Horoscope Today: ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ, ವಿರೋಧಿಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ; ಮಾರ್ಚ್ 26ರ ರಾಶಿಫಲ
26 ಮಾರ್ಚ್ 2024, ಮಂಗಳವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (26th March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (26th March Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ ಋತು-ಫಾಲ್ಗುಣ ಮಾಸ-ಕೃಷ್ಣಪಕ್ಷ-ಮಂಗಳವಾರ
ತಿಥಿ : ಪಾಡ್ಯ 01.15 ರವರೆಗುಗೂ ಇದ್ದು ನಂತರ ಬಿದಿಗೆ ಆರಂಭವಾಗಲಿದೆ.
ನಕ್ಷತ್ರ : ಹಸ್ತ ನಕ್ಷತ್ರವು 12.13 ರವರೆಗೂ ಇದ್ದು ನಂತರ ಚಿತ್ತ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಗ್ಗೆ 06.21
ಸೂರ್ಯಾಸ್ತ: ಸಂಜೆ 06.30
ರಾಹುಕಾಲ : 03.00 ರಿಂದ 4.30
ರಾಶಿಫಲ
ಸಿಂಹ
ತಾನೆ ದೊಡ್ಡವನೆಂಬ ಭಾವನೆ ನಿಮ್ಮಲ್ಲಿ ಉಂಟಾಗುತ್ತದೆ. ಯೋಚಿಸದೆ ಆಡುವ ಮಾತುಗಳು ತಪ್ಪು ಅರ್ಥವನ್ನು ಕಲ್ಪಿಸುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ರಾಜಿ ಒಪ್ಪುವುದಿಲ್ಲ. ವ್ಯಾಪಾರ ವ್ಯವಹಾರಲ್ಲಿ ವಿವಾದವೊಂದು ಎದುರಾಗಲಿದೆ. ಪ್ರತಿ ವಿಷಯದಲ್ಲಿಯೂ ನಿಮ್ಮದೇ ಅಂತಿಮ ನಿರ್ಧಾರ ಆಗಲಿದೆ. ವಂಶದ ಹಿರಿಯರನ್ನು ಬೇಟಿ ಮಾಡುವ ಅವಕಾಶ ದೊರೆಯುತ್ತದೆ. ಸ್ವಗೃಹ ಭೂಲಾಭವಿದೆ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ವಿದ್ಯಾರ್ಥಿಗಳು ತಮ್ಮೆಲ್ಲಾ ಕೆಲಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅನ್ಯರ ಹಣಕಾಸಿನ ವಿಚಾರದಲ್ಲಿ ಮನೆಯಲ್ಲಿ ವಾದ ವಿವಾದಗಳು ಉಂಟಾಗಲಿವೆ.
ಪರಿಹಾರ : ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ತೊಡುಗೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ತಿಳಿ ಹಸಿರು
ಕನ್ಯಾ
ಅತಿಯಾಗಿ ಮಾತನಾಡುವುದನ್ನು ಕಡಿಮೆ ಮಾಡಿರಿ. ಪುರಾಣ ಪುಣ್ಯಕತೆ ಕುಟುಂಬದ್ದಲ್ಲಿ ಬೇಸರ ದೂರ ಮಾಡುತ್ತದೆ. ತಪ್ಪು ಮಾಹಿತಿಯಿಂದ ಉದ್ಯೋಗದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ಮುಂದಿನ ಯೋಜನೆ ರೂಪಿಸುತ್ತಾರೆ. ಸೋದರನಿಗೆ ದೂರದ ಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ಬರಹಗಾರರಿಗೆ ವಿಶೇಷವಾದ ಗೌರವಾದರಗಳು ಲಭಿಸುತ್ತವೆ. ಭೂ ಸಂಬಂಧಿತ ವ್ಯವಹಾರಗಳು ನಿಮಗೆ ಅನುಕೂಲಕರವಲ್ಲ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆಸಕ್ತಿ ಉಂಟಾಗಲಿದೆ. ಹಿಂದಿನ ಹಣದ ವಿವಾದವೊಂದು ದೂರಾಗಲಿದೆ. ಸೋದರಿಯ ಜೀವನದಲ್ಲಿನಲ್ಲಿನ ಸಮಸ್ಯೆಗಳು ಬಹುಕಾಲ ಇರದು.
ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನಸುಗೆಂಪು
ತುಲಾ
ಕುಟುಂಬಕ್ಕಾಗಿ ವಿಶ್ರಾಂತಿ ಇಲ್ಲದೆ ದುಡಿಯುವಿರಿ. ಬಿಡುವು ದೊರೆತಲ್ಲಿ ಸಮಾಜಸೇವೆಯಲ್ಲಿ ತೊಡಗುವಿರಿ. ಉದ್ಯೋಗದಲ್ಲಿನ ತೊಂದರೆ ದೂರವಾಗಲಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವರು. ಪಾಲುಗಾರಿಕೆಯ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಇರುತ್ತದೆ. ಸ್ನೇಹಿತರೊಂದಿಗೆ ಹಣಕಾಸಿನ ಬಗ್ಗೆ ಭಿನಾಭಿಪ್ರಾಯ ಇರುತ್ತದೆ. ದಂಪತಿಗಳ ನಡುವೆ ಆತ್ಮೀಯತೆ ಮೂಡುತ್ತದೆ. ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ತಂದೆಗೆ ಸಂಬಂಧಿಸಿದ ಆಸ್ತಿಯ ವಿವಾದಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಸಾಲದ ವ್ಯವಹಾರದಿಂದ ಆತ್ಮೀಯರು ದೂರವಾಗಬಹುದು. ಮಕ್ಕಳನ್ನು ಒತ್ತಡಕ್ಕೆ ದೂಡದಿರಿ. ಬಂಧು ವರ್ಗದಿಂದ ಶುಭ ವರ್ತಮಾನ ಬರಲಿದೆ.
ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ವೃಶ್ಚಿಕ
ಕುಟುಂಬದ ವ್ಯವಹಾರದಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ. ನೆಮ್ಮದಿಯ ಕೊರತೆ ಇರುತ್ತದೆ. ಉದ್ಯೋಗದಲ್ಲಿನ ಅನಾವಶ್ಯಕ ವಾದ ವಿವಾದಗಳು ದೂರಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಗಳಿಸುವಿರಿ. ಕಲಿಕೆಯ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುತ್ತದೆ. ಮನೆತನದ ಆಸ್ತಿ ಕಾಪಾಡುವಲ್ಲಿ ಯಶಸ್ವಿಯಾಗುವಿರಿ. ಆದಾಯದಲ್ಲಿನ ಕೊರತೆಯನ್ನು ಸರಿಪಡಿಸಲು ಸಣ್ಣ ವ್ಯಾಪಾರವನ್ನು ಆರಂಭಿಸುವಿರಿ. ಅರಿವಿಲ್ಲದೆ ವಿವಾದಿತ ಭೂಮಿಯನ್ನು ಕೊಳ್ಳುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಬೇಸರದಿಂದ ದೂರವಾಗಲು ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಆಹಾರ ಸೇವನೆಯಲ್ಲಿ ಮಿತಿ ಇರಲಿ. ಸಾಲವಾಗಿ ಹಣ ನೀಡುವ ಮುನ್ನ ಯೋಚಿಸಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).