ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮಾತು ಕಡಿಮೆ ಮಾಡಿದಷ್ಟೂ ಉತ್ತಮ, ಉದರ ಸಂಬಂಧಿ ಸಮಸ್ಯೆಗಳು ಕಾಡಲಿವೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

Horoscope Today: ಮಾತು ಕಡಿಮೆ ಮಾಡಿದಷ್ಟೂ ಉತ್ತಮ, ಉದರ ಸಂಬಂಧಿ ಸಮಸ್ಯೆಗಳು ಕಾಡಲಿವೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

22 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (22nd April 2024 2024 Daily Horoscope).

ಏಪ್ರಿಲ್‌ 22ರ ದಿನಭವಿಷ್ಯ
ಏಪ್ರಿಲ್‌ 22ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(22nd April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ: ಚತುರ್ದಶಿ ರಾತ್ರಿ 2.24 ರವರೆಗೂ ಇರುತ್ತದೆ. ಅನಂತರ ಹುಣ್ಣಿಮೆ ಆರಂಭವಾಗುತ್ತದೆ.

ನಕ್ಷತ್ರ: ಹಸ್ತ ನಕ್ಷತ್ರವು ಸಂಜೆ 7.19 ರವರೆಗೂ ಇರುತ್ತದೆ. ಅನಂತರ ಚಿತ್ತಾ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.04

ಸೂರ್ಯಾಸ್ತ: ಸಂಜೆ 6.32

ರಾಹುಕಾಲ: ಬೆಳಿಗ್ಗೆ 7.41 ರಿಂದ ಬೆಳಿಗ್ಗೆ 9.14

ಧನಸ್ಸು

ಕಷ್ಟದ ಸನ್ನಿವೇಶವನ್ನು ಬುದ್ಧಿವಂತಿಕೆಯಿಂದ ಸಮರ್ಥವಾಗಿ ಎದುರಿಸುವಿರಿ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡಲಿದ್ದಾರೆ. ನಿಮ್ಮ ಮುಂಗೋಪವನ್ನು ಕಡಿಮೆ ಮಾಡಿಕೊಂಡಲ್ಲಿ ಅನುಕೂಲ ಹೆಚ್ಚುತ್ತದೆ. ಬಯಸದೇ ಹೋದರೂ ನಿಮಗೆ ಜನರ ಸಹಾಯ ದೊರೆಯುತ್ತದೆ. ಸ್ಥಿರವಾದ ಮನಸ್ಸನ್ನು ರೂಪಿಸಿಕೊಳ್ಳಿ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಬೋಧನಾ ಸಿಬ್ಬಂದಿಗಳಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತವೆ. ಕಾನೂನು ಪ್ರಕ್ರಿಯೆಯೊಂದರಲ್ಲಿ ಜಯ ಗಳಿಸುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನಕೊಳ್ಳುವಿರಿ. ಯಾರೊಂದಿಗೂ ಜಗಳ ಮಾಡದಿರಿ. ಶಾಂತಿಯಿಂದ ಶುಭವಿದೆ.

ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು ಬಣ್ಣ

ಮಕರ

ಸೋದರನ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ರಕ್ತದ ಒತ್ತಡದ ತೊಂದರೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯಿರಿ. ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರ ಸಹಾಯ ಬೇಕೆನಿಸುತ್ತದೆ. ಕುಟುಂಬದ ವಿವಾಹವೊಂದು ಕೆಲದಿನಗಳವರೆಗೆ ಮುಂದೂಡಲ್ಪಡುತ್ತದೆ. ನಿಮ್ಮ ವಂಶದ ವೃತ್ತಿಯೊಂದು ನಿಮ್ಮ ನೆರವಿಗೆ ಬರುತ್ತದೆ. ಭೂವಿವಾದದಲ್ಲಿ ನಿಮಗೆ ಜಯ ಲಭಿಸುತ್ತದೆ. ವ್ಯಾಪಾರದಲ್ಲಿ ಲಾಭವಿರುತ್ತದೆ. ಹಣದ ವ್ಯವಹಾರ ವ್ಯವಹಾರದಲ್ಲಿ ಹಿನ್ನೆಡೆ ಲಭಿಸುತ್ತದೆ. ಕುಟುಂಬದಲ್ಲಿ ಮಂಗಳಕಾರ್ಯವೊಂದನ್ನು ನೆರವೇರಿಸುವಿರಿ. ಮಾತು ಕಡಿಮೆ ಮಾಡಿ ಮಾಡಬೇಕಾದ ಕೆಲಸಗಳ ಬಗ್ಗೆ ಗಮನ ನೀಡಿ. ಅನಾವಶ್ಯಕ ಚಿಂತೆ ಮಾಡುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಕುಂಭ

