಳಿಯೋಣ. ಮಂಗಳವಾರ ಬಜರಂಗ ಬಲಿಗೆ ಸಮರ್ಪಿತವಾಗಿದೆ. ಈ ದಿನ ಭಜರಂಗಬಲಿಯನ್ನು ಪೂಜಿಸಲಾಗುತ್ತದೆ. ಹನುಮಂತನನ್ನೂ ಪೂಜಿಸಲಾಗುತ್ತೆ. ಈ ಪೂಜೆಯಿಂದ ನಿಮ್ಮ ಜೀವನದ ಎಲ್ಲಾ ಅಡೆತಡೆಗಳಿಂದ ಮುಕ್ತಿ ಪಡೆಯುತ್ತೀರಿ. ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಇರುತ್ತೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್ 17 ರ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ, ನಂತರ ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೆಪ್ಟೆಂಬರ್ 17 ರ ಮಂಗಳವಾರ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ? ಯಾವ ರಾಶಿಚಕ್ರ ಚಿಹ್ನೆಗಳು ಜಾಗರೂಕರಾಗಿರಬೇಕು ಎಂಬುದನ್ನು ತಿಳಿಯೋಣ. ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ರಾಶಿ ಫಲ ಇಲ್ಲಿ ನೀಡಲಾಗಿದೆ.
ಸಿಂಹ ರಾಶಿ
ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತೀರಿ. ಸಂಗಾತಿಗೆ ಸಂಪೂರ್ಣ ಬೆಂಬಲ ಸಿಗಲಿದೆ. ಸ್ನೇಹಿತರ ಸಹಾಯದಿಂದ ವ್ಯವಹಾರವನ್ನು ವಿಸ್ತರಿಸುವ ಸಾಧ್ಯತೆಗಳಿವೆ. ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತೀರಿ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶಾರೀರಿಕ ಸುಖಗಳು ಹೆಚ್ಚಾಗುತ್ತವೆ. ಪೋಷಕರಿಗೆ ಬೆಂಬಲ ನೀಡುತ್ತೀರಿ. ಕೆಟ್ಟ ಕೆಲಸಗಳಿಂದ ದೂರ ಇರಿ. ಇಲ್ಲದಿದ್ದರೆ ನಿಮ್ಮ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಕಾಗುತ್ತೆ. ಶೀಘ್ರದಲ್ಲೇ ದೊಡ್ಡ ಮಟ್ಟದ ಖರೀದಿಸಲು ಯೋಜಿಸುತ್ತಿದ್ದೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯರು ಕೆಲಸದ ಸ್ಥಳದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ, ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರೀತಿಯ ಜೀವನವು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಉತ್ಸಾಹ ಇರುತ್ತದೆ. ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಹಣಕಾಸಿನ ವಿಷಯಗಳಲ್ಲಿ ಕೆಲವು ಏರಿಳಿತಗಳನ್ನು ಕಾಣುತ್ತೀರಿ. ಆದರೆ ಅದರ ಬಗ್ಗೆ ಚಿಂತಿಸದೆ ಧೈರ್ಯದಿಂದ ಮುನ್ನಡೆಯುತ್ತೀರಿ. ವಿಷಯಗಳು ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ. ಕೆಲಸದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ನೀವು ಕೆಲವು ಯೋಜನೆಗಳಿಗಾಗಿ ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡಬೇಕಾಗಬಹುದು.
ತುಲಾ ರಾಶಿ
ಪ್ರೀತಿಯ ವಿಷಯದಲ್ಲಿ ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಅವಿವಾಹಿತರಿಗೆ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆ ಇದೆ. ದೀರ್ಘಾವಧಿಯ ಹಣಕಾಸಿನ ಗುರಿಗಳ ಮೇಲೆ ಕೇಂದ್ರೀಕರಿಸಿ, ಅವುಗಳನ್ನು ಸಾಧಿಸಲು ಸಣ್ಣ ಪ್ರಯತ್ನಗಳನ್ನು ಮಾಡಿ. ಅವಸರದಲ್ಲಿ ಹಣವನ್ನು ಖರ್ಚು ಮಾಡಲು ನಿರ್ಧರಿಸಬೇಡಿ. ಬುದ್ಧಿವಂತಿಕೆಯಿಂದ ಮಾಡಿದ ದೀರ್ಘಕಾಲೀನ ಹೂಡಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಆರೋಗ್ಯಕ್ಕೆ ಆದ್ಯತೆ ನೀಡಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ಪ್ರದೇಶದಲ್ಲಿ ಸುಧಾರಣೆ ಕಾಣುತ್ತೀರಿ. ಮಾತಿನಲ್ಲಿ ಕಠೋರತೆಯ ಪರಿಣಾಮವನ್ನು ಎದುರಿಸಬೇಕಾಗುತ್ತೆ.
ವೃಶ್ಚಿಕ ರಾಶಿ
ಪ್ರೇಮ ಜೀವನದಲ್ಲಿ ಹೊಸ ಪ್ರೀತಿ ಮತ್ತು ಉತ್ಸಾಹ ಮೂಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪರ್ವತ ಪ್ರದೇಶದಲ್ಲಿ ನೀವು ಪ್ರಣಯ ವಾರಾಂತ್ಯವನ್ನು ಯೋಜಿಸಬಹುದು ಅಥವಾ ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲ ನೀಡುತ್ತದೆ. ವೃತ್ತಿಪರ ಜೀವನದಲ್ಲಿ ಸಾಕಷ್ಟು ಯಶಸ್ಸು ಇರುತ್ತೆ, ಪ್ರಗತಿಯ ಹಾದಿ ಸುಲಭವಾಗುತ್ತದೆ. ಅನೇಕ ಹೂಡಿಕೆ ಆಯ್ಕೆಗಳ ಮೇಲೆ ಬುದ್ಧಿವಂತಿಕೆಯಿಂದ ಕೇಂದ್ರೀಕರಿಸಲು ಉತ್ತಮ ದಿನ. ಮಾಡಿದ ಚಿಂತನಶೀಲ ಹೂಡಿಕೆಗಳು ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ತರುತ್ತವೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತವೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.