Solar Eclipse: 2025 ರಲ್ಲಿ ಎಷ್ಟು ಸೂರ್ಯ ಗ್ರಹಣಗಳು ಸಂಭವಿಸಲಿವೆ; ದಿನಾಂಕ, ಸಮಯ ಸೇರಿ ಪ್ರಮುಖ 5 ವಿಷಯಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Solar Eclipse: 2025 ರಲ್ಲಿ ಎಷ್ಟು ಸೂರ್ಯ ಗ್ರಹಣಗಳು ಸಂಭವಿಸಲಿವೆ; ದಿನಾಂಕ, ಸಮಯ ಸೇರಿ ಪ್ರಮುಖ 5 ವಿಷಯಗಳಿವು

Solar Eclipse: 2025 ರಲ್ಲಿ ಎಷ್ಟು ಸೂರ್ಯ ಗ್ರಹಣಗಳು ಸಂಭವಿಸಲಿವೆ; ದಿನಾಂಕ, ಸಮಯ ಸೇರಿ ಪ್ರಮುಖ 5 ವಿಷಯಗಳಿವು

2025ರ ಕ್ಯಾಲೆಂಡರ್ ಗಳ ಪ್ರಕಾರ, 2025 ರಲ್ಲಿ 2 ಗ್ರಹಣಗಳಿವೆ. ಎರಡೂ ಗ್ರಹಣಗಳು ಬಹಳ ವಿಶೇಷ ದಿನಾಂಕದಂದು ನಡೆಯುತ್ತಿವೆ. ಗ್ರಹದ ದಿನ ಏನು ದಾನ ಮಾಡಬೇಕು ಎಂಬುದು ಸೇರಿದಂತೆ ಮುಂದಿನ ವರ್ಷದ ಗ್ರಹಣಗಳಿಗೆ ಸಂಬಂಧಿಸಿದ 5 ಪ್ರಮುಖ ವಿಷಯಗಳನ್ನು ತಿಳಿಯಿರಿ.

2025ರ ಸೂರ್ಯ ಗ್ರಹಣಗಳ ಕುರಿತ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
2025ರ ಸೂರ್ಯ ಗ್ರಹಣಗಳ ಕುರಿತ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

2025ರಲ್ಲಿ ಸೂರ್ಯಗ್ರಹಣ: 2025ರ ಹೊಸ ವರ್ಷದಲ್ಲಿ ಎರಡು ಸೂರ್ಯಗ್ರಹಣಗಳು ಸಂಭವಿಸಲಿವೆ. 2025ರ ಮಾರ್ಚ್ 29 ರಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಆ ನಂತರ ಅಂದರೆ 2025ರ ಸೆಪ್ಟೆಂಬರ್ 21 ರಂದು ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಗ್ರಹಣವು ಖಗೋಳ ವಿದ್ಯಮಾನವಾಗಿದ್ದು, ಇದರಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ಬರುತ್ತಾನೆ. ಖಗೋಳ ವಿದ್ಯಮಾನವು ಕೇವಲ ದೃಶ್ಯ ಮಾತ್ರವಲ್ಲ, ವಿಶ್ವದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಖಗೋಳ ಮಹತ್ವವನ್ನು ಹೊಂದಿದೆ. 2025 ರಲ್ಲಿ ಸಂಭವಿಸುವ ಎರಡೂ ಸೂರ್ಯಗ್ರಹಣಗಳು ಧಾರ್ಮಿಕ ದೃಷ್ಟಿಕೋನದಿಂದ ಹೆಚ್ಚಿನ ಮಹತ್ವವನ್ನು ಹೊಂದಿರುವ ದಿನಾಂಕಗಳಲ್ಲಿ ಸಂಭವಿಸುತ್ತಿವೆ ಎಂಬುದು ವಿಶೇಷ. ಮೊದಲನೆಯದಾಗಿ ಎರಡೂ ಗ್ರಹಣಗಳು ಭಾಗಶಃ ಗ್ರಹಣಗಳಾಗಿವೆ. 2025 ರ ಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು ಇಲ್ಲಿವೆ.