ಸೋದರ ಅಥವಾ ಸೋದರಿಯ ಪಾಲುದಾರಿಕೆಯಲ್ಲಿ ಭೂ ವ್ಯವಹಾರವನ್ನು ಮಾಡುವಿರಿ. ತಡವಾದರೂ ಉತ್ತಮ ಆದಾಯ ದೊರೆಯುತ್ತದೆ. ಮೌನ ತೊರೆದು ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡಿ. ಆತ್ಮವಿಶ್ವಾಸದ ಕೊರತೆಯ ಕಾರಣ ತಪ್ಪು ನಿರ್ಧಾರವನ್ನು ಕೈಗೊಳ್ಳುವಿರಿ. ನಿಮ್ಮಲ್ಲಿನ ವಿಶೇಷವಾದ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವೊಂದು ದೊರೆಯಲಿದೆ. ಗಾಯಕರು ಮತ್ತು ಸಂಗೀತಗಾರರು ವಿಶೇಷವಾದ ಗೌರವವನ್ನು ಪಡೆಯುತ್ತಾರೆ. ದೊರೆವ ಅವಕಾಶವನ್ನು ಬಳಸಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಇರುತ್ತದೆ. ಮನ:ಶಾಸ್ತ್ರವನ್ನು ಓದುವವರಿಗೆ ವಿಶೇಷವಾದ ಅನುಕೂಲವಿದೆ. ಮನೆ ಮಗಳಿಗೆ ವಿಶೇಷವಾದ ಅನುಕೂಲತೆ ಕಲ್ಪಿಸುವಿರಿ.

ಪರಿಹಾರ: ತಾಯಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮೀನ

ಆತ್ಮವಿಶ್ವಾಸದಿಂದ ಆಡುವ ಮಾತಿನಲ್ಲಿ ವಿಶೇಷವಾದ ಶಕ್ತಿ ಇರುತದೆ. ನೀವು ಆಡುವ ಮಾತುಗಳು ಭವಿಷ್ಯದಲ್ಲಿ ನಿಜವಾಗುತ್ತವೆ. ಕಣ್ಣಿನ ದೋಷವಿರುತ್ತದೆ. ನೀವು ತೆಗೆದುಕೊಳ್ಳುವ ದಿಟ್ಟ ನಿರ್ಧಾರ ನಿಮ್ಮ ಜೀವನದ ಹಾದಿಯನ್ನು ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಹೊಸ ವಿಚಾರಗಳ ಬಗ್ಗೆ ಅಧ್ಯಯನ ಮಾಡುವಿರಿ. ವಂಶಾಧಾರಿತ ವೃತ್ತಿಯನ್ನು ಆರಂಭಿಸುವಿರಿ. ವಿಶೇಷಚೇತನರಿಗೆ ಸಹಾಯ ಮಾಡುವಿರಿ. ಸರ್ಕಾರದಿಂದ ವಿಶೇಷ ಧನಸಹಾಯ ದೊರೆಯುತ್ತದೆ. ನಿಮ್ಮ ಖರ್ಚಿಗೆ ಸಮನಾದ ಆದಾಯ ಇರುತ್ತದೆ. ಹೊಟ್ಟೆಗೆ ಸಂಬಂಧಿಸಿದ ದೋಷ ನಿಮ್ಮನ್ನು ಕಾಡಲಿದೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಿರಿ. ಅನಾವಶ್ಯಕವಾಗಿ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ.

ಪರಿಹಾರ: ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).