  1. 2025 ರ ಮೊದಲ ಸೂರ್ಯಗ್ರಹಣವು 2025 ರ ಮಾರ್ಚ್ 29 ರಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಲಿದೆ. ಅಂದು ಬೆಳಿಗ್ಗೆ 08:50 ರಿಂದ ಮಧ್ಯಾಹ್ನ 12:43 ರ ಸಮಯದಲ್ಲಿ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಾಗಿ ಯುರೋಪ್, ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಆರ್ಕ್ಟಿಕ್ ಮಹಾಸಾಗರದಲ್ಲಿ ಈ ಗ್ರಹಣ ಗೋಚರಿಸಲಿದೆ.
  2. 2025ರ ಸೆಪ್ಟೆಂಬರ್ 21 ರಂದು ಎರಡನೇ ಸೂರ್ಯ ಗ್ರಹಣ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಲಿದೆ. ಅಂದು ಬೆಳಿಗ್ಗೆ 5:29 ರಿಂದ 9:53 ರವರೆಗೆ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿಯೂ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರದಲ್ಲಿ ಸೂರ್ಯ ಗ್ರಹಣ ಗೋಚರಿಸುತ್ತದೆ.
  3. ಪಂಚಾಂಗದ ಪ್ರಕಾರ, ಮೊದಲ ಗ್ರಹಣವು ಚೈತ್ರ ಅಮಾವಾಸ್ಯೆಯ ದಿನದಂದು ಮತ್ತು ಎರಡನೇ ಸೂರ್ಯಗ್ರಹಣವು ಪಿತೃಪಕ್ಷದ ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸಂಭವಿಸುತ್ತಿದೆ. ಎರಡೂ ದಿನಾಂಕಗಳು ತುಂಬಾ ವಿಶೇಷ. ಚೈತ್ರ ನವರಾತ್ರಿಯು ಚೈತ್ರ ಅಮಾವಾಸ್ಯೆಯ ನಂತರ ಪ್ರಾರಂಭವಾಗುತ್ತದೆ. ಪೂರ್ವಜರನ್ನು ಸರ್ವ ಪಿತೃ ಅಮಾವಾಸ್ಯೆಯಂದು ಕಳುಹಿಸಲಾಗುತ್ತದೆ.
  4. ಮೊದಲ ಸೂರ್ಯಗ್ರಹಣದ ದಿನದಂದು ಶನಿ ಅಮಾವಾಸ್ಯೆಯೂ ಇದೆ. ಈ ದಿನ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸುತ್ತಾನೆ. ಶನಿಯ ಸಂಚಾರವು ತುಂಬಾ ವಿಶೇಷವಾಗಿರುತ್ತದೆ, ಏಕೆಂದರೆ ಶನಿ ಸ್ವರಾಶಿಯನ್ನು ತೊರೆದು ಗುರುವಿನ ರಾಶಿಚಕ್ರ ಚಿಹ್ನೆಯನ್ನು ಪ್ರವೇಶಿಸುತ್ತಿದ್ದಾನೆ, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
  5. ಶನಿ ಅಮಾವಾಸ್ಯೆ, ಚೈತ್ರ ಅಮಾವಾಸ್ಯೆಯ ದಿನದಂದು, ಸೂರ್ಯಗ್ರಹಣ ಸಂಭವಿಸಿದಾಗ ದಾನದ ಫಲ ಹೆಚ್ಚಾಗುತ್ತದೆ. ಈ ದಿನ ಸ್ನಾನ ಮಾಡಿ ದಾನ ಮಾಡಬೇಕು. ಪ್ರತಿಯೊಂದು ದಾನವು ಸಾಕಷ್ಟು ಫಲವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಎರಡೂ ದಿನಗಳಲ್ಲಿ ಗ್ರಹಣದ ಜೊತೆಗೆ ಬಡವರಿಗೆ ದಾನ ಮಾಡಬೇಕು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